ಹಲಾಲ್ ವಸ್ತುಗಳು ಇನ್ನು ಯುಪಿಯಲ್ಲಿ ನೋ!
ವಸ್ತುಗಳ ಪ್ಯಾಕೇಟಿನ ಒಂದು ಮೂಲೆಯಲ್ಲಿ ಹಲಾಲ್ ಚಿನ್ನೆ, ಗುರುತು, ಲೋಗೋ ಇರುವುದನ್ನು ನೀವು ಕಣ್ಣಾರೆ ನೋಡಿರುತ್ತೀರಿ ಅಥವಾ ಯಾರಾದರೂ ಹೇಳಿದ್ದನ್ನು ಕೇಳಿರುತ್ತೀರಿ. ಈ ಹಲಾಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಕಂಪೆನಿಗಳು ಯಾವುದೋ ಖಾಸಗಿ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ಸುರಿಯಬೇಕಾಗುತ್ತದೆ. ಅದರ ನಂತರ ಅವರಿಗೆ ಹಲಾಲ್ ಪ್ರಮಾಣಪತ್ರ ಸಿಗುತ್ತದೆ. ಹಾಗೆ ಹಲಾಲ್ ಲೋಗೋ ಇದ್ದ ವಸ್ತುಗಳನ್ನು ಮಾತ್ರ ಒಂದು ಧರ್ಮದವರು ಕೊಳ್ಳುವುದರಿಂದ ಹಲಾಲ್ ಲೋಗೊ ಹಾಕಿಕೊಳ್ಳಲು ಕಂಪೆನಿಗಳು ಮುಗಿಬೀಳುತ್ತವೆ. ಇದರಿಂದ ಲಾಭ ಆಗುವುದು ಮಾತ್ರ ಯಾವುದೋ ಪರದೇಶಿ ಕಂಪೆನಿಗೆ.
ಇದನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರಕಾರ ಹಲಾಲ್ ಟ್ಯಾಗ್ ಇರುವ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ಹಂಚಿಕೆ ಮತ್ತು ಮಾರಾಟ ಎಲ್ಲದಕ್ಕೂ ನಿಷೇಧ ಹೇರಿದೆ. ಕೇವಲ ರಫ್ತು ಮಾಡುವುದಕ್ಕೆ ಸಡಿಲಿಕೆ ನೀಡಿದೆ.
ಯಾವುದೇ ಹಲಾಲ್ ಟ್ಯಾಗ್ ಇರುವ ಎಲ್ಲಾ ತಿಂಡಿ, ತಿನಿಸು ಉತ್ಪನ್ನಗಳನ್ನು ವಿಶೇಷವಾಗಿ ಔಷಧಿ, ವೈದ್ಯಕೀಯ ಸಂಬಂಧಿ ಸಲಕರಣೆಗಳು, ಸೌಂದರ್ಯವರ್ಧಕ ವಸ್ತುಗಳನ್ನು ಮಾರುವುದು, ಖರೀದಿಸುವುದಕ್ಕೆ, ಸಂಗ್ರಹಿಸುವುದಕ್ಕೆ ಮತ್ತು ಉತ್ಪಾದಿಸಲು ಯಾರಾದರೂ ತೊಡಗಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ. ಜನರ ಧಾರ್ಮಿಕ ನಂಬಿಕೆಗಳನ್ನು ಬಳಸಿ ಕೆಲವು ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳುತ್ತಿವೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ಕೆಲವು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದರಲ್ಲಿ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನೈ, ಜಮೀಯತ್ ಉಲ್ಮಾ -ಈ-ಹಿಂದ್ ಹಲಾಲ್ ಟ್ರಸ್ಟ್ ಡೆಲ್ಲಿ, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬೈ, ಜಮೀಯತ್ ಉಲ್ಮಾ ಮಹಾರಾಷ್ಟ್ರ ಮತ್ತು ಇತರ ಕೆಲವು ಸಂಸ್ಥೆಗಳು ಒಂದು ಸಮುದಾಯದ ಜನರನ್ನು ಸೆಳೆದು ಆ ಮೂಲಕ ಹಲಾಲ್ ಟ್ಯಾಗ್ ಹೊಂದಿರುವ ವಸ್ತುಗಳನ್ನು ಮಾರಾಟ ಮಾಡುವ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶವನ್ನುಹೊಂದಿರುವುದು ಸ್ಪಷ್ಟವಾಗಿತ್ತು.
ಈ ಬಗ್ಗೆ ಮಾತನಾಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಹಲಾಲ್ ಟ್ಯಾಗ್ ಕೊಡಲು ಯಾವುದೇ ಸಂಸ್ಥೆಗಳು ಹಕ್ಕುಬದ್ಧ ಮಾನ್ಯತೆ ಹೊಂದಿಲ್ಲ. ಇದರಿಂದ ಸಂಗ್ರಹವಾಗುವ ಹಣ ಭಾರತದ ವಿರುದ್ಧವೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಲಾಲ್ ಜನರ ಭಾವನೆಗಳನ್ನು ದುರುಪಯೋಗಗೊಳಿಸಲು ಇರುವ ಸಾಧನವಾಗಿದ್ದು ಎಲ್ಲಿಯ ತನಕ ಎಂದರೆ ಸಸ್ಯಹಾರಕ್ಕೂ ಇದು ಕಡ್ಡಾಯ ಮಾಡಿರುವುದು ಷಡ್ಯಂತ್ರದ ಭಾಗ ಎಂದಿದ್ದಾರೆ
Leave A Reply