ಹಿಂದೂಗಳು ಹಣೆಗೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ – ಮುತಾಲಿಕ್
ತುಳುನಾಡಿನಲ್ಲಿ ದಸರಾದ ಸಂಭ್ರಮ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿಯ ವ್ಯಾಪಾರ ವಿಚಾರದಲ್ಲಿ ಧರ್ಮದಂಗಲ್ ನಡೆಯುತ್ತಿದೆ. ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಒತ್ತಾಯಿಸಿದೆ. ದೇಗುಲದ ಆವರಣದಲ್ಲಿ ಎಲ್ಲಾ ಸಮುದಾಯದವರಿಗೆ ವ್ಯಾಪಾರಕ್ಕೆ ಸಮಿತಿ ಅವಕಾಶ ಕೊಟ್ಟಿದೆ. ಈ ಬಗ್ಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈಗೀಗ ಮಳಿಗೆಗಳಿಗೆ ಹಿಂದೂ ಹೆಸರು ಇಟ್ಟುಕೊಂಡು ಮುಸ್ಲಿಮರು ವ್ಯಾಪಾರ ಮಾಡುತ್ತಾರೆ. ಬಹುದೇವ ಆರಾಧಕರನ್ನು ವಿರೋಧಿಸುವವರಿಗೆ ಹಿಂದೂಗಳ ಹಣ ಬೇಕಾ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಹೋರಾಟಕ್ಕೆ ನನ್ನ ಬೆಂಬಲ ಇದೆ. ಹಿಂದೂಗಳು ಹಣೆಗೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದು ಮುತಾಲಿಕ್ ಸಲಹೆ ನೀಡಿದರು. ಆಸ್ತಿಕತೆ ಬೇಡಾ, ಹಿಂದೂಗಳ ವ್ಯಾಪಾರ ಬೇಕು, ಲಾಭ ಮಾಡಬೇಕು ಎಂದರೆ ಆಗುತ್ತಾ? ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮ ಸರಿಯಾಗಿದೆ ಎಂದು ಹೇಳಿದರು.
Leave A Reply