ಯುವಾಬ್ರಿಗೇಡಿಗೆ ಪೊಲೀಸ್ ನೋಟಿಸ್!

ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದ ಯುವಾಬ್ರಿಗೇಡ್ ಸಂಘಟನೆ ಸಾಮಾಜಿಕ ಚಟುವಟಿಕೆಗಳಿಗೆ ಹೆಸರುವಾಸಿ. ಅದರಲ್ಲಿ ನದಿ ಸ್ವಚ್ಚತೆ ಕೂಡ ಒಂದು. ನದಿ ಸ್ವಚ್ಚ ಮಾಡುವುದು ಯುವಾಬ್ರಿಗೇಡಿಗೆ ಹೊಸತೇನೂ ಅಲ್ಲ. ಇದು ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಟಿ ನರಸಿಂಹಪುರದಲ್ಲಿಯೂ ಯುವಾ ಬ್ರಿಗೇಡ್ ಕಳೆದ ಆರೇಳು ವರ್ಷಗಳಿಂದ ನದಿ ಸ್ವಚ್ಚತಾ ಕಾರ್ಯ ಮಾಡಿಕೊಂಡು ಬಂದಿದೆ. ಈ ಬಾರಿಯ ಅಚ್ಚರಿ ಎಂದರೆ ಇದಕ್ಕೆ ಪೊಲೀಸರು ನೋಟಿಸು ಹೊರಡಿಸಿದ್ದಾರೆ.
ಕಾರ್ಯಕ್ರಮದ ಉಸ್ತುವಾರಿ ಯಾರು? ಎಷ್ಟು ಜನ? ಚಟುವಟಿಕೆ ಏನು? ಯಾರೆಲ್ಲಾ ನದಿಗೆ ಇಳಿಯುತ್ತಾರೆ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಏನಾದರೂ ಅವಘಡವಾದರೆ ಅದಕ್ಕೆ ನೀವೆ ಕಾರಣವೆಂದು ಎಚ್ಚರಿಸುತ್ತಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆಯವರು ” ಪೊಲೀಸ್ ಇಲಾಖೆಯ ಈ ನಡೆ ಸಮಾಜದ ಬಗ್ಗೆ ಕಾಳಜಿಯಲ್ಲ, ಬದಲಿಗೆ ಇಂತಹ ಚಟುವಟಿಕೆಗಳನ್ನು ನಿಲ್ಲಿಸುವ ಹತಾಶ ಪ್ರಯತ್ನ ಎಂಬುದು ಎಂತವನಿಗೂ ಅರಿವಾಗುತ್ತದೆ. ಈ ನದಿ ಸ್ವಚ್ಚತಾ ಕಾರ್ಯಕ್ರಮವನ್ನು ಬಲುದೊಡ್ಡದಾಗಿ ಮಾಡಬೇಕೆಂಬುದು ನಮ್ಮ ಬಯಕೆ. ತಡೆಯೊಡ್ಡಿದಾಗ ನದಿ ನೀರಿನ ಹರಿವೂ ಹೆಚ್ಚಾಗುತ್ತದೆ. ಯುವಬ್ರಿಗೇಡ್ ಸುಮ್ಮನಿರಲು ಸಾಧ್ಯವೇನು?” ಎಂದು ಹೇಳಿದ್ದಾರೆ.
Leave A Reply