ಮೌನದಲ್ಲಿ ಕ್ರಾಂತಿ; ನಳಿನ್ ರಾಜ್ಯದ ಪ್ರಥಮ ಸಂಸದ
ಮೌನದಲ್ಲಿಯೇ ಕ್ರಾಂತಿ ಮಾಡುವ ಸಂಪ್ರದಾಯ ಅನುಸರಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಇನ್ನೊಂದು ಸಾಧನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆದರ್ಶ ಗ್ರಾಮ ಯೋಜನೆಯನ್ನು ಯಶಸ್ವಿಯಾಗಿ ಸಾಧಿಸಿದ ರಾಜ್ಯದ ಪ್ರಥಮ ಸಂಸದ ಎನ್ನುವ ಹೆಗ್ಗಳಿಕೆಯನ್ನು ನಳಿನ್ ಕುಮಾರ್ ಕಟೀಲ್ ಪಡೆದಿದ್ದಾರೆ.
ತಾವು ಏನೇ ಸಾಧನೆ ಮಾಡಿದರೂ ಅದನ್ನು ಪ್ರಚಾರ ಮಾಡುವ ಪದ್ಧತಿ ಅನುಸರಿಸದೇ ಇರುವ ಗುಣ ಸ್ವಭಾವದಿಂದ ನಳಿನ್ ಅವರ ಸಾಧನೆಗಳು ಜನಮಾನಸಕ್ಕೆ ತಲುಪದೇ ಇರಬಹುದು. ಆದರೆ ಕೇಂದ್ರ ನಾಯಕರು ಘೋಷಿಸುವ ಪ್ರತಿ ಯೋಜನೆಯನ್ನು ಜಿಲ್ಲೆಯ ಮನೆಮನೆಗೆ ತಲುಪಿಸುವ ಕಾರ್ಯವನ್ನು ಸಂಸದರು ಕಾರ್ಯಕರ್ತರ, ಮುಖಂಡರ ನೆರವಿನೊಂದಿಗೆ ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸಹಿತ ಕೇಂದ್ರ ಸಚಿವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟುವಲ್ಲಿ ರಾಜ್ಯದ ಸಂಸದರ ಪೈಕಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಥಮ ಸ್ಥಾನದಲ್ಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಪ ಗ್ರಾಮವನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದು, ಈ ಗ್ರಾಮದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಕೂಡ ಯಶಸ್ವಿ ಎಂದು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ನೆಟ್ವರ್ಕ್ ವ್ಯವಸ್ಥೆ ಸೇರಿದಂತೆ 55 ಕೋಟಿ ರೂಪಾಯಿ ಅನುದಾನವನ್ನು ಒಂದು ಗ್ರಾಮಕ್ಕೆ ಒದಗಿಸಿ ಆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Leave A Reply