ರಶ್ಮಿಕಾ ಮುಖ ಬಳಸಿ ವಿಡಿಯೋ ವೈರಲ್!
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಆಧುನಿಕ ತಂತ್ರಜ್ಞಾನದ ಮೂಲಕ ದುರುಪಯೋಗ ಮಾಡಿ ವೈರಲ್ ಆಗಿರುವ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲಿ ಒಂದು ಲಿಫ್ಟ್ ಒಳಗೆ ರಶ್ಮಿಕಾ ಪ್ರವೇಶಿಸುತ್ತಿರುವ ವಿಡಿಯೋದಲ್ಲಿರುವ ದೇಹ ರಶ್ಮಿಕಾ ಅವರದ್ದು ಆಗಿರದೇ ಬೇರೆ ಯುವತಿಯದ್ದು ಆಗಿದೆ. ಆ ಉಡುಗೆ ಅಶ್ಲೀಲವಾಗಿದ್ದು, ರಶ್ಮಿಕಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಶ್ಮಿಕಾ ಅವರು ” ಇದು ಮನಸ್ಸಿಗೆ ತುಂಬಾ ಬೇಸರ ಮೂಡಿಸಿದೆ. ಯಾರೂ ಕೂಡ ಹೀಗೆ ಮಾಡುವುದು ಸರಿಯಲ್ಲ. ಇದು ಹೆಣ್ಣುಮಕ್ಕಳ ಘನತೆ, ಗೌರವಕ್ಕೆ ದಕ್ಕೆ ತರುತ್ತದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಖ್ಯಾತ ನಟ ಅಮಿತಾಬ್ ಬಚ್ಚನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾನೂನು ಮಾರ್ಗ ಅನುಸರಿಸುವ ಅಗತ್ಯ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂಲತ: ಆ ವಿಡಿಯೋ ಝರಾ ಪಟೇಲ್ ಎನ್ನುವ ಇಂಡೋ-ಬ್ರಿಟಿಷ್ ಪ್ರಜೆಯದ್ದು ಆಗಿದೆ. ಅಕ್ಟೋಬರ್ 9 ರಂದು ಆಕೆ ಆ ವಿಡಿಯೋ ತಮ್ಮ ಇನ್ಸ್ಟಾಗ್ರಾಂಗೆ ಅಪಲೋಡ್ ಮಾಡಿದ್ದಾರೆ.
Leave A Reply