ರಾಹುಲ್ ತಾಯಿಗೆ ಗಿಫ್ಟ್ ನೀಡಿರುವ ನಾಯಿ ಮರಿ ಹೆಸರಿನ ವಿರುದ್ಧ ಪ್ರಕರಣ!
Posted On October 19, 2023
0
ಆಲ್ ಇಂಡಿಯಾ ಮಾಜ್ಲೀಸ್ ಈ ಇಟ್ಲೆಹಾಡೂಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಮೊಹಮ್ಮದ್ ಫರಾನ್ ಅವರು ಕಾಂಗ್ರೆಸ್ ವಯನಾಡ್ ಸಂಸದ ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿಯವರಿಗೆ ಉಡುಗೊರೆಯಾಗಿ ನೀಡಿರುವ ನಾಯಿಯ ಹೆಸರಿನ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.
ರಾಹುಲ್ ಆ ನಾಯಿಗೆ ನೂರಿ ಎಂದು ಹೆಸರಿಟ್ಟಿದ್ದು, ಆ ಹೆಸರು ತಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುತ್ತದೆ ಎಂದು ಅವರು ಹೇಳಿದ್ದಾರೆ. ವಿವಿಧ ಪತ್ರಿಕೆ, ರಾಹುಲ್ ಗಾಂಧಿಯವರ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್ ಗಳ ಮೂಲಕ ರಾಹುಲ್ ಅವರ ನಾಯಿ ಮರಿ ಹೆಸರು ತನ್ನ ಕಕ್ಷಿದಾರರ ಗಮನಕ್ಕೆ ಬಂದಿದ್ದು, ಅವರು ನ್ಯಾಯಾಲಯಕ್ಕೆ ಮನವಿ ಮಾಡಿ ರಾಹುಲ್ ವಿರುದ್ಧ ಐಪಿಸಿ 295 ಎ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲು ಕೋರಿದ್ದಾರೆ ಎಂದು ವಕೀಲ ಮೊಹಮ್ಮದ್ ಆಲಿ ಮಾಹಿತಿ ನೀಡಿದ್ದಾರೆ. ಮುಸ್ಲಿಮರ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಹೆಸರನ್ನು ರಾಹುಲ್ ಗೊತ್ತಿಲ್ಲದೇ ಇಟ್ಟಿರಬಹುದಾ, ಈಗ ಬದಲಾಯಿಸುತ್ತಾರಾ ಎನ್ನುವುದು ಈಗಿರುವ ಪ್ರಶ್ನೆ!
Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
November 21, 2025









