ಪ್ರಶ್ನೆ ಸಿಂಪಲ್, ಉತ್ತರ ಟಫ್!
ನನ್ನ ಹೇಳಿಕೆಗೆ ಬದ್ಧ. ನ್ಯಾಯಾಲಯದ ವಿಚಾರಣೆಯನ್ನು ಕೂಡ ಎದುರಿಸಲು ಸಿದ್ಧನಿದ್ದೇನೆ ಎಂದು ಭಂಡ ಧೈರ್ಯದಿಂದ ತಮಿಳುನಾಡು ಮುಖ್ಯಮಂತ್ರಿ ಮಗ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿರಬಹುದು. ಆದರೆ ಈಗ ನ್ಯಾಯಾಲಯ ಕೇಳಿರುವ ಪ್ರಶ್ನೆಗೆ ಆತ ಥರಥರ ನಡುಗುವಂತಾಗಿದೆ. ಸನಾತನ ಧರ್ಮದ ನಾಶದ ಬಗ್ಗೆ ನೀವು ನೀಡಿರುವ ಹೇಳಿಕೆಯ ಆಧಾರವೇನು? ಎಂದು ಚೆನೈ ಹೈಕೋರ್ಟ್ ಪ್ರಶ್ನಿಸಿದೆ. ಬಹಳ ಸಿಂಪಲ್ ಪ್ರಶ್ನೆ. ಆದರೆ ಉತ್ತರ ಅಷ್ಟು ಸುಲಭ ಅಲ್ಲ. ಯಾಕೆಂದರೆ ಇಂತಹ ಪ್ರಶ್ನೆ ನ್ಯಾಯಾಲಯದಿಂದ ಬಂದರೆ ಉತ್ತರ ಕೊಡುವುದು ಅಷ್ಟು ಸುಲಭವಲ್ಲ. ರಾಜಕಾರಣಿಗಳು ನೀಡುವ ಹೇಳಿಕೆಗಳಿಗೆ ತಲೆಬುಡವಿರುವುದಿಲ್ಲ. ವೈಜ್ಞಾನಿಕ ತಳಹದಿ ಮೊದಲೇ ಇರುವುದಿಲ್ಲ. ಎದುರಿಗಿದ್ದ ಗುಂಪನ್ನು ಅಥವಾ ಸಮಾವೇಶದಲ್ಲಿ ಇರುವ ಜನರಿಂದ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಳ್ಳಲು ಏನಾದರೊಂದು ಮಾತನಾಡಿಬಿಡುತ್ತಾರೆ. ಎಂತೆಂತ ಹಿರಿಯ ರಾಜಕಾರಣಿಗಳೇ ನಾಲಿಗೆ ಮೇಲಿನ ಹಿಡಿತ ತಪ್ಪಿ ಹೇಳಿದ ಮಾತುಗಳಿಂದ ಚುನಾವಣೆಗಳನ್ನೇ ಸೋತಿದ್ದಾರೆ. ಹಾಗಿರುವಾಗ ಎಳಸು ಉದಯನಿಧಿ ಸ್ಟಾಲಿನ್ ಯಾವ ಲೆಕ್ಕ. ಆದರೂ ಸ್ಟಾಲಿನ್ ಕುಟುಂಬದ ಕುಡಿ ಒಂದಿಷ್ಟು ಸಂಯಮದಿಂದ ವರ್ತಿಸಿದರೆ ಪ್ರಭುದ್ಧತೆಯ ಸಾಲಿನಲ್ಲಿ ಸೇರಬಹುದಿತ್ತು. ಆದರೆ ಉದಯನಿಧಿಗೆ ರಾಜಕಾರಣ ತೊಟ್ಟಿಲಿನಲ್ಲಿಯೇ ಬಂದ ಬಳುವಳಿ. ಅವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಿ ಗೊತ್ತಿಲ್ಲ. ಚಿನ್ನದ ಚಮಚಾ ಬಾಯಲ್ಲಿ ಇಟ್ಟು ಬೆಳೆದಿರುವುದರಿಂದ ಜೀವನದಲ್ಲಿ ಸೋಲು ಎನ್ನುವ ಶಬ್ದದ ಅರ್ಥ ಅರಿವಿಲ್ಲ. ಹಾಗಾಗಿಯೇ ಅವರು ಏನೂ ಬೇಕಾದರೂ ಹೇಳಿ ದಕ್ಕಿಸಿಕೊಳ್ಳಬಹುದು ಎಂದು ಅಂದುಕೊಂಡು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ ತರಹ ನಾಶ ಮಾಡಬೇಕು ಎಂದು ಹೇಳಿದ್ದಾರೆ.
ಪೊಲೀಸರೇ ಯಾಕೆ ಕ್ರಮ ಕೈಗೊಂಡಿಲ್ಲ!
ಅದನ್ನೇ ಈಗ ನ್ಯಾಯಾಲಯ ಕೇಳುತ್ತಿರುವುದು ನೀನು ಅದ್ಯಾವ ದೊಡ್ಡ ಅಧ್ಯಯನ ಮಾಡಿ ಇಂತಹ ಉತ್ತರ ಕಂಡುಕೊಂಡೆ ಎನ್ನುವುದು ಮಾತ್ರ. ಯಾಕೆಂದರೆ ಉದಯನಿಧಿ ವಿರುದ್ಧ ವ್ಯಕ್ತಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದಾರೆ. ಅದಕ್ಕಾಗಿ ನ್ಯಾಯಾಲಯ ಉದಯನಿಧಿಯಿಂದ ಉತ್ತರವನ್ನು ಕೇಳುತ್ತಿದೆ.
ಅಷ್ಟೇ ಅಲ್ಲ, ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರ ಕುರಿತು ಉದಯನಿಧಿ ಹಾಗೂ ಪಿ.ಕೆ.ಶೇಖರ್ ಬಾಬು ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ಪೊಲೀಸರ ಕಾರ್ಯಾಚರಣೆಯ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕಿದೆ. ನ್ಯಾಯಾಲಯವು ಹೇಳಿರುವುದೇನೆಂದರೆ ಯಾವುದೇ ವ್ಯಕ್ತಿಗೆ ಪ್ರತ್ಯೇಕತಾವಧಿ ಯೋಚನೆಗಳಿಗೆ ಚಾಲನೆ ನೀಡುವ ಅಥವಾ ಯಾವುದೇ ವಿಚಾರಧಾರೆಯನ್ನು ನಾಶ ಮಾಡುವ ಅಧಿಕಾರ ಇಲ್ಲ. ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅವರು ಈ ರೀತಿಯ ಯೋಚನೆಗಳ ಪ್ರಸಾರ ಮಾಡಬಾರದು ಎಂದು ಹೇಳಿದೆ. ಯಾವ ವಿಚಾರಧಾರೆಯು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರಲ್ಲಿ ಬಿರುಕು ಮೂಡಿಸುತ್ತದೆಯೋ, ಆ ವಿಚಾರಧಾರೆಯನ್ನು ಸಾರ್ವಜನಿಕ ರೀತಿಯಲ್ಲಿ ಮಂಡಿಸುವ ಬದಲು ಉದಯನಿಧಿ ರಾಜ್ಯದಲ್ಲಿನ ಮಾದಕ ವಸ್ತುಗಳ ಸಮಸ್ಯೆ ಪರಿಹರಿಸುವ ಕಡೆಗೆ ಗಮನ ಕೇಂದ್ರೀಕರಿಸಬಹುದಿತ್ತು.
ನಮ್ಮಲ್ಲಿ ಭಗವಾನ್ ಇದ್ದ ಹಾಗೆ!
ಉದಯನಿಧಿ ಒಬ್ಬರು ಪ್ರಭಾವಿ ಸಚಿವರಾಗಿರುವುದರಿಂದ ಅವರು ಹೇಳಿದ ಮಾತುಗಳು ದೊಡ್ಡ ಸಂಖ್ಯೆಯಲ್ಲಿ ಪ್ರಭಾವ ಬೀರುತ್ತದೆ. ಇದರಿಂದ ಸಮುದಾಯಗಳ ನಡುವೆ ಗಲಾಟೆಗೆ ಇದು ಕಾರಣವಾಗುತ್ತದೆ. ಇನ್ನು ಉದಯನಿಧಿ ಅವರನ್ನು, ಆಡಳಿತ ಪಕ್ಷವನ್ನು ಖುಷಿ ಮಾಡಲು ಇನ್ನಷ್ಟು ಬುದ್ಧಿಜೀವಿಗಳು ಹೇಳಿಕೆ ನೀಡುತ್ತಾರೆ. ಅವರ ಉದ್ದೇಶ ಏನಾದರೂ ಪ್ರಶಸ್ತಿ ಗಿಟ್ಟಿಸುವುದು ಇರುತ್ತದೆ. ಆದರೆ ಅವರಿಗೆ ತಾವು ನೀಡಿದ ಹೇಳಿಕೆ ಹಿಂದೂಗಳ ನಂಬಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಗೊತ್ತೇ ಆಗುವುದಿಲ್ಲ. ಕರ್ನಾಟಕದಲ್ಲಿ ಭಗವಾನ್ ಇದ್ದ ಹಾಗೆ. ಒಟ್ಟಿನಲ್ಲಿ ಉದಯನಿಧಿಗೆ ಅಂತಹ ದೊಡ್ಡ ಶಿಕ್ಷೆ ಆಗುತ್ತಾ ಬಿಡುತ್ತಾ, ಆತನ ಬುದ್ಧಿಗೆ ಸಾಣೆ ಹಿಡಿಯುವ ಕೆಲಸ ನಡೆಯಲಿ ಎಂದು ಹಾರೈಕೆ!!
Leave A Reply