ಹಮಾಸ್ ಉಗ್ರರಿಂದ ಹತಳಾದ ಮಗಳನ್ನು Apple ವಾಚ್, ಫೋನ್ ಬಳಸಿ ಪತ್ತೆ!
Posted On October 17, 2023
0
24 ವರ್ಷ ವಯಸ್ಸಿನ ಡೇನಿಯಲ್ ಎನ್ನುವ ಯುವತಿ ದಕ್ಷಿಣ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ನೋವಾ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಅಲ್ಲಿ ಹಲವು ಯುವತಿಯರನ್ನು ಅತ್ಯಾಚಾರ ಮಾಡಿ ಭೀಭತ್ಯವಾಗಿ ಕೊಲ್ಲಲಾಗಿದೆ. ಆ ದಾಳಿಯಲ್ಲಿ ಡೇನಿಯನ್ ಮೃತಪಟ್ಟಿದ್ದಾಳೆ. ಈಕೆಯ ತಂದೆ ಅಮೇರಿಕಾದಲ್ಲಿ ಉದ್ಯಮಿಯಾಗಿದ್ದು, ಈ ಯುದ್ಧದ ವಿಷಯ ತಿಳಿದ ಕೂಡಲೇ ಮಗಳಿಗೆ ಕರೆ ಮಾಡಿದ್ದಾರೆ. ಆದರೆ ಏನೂ ಪ್ರತಿಕ್ರಿಯೆ ಇರಲಿಲ್ಲ. ಬಹುಶ: ಬಂಡುಕೋರರು ಅಪಹರಿಸಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ನಂತರ ಆಕೆ ಸಾವಿಗೀಡಾಗಿದ್ದಾಳೆ ಎಂದು ಮಾಹಿತಿ ತಿಳಿದಿದೆ.
ಆಕೆಯ ತಂದೆ ಅವಳನ್ನು ಪತ್ತೆ ಹಚ್ಚಲು ಇಸ್ರೇಲಿಗೆ ತೆರಳಿದರು. ಅಲ್ಲಿ ಮೂರೇ ಗಂಟೆಯಲ್ಲಿ ಆಕೆ ಇದ್ದ ಕಾರನ್ನು ಹುಡುಕಲು ಸಾಧ್ಯವಾಯಿತು. ಕಾರನ್ನು ಪತ್ತೆಹಚ್ಚಿದಾಗ ಅದರಲ್ಲಿ ಕೆಲವು ಸಾಮಾನುಗಳು ಸಿಕ್ಕಿದವು. ಕ್ರ್ಯಾಶ್ ಕರೆ ಹೊಂದಿರುವ ಆಕೆಯ ಸೆಲ್ ಫೋನ್ ನಿಂದ ನಾವು ಕರೆ ಸ್ವೀಕರಿಸಿದೆವು ಎಂದು ಇಯಾನ್ ವಾಲ್ಡಮನ್ ತಿಳಿಸಿದ್ದಾರೆ.









