ಬಂಧಿತ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಐಸಿಸ್ ಸಂಪರ್ಕ!
ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ ಎಂತೆಂತಹ ವಿಷಸರ್ಪಗಳನ್ನು ವಿದ್ಯಾರ್ಥಿಗಳನ್ನಾಗಿ ಹೊಂದಿದೆ ಎನ್ನುವುದನ್ನು ನೋಡುವಾಗ ಅಸಹ್ಯ ಉಂಟಾಗುತ್ತದೆ. ಐಸಿಸ್ ಭಯೋತ್ಪಾದನೆಯ ಲಿಂಕ್ ಹೊಂದಿದ್ದಾರೆ ಎನ್ನುವ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ನಾಲ್ಕು ಜನ ಆರೋಪಿಗಳು ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ಹೂಡುತ್ತಿದ್ದರು ಎನ್ನುವುದು ಪತ್ತೆಯಾಗಿದೆ. ಆರೋಪಿಗಳಾದ ರಖಿಬ್, ನವೇದ್, ನಝೀಮ್, ನೋಮನ್ ಕೇವಲ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿರದೇ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಅದರಲ್ಲಿ ವಜಾಹುದ್ದೀನ್ ವೈದ್ಯ, ರಖೀಬ್ ಇಂಜಿನಿಯರ್ ಹಾಗೂ ನವೇದ್ ವಿಜ್ಞಾನಿಯಾಗಲಿದ್ದರು.
ಇನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬಂಧಿತನಾಗಿರುವ ಜುಲ್ಫಿಕರ್ ಆಲಿ, ಮಲ್ಟಿ ನ್ಯಾಶನಲ್ ಕಂಪೆನಿಯಲ್ಲಿ ಹಿರಿಯ ಪ್ರಬಂಧಕನಾಗಿ ಉದ್ಯೋಗ ಮಾಡುತ್ತಿದ್ದು, ವಾರ್ಷೀಕ ಪ್ಯಾಕೇಜ್ ಆಗಿ 31 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾನೆ. ಇತನನ್ನು ಐಸಿಸ್ ಸಂಪರ್ಕ ಹೊಂದಿರುವ ಪ್ರಕರಣದಲ್ಲಿ ಪುಣಿಯಲ್ಲಿ ಬಂಧಿಸಲಾಗಿದೆ.
Leave A Reply