ಗಾಂಧಿ ಕುಟುಂಬದ ಭರ್ತಡೇ ದಿನ ಕ್ರಿಕೆಟ್ ಮ್ಯಾಚ್ ಇದ್ರೆ ಭಾರತ ಸೋಲುತ್ತೆ – ಅಸ್ಸಾಂ ಸಿಎಂ
ಕ್ರೀಡಾಂಗಣದಲ್ಲಿ ಅಪಶಕುನ ಇದ್ದ ಕಾರಣ ಭಾರತ ವಿಶ್ವಕಪ್ ಫೈನಲ್ ಸೋಲುವಂತಾಯಿತು ಎಂದು ಕಾಂಗ್ರೆಸ್ ವಯನಾಡು ಸಂಸದ ರಾಹುಲ್ ಗಾಂಧಿ ಹೇಳಿದ ನಂತರ ಅದಕ್ಕೆ ಭಾರತೀಯ ಜನತಾ ಪಾರ್ಟಿಯ ಮುಖಂಡರು ಮತ್ತು ಮೋದಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಲ್ಲಿಯೂ ಗಾಂಧಿ ಕುಟುಂಬ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮಾಡುವ ಯಾವುದೇ ಆರೋಪ, ವ್ಯಂಗ್ಯ, ಟೀಕೆಗಳಿಗೆ ತೀಕ್ಣ ಪ್ರತಿಕ್ರಿಯೆ ನೀಡುವ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಸರ್ಮಾ ಅವರು ಇಂದಿರಾ ಗಾಂಧಿಯವರ ಜಯಂತಿಯಂದು ಪಂದ್ಯ ನಡೆದ ಕಾರಣ ಭಾರತ ಸೋಲುವಂತಾಗಿದೆ. ಆದ್ದರಿಂದ ಗಾಂಧಿ ಕುಟುಂಬದ ಯಾವುದೇ ವ್ಯಕ್ತಿಯ ಜನ್ಮದಿನದಂದು ಯಾವುದೇ ದೊಡ್ಡ ಪಂದ್ಯವನ್ನು ಆಯೋಜಿಸಬೇಡಿ ಎಂದು ತಾನು ಬಿಸಿಸಿಐಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಪುಷ್ಟೀಕರಿಸಿ ಮಾತನಾಡಿರುವ ಅವರು ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯಾಟದ ದಿನ ಪ್ರಿಯಾಂಕಾ ವಾದ್ರಾ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಜನರನ್ನು ಉದ್ದೇಶಿಸಿ 1983 ರಲ್ಲಿ ಭಾರತ ಗೆದ್ದಾಗ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು. ಇವತ್ತು ಇಂದಿರಾ ಗಾಂಧಿ ಜನ್ಮದಿನ ಭಾರತ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ್ದಿದ್ದರು. ಆದರೆ ಭಾರತ ಸೋತಿದೆ. ಇಂದಿರಾಗಾಂಧಿಯವರ ಹುಟ್ಟಿದ ದಿನದಂದು ಭಾರತ ಸೋತಿರುವುದನ್ನು ಮರೆಮಾಚಲು ರಾಹುಲ್ ಗಾಂಧಿ ಈ ಸೋಲಿಗೆ ಕಾರಣ ಹುಡುಕಿದ್ದಾರೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ಒಟ್ಟಿನಲ್ಲಿ ಗಾಂಧಿ ಕುಟುಂಬದ ಯಾರದ್ದೇ ಹುಟ್ಟಿದ ದಿನದಂದು ಪಂದ್ಯ ಇಟ್ಟರೆ ಅದು ಭಾರತಕ್ಕೆ ಅಪಶಕುನ ಎಂದು ಸರ್ಮಾ ನೇರವಾಗಿ ಗಾಂಧಿ ಪರಿವಾರವನ್ನು ಕುಟುಕಿದ್ದಾರೆ.
Leave A Reply