ಗೋಮೂತ್ರ ಚಿಮುಕಿಸಿ ತಿಲಕ ಇಟ್ಟು ಗರ್ಭಾ ನೃತ್ಯ ಮಾಡಲು ಕರೆ!

ವಿಶ್ವ ಹಿಂದೂ ಪರಿಷತ್ – ಬಜರಂಗದಳ ಈ ಬಾರಿ ನವರಾತ್ರಿಗೆ ವಿಶೇಷವಾದ ಅಭಿಯಾನವನ್ನು ಆರಂಭಿಸಿದೆ. ನವರಾತ್ರಿಯ ದಿನಗಳಲ್ಲಿ ವಿವಿದೆಡೆ ನಡೆಯುವ ಗರ್ಭ ಕಾರ್ಯಕ್ರಮದಲ್ಲಿ ಹಿಂದೂಯೇತರರು ಭಾಗವಹಿಸುವುದನ್ನು ನಿಷೇಧಿಸುವ ಸಲುವಾಗಿ ಹೊಸ ಹೆಜ್ಜೆ ಇಟ್ಟಿದೆ. ಅದೇನೆಂದರೆ ಗರ್ಭಾ ಕಾರ್ಯಕ್ರಮ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ಅತಿಥಿಗಳ ಮೇಲೆ ಗೋಮೂತ್ರ ಚಿಮುಕಿಸಿ, ತಿಲಕ ಇಟ್ಟು, ಅವರ ಆಧಾರ ಕಾರ್ಡ್ ಪರಿಶೀಲಿಸಿ ಒಳಗೆ ಬಿಡಲು ಎಲ್ಲಾ ಕಡೆ ಆಯೋಜಕರಿಗೆ ಸಂದೇಶ ನೀಡಲಾಗಿದೆ.
ಇದರಿಂದ ಲವ್ ಜಿಹಾದ್ ನಡೆಯುವುದು ತಪ್ಪುತ್ತದೆ ಎನ್ನುವುದು ಹಲವರ ಅಭಿಮತ. ಗರ್ಭಾ ನೃತ್ಯ ಮಾಡುವ ನೆಪದಲ್ಲಿ ಬೇರೆ ಧರ್ಮದವರು ನಮ್ಮ ಹೆಣ್ಣುಮಕ್ಕಳನ್ನು ಸೆಳೆಯುವ ಕೆಲಸ ಪ್ರಯತ್ನ ಮಾಡುತ್ತಾರೆ. ಅದನ್ನು ತಡೆಯುವುದಕ್ಕಾಗಿ ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುಜರಾತ್ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹೀತೇಂದ್ರಸಿನ್ ರಾಜಪೂತ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಗರ್ಭಾ ನಡೆಯುವ ಕಡೆ ಆಧಾರ್ ಕಾರ್ಡ್ ತೋರಿಸಿ ಪ್ರವೇಶ ನೀಡುವ ಕ್ರಮ ಅನುಸರಿಸಲಾಗಿದೆ ಎಂದು ವಿಹಿಂಪ ಜೊತೆ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.
Leave A Reply