ಲವ್ ಜಿಹಾದಿಗೆ ಸಿಲುಕಿರುವ ಅತುಲ್ಯ ಅಶೋಕನ್ ಹೊಸ ಇನ್ಟಾಪೋಸ್ಟ್ ನಲ್ಲಿ ಏನಿದೆ?
ಕೇರಳ ಸ್ಟೋರಿ ಸಿನೆಮಾವನ್ನು ಟೀಕಿಸಿದ್ದ, ಅದು ಕಪೋಲಕಲ್ಪಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸಿದ ಅತುಲ್ಯ ಅಶೋಕನ್ ಸ್ವತ: ಲವ್ ಜಿಹಾದ್ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾಳೆ ಎನ್ನುವ ವಿಷಯ ಆಕೆಯ ಇನ್ಟಾಗ್ರಾಂ ಮೂಲಕ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಅತುಲ್ಯ ಓರ್ವ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದು, ಕೆಲವೇ ತಿಂಗಳುಗಳಲ್ಲಿ ಅಲ್ಲಿನ ಪರಿಸ್ಥಿತಿ ಎದುರಿಸಲಾಗದೇ ಸಂಕಟವನ್ನು ಅನುಭವಿಸುತ್ತಿರುವುದು ಅವಳು ಇತ್ತೀಚೆಗೆ ಮಾಡಿರುವ ಟೆಕ್ಟ್ ನಲ್ಲಿ ತಿಳಿದು ಬರುತ್ತಿದೆ. ಇನ್ಟಾದಲ್ಲಿ ” ನನಗೆ ಏನಾದರೂ ಆದರೆ ನನ್ನ ಕುಟುಂಬದ ಯಾರೂ ಅದಕ್ಕೆ ಜವಾಬ್ದಾರರಲ್ಲ, ಆತ ಮಾತ್ರ ಹೊಣೆ” ಎಂದು ಗಂಡ ರೈಸಲ್ ಮಾನ್ಸೂರ್ ಅನ್ನು ಟ್ಯಾಗ್ ಮಾಡಿ ಅತುಲ್ಯ ಬರೆದಿದ್ದಳು. ಹೀಗೆ ಬರೆದು ಕೆಲವೇ ಗಂಟೆಗಳ ಒಳಗೆ ಆ ಇನ್ಟಾ ಮೇಸೆಜನ್ನು ಆಕೆ ಡಿಲೀಟ್ ಮಾಡಿಬಿಟ್ಟಿದ್ದಾಳೆ. ಆದರೆ ಅಷ್ಟರೊಳಗೆ ಅದರ ಸ್ಕ್ರೀನ್ ಶಾಟ್ ತೆಗೆದ ಹಲವಾರು ಜನರು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಆಕೆಯನ್ನು ಟೀಕಿಸಿದ್ದರು.
ಆಕೆಯನ್ನೇ ಯಾಕೆ ಟೀಕೆ?
ಅತುಲ್ಯ ಅಶೋಕನ್ ಯಾವಾಗ ಕೇರಳ ಸ್ಟೋರಿಯ ವಿಷಯವನ್ನು ಸುಳ್ಳು ಎಂದು ಹೇಳಿದ್ದಳೋ ಅದರ ನಂತರ ಅವಳ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಲವ್ ಜಿಹಾದ್ ಎನ್ನುವುದು ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ ಎಂದರೆ ಅಲ್ಲಿನ ಕ್ರೈಸ್ತ ಧಾರ್ಮಿಕ ಮುಖಂಡರೇ ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಸಮುದಾಯದ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಲಾಗುತ್ತಿದೆ ಎಂದು ಕೈಸ್ತ ಮುಖಂಡರೇ ಹೇಳಿದ್ದಾರೆ. ಹಿಂದೂ ಸಂಘಟನೆಗಳು ಅನೇಕ ಸಾಕ್ಷ್ಯಗಳನ್ನು ನೀಡಿದೆ. ಅಲ್ಲಿನ ನ್ಯಾಯಾಲಯಗಳು ಈ ವಿಷಯದ ಮೇಲೆ ತೀರ್ಪು ನೀಡಿವೆ. ಎಷ್ಟೋ ಘಟನೆಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡಿವೆ, ಈ ವಿಷಯದ ಮೇಲೆ ಡಿಬೇಟ್ ನಡೆಯುತ್ತಿದೆ. ಆದರೆ ಸಾಮಾಜಿಕ ಜಾಲತಾಣದ ಪ್ರಭಾವಿ ಯುವತಿಯೊಬ್ಬಳು ಲವ್ ಜಿಹಾದ್ ಕತೆಯನ್ನು ಒಳಗೊಂಡ, ನೈಜ ವಿಷಯಾಧಾರಿತ ಕಥೆಯನ್ನು ಅಪ್ಪಟ ಸುಳ್ಳು ಎಂದಳೋ ಅದರ ನಂತರ ಆಕೆಯ ಬಗ್ಗೆ ಆರೋಪ, ಪ್ರತ್ಯಾರೋಪಗಳು ನಡೆಯಲು ಶುರುವಾಯಿತು. ಅಷ್ಟೇ ಆಗಿದ್ರೆ ಏನಾಗುತ್ತಿರಲಿಲ್ಲವೇನೋ? ದೇಶದ ವಿವಿಧ ಭಾಗಗಳಲ್ಲಿ ಕೆಲವು ಹಿಂದೂ ಯುವತಿಯರು ಮುಸ್ಲಿಂ ಗೆಳೆಯರಿಂದ ಹತ್ಯೆಗೊಳಗಾದ ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ನಡೆಯುತ್ತಿತ್ತು. ಹಿಂದೂ ಯುವತಿಯನ್ನು ಕೊಂದು ತುಂಡು ತುಂಡಾಗಿ ಫ್ರಿಜ್ ನಲ್ಲಿ ಇಟ್ಟು ಸಮಯ ಬಂದಾಗ ದೂರಕ್ಕೆ ಬಿಸಾಡಿ ಬರುತ್ತಿದ್ದ ಮುಸ್ಲಿಂ ಯುವಕನ ಸ್ಟೋರಿ ಮಾಧ್ಯಮಗಳಲ್ಲಿ ನಿತ್ಯ ಬರುತ್ತಿದ್ದಂತೆ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೆ ಜೀವ ಬರುತ್ತಿತ್ತು. ಆದರೆ ಮುಸ್ಲಿಂ ಯುವಕರನ್ನು ಪ್ರೀತಿಸುತ್ತಿದ್ದ ಹಿಂದೂ ಯುವತಿಯರು ಮಾತ್ರ “ಮೇರಾ ಅಬ್ದುಲ್ಲಾ ಐಸಾ ನಹೀ” ” ಮೇರಾ ಅಬ್ದುಲ್ಲಾ ಅಲಗ್ ಹೇ” ಎಂದು ಹೇಳುತ್ತಾ ತಮ್ಮ ಪ್ರೀತಿಯನ್ನು ಸಮರ್ಥಿಸಿಕೊಳ್ಳುತ್ತಾ ಇದ್ದರು. ಈ ಹಂತದಲ್ಲಿಯೇ ಅತುಲ್ಯ ಅಶೋಕನ್ ಒಬ್ಬ ಮುಸ್ಲಿಂ ಯುವಕನ ಪ್ರೀತಿಗೆ ಬಿದ್ದಳು. ಓಕೆ, ಮದುವೆಯಾಗಿ ಖುಷಿ ಖುಷಿಯಾಗಿದ್ದರೆ ಪರವಾಗಿರಲಿಲ್ಲ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆಕೆಯ ಇನ್ಟಾದಲ್ಲಿ ಆಕೆ ಬರೆದ ಸಂದೇಶ ಆಕೆಯ ಭವಿಷ್ಯವನ್ನು ಮತ್ತು ಆಕೆಯ ಬದುಕಿನಲ್ಲಿ ನಡೆಯುತ್ತಿರುವ ವಾಸ್ತವಾಂಶವನ್ನು ಸೂಚಿಸುತ್ತಿತ್ತು.
ಅತುಲ್ಯ ಬದಲಾಗುತ್ತಾಳಾ?
ಆಗಲೇ ಮತ್ತೊಮ್ಮೆ ಅವಳ ವಿರುದ್ಧ ವ್ಯಂಗ್ಯ, ಟೀಕೆ ಮತ್ತು ಕೆಲವರಿಂದ ಸಾಂತ್ವನದ ಸಂದೇಶಗಳು ಬಂದವು. ಹಿಂದೂ ಯುವತಿ ಹೀಗೆ ಲವ್ ಜಿಹಾದ್ ನಿಂದ ಸಂಕಷ್ಟಕ್ಕೆ ಒಳಗಾಗುವಾಗ ಅವಳ ವಿರುದ್ಧ ಮಾತನಾಡುವುದಕ್ಕಿಂತ ಅವಳನ್ನು ಮತ್ತೆ ಮನಪರಿವರ್ತಿಸಿ ಹಿಂದೂ ಧರ್ಮಕ್ಕೆ ಕರೆದುಕೊಂಡು ಬರಬೇಕು ಎನ್ನುವುದನ್ನು ಕೆಲವರು ಸಲಹೆ ನೀಡಿದ್ದಾರೆ. ಈ ನಡುವೆ ಮತ್ತೆ ಇನ್ಟಾದಲ್ಲಿ ಬರೆದು ಹಾಕಿರುವ ಅತುಲ್ಯ ತನ್ನ ಆಂತರಿಕ ವಿಷಯವನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಿ ನೋಡಬಾರದು. ಹಾಗೆ ಮಾಡುವುದು ಶೇಮ್. ಇದು ನನಗೂ ಮತ್ತು ಅವನಿಗೆ ಮಾತ್ರ ಸಂಬಂಧಿಸಿದ ವಿಷಯ. ನಾವು ಕಳೆದ ಒಂದು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಒಂದು ವೇಳೆ ನಾನೇನಾದರೂ ತಪ್ಪು ಮಾಡಿದ್ದರೆ ಅದರಿಂದ ನನ್ನ ಕುಟುಂಬ ತೊಂದರೆಗೆ ಒಳಗಾಗಬಾರದು. ನಾನೀಗ ಸುಧಾರಿಸಿಕೊಳ್ಳುತ್ತಿದ್ದೇನೆ ಮತ್ತು ಸುರಕ್ಷಿತವಾಗಿ ನೆಲೆಸಿದ್ದೇನೆ. ಇದನ್ನು ಕೋಮು ಸಂಘರ್ಷವಾಗಿ ಮಾಡಬೇಡಿ ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾಳೆ. ಒಟ್ಟಿನಲ್ಲಿ ಈಗ ಕೇರಳ ಸ್ಟೋರಿ ಅವಳ ಕಣ್ಣು ತೆರೆಸಿದಂತೆ ಕಾಣುತ್ತದೆ. ಆದರೆ ತನ್ನ ಹಿಂದಿನ ನಿಲುವುಗಳು ಮತ್ತು ಅನುಭವಿಸುತ್ತಿರುವ ಸಂಕಟದ ಬಗ್ಗೆ ಅವಳು ತೀವ್ರ ಮುಜುಗರಕ್ಕೆ ಒಳಗಾಗಿ ಜೀವಿಸುತ್ತಿರುವುದು ಅವಳ ಪೋಸ್ಟ್ ನಿಂದ ಜಗಜ್ಜಾಹೀರವಾಗಿದೆ.
Leave A Reply