ಚೀನಾದಲ್ಲಿ ಮತ್ತೊಂದು ಸೋಂಕು, ಎಚ್ಚರವಹಿಸಲು ಭಾರತ ನಿರ್ಧಾರ
ಕೋವಿಡ್ ಬಳಿಕ ಇದೀಗ ಚೀನಾದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸೋಂಕು ವಿಶ್ವದಲ್ಲಿ ಮತ್ತೆ ಸಂಚಲನ ಉಂಟು ಮಾಡಿದೆ. ಎಚ್ 9 ಎನ್ 2 ಸೋಂಕು ನಿಗೂಢ ಸ್ವರೂಪದ್ದಾಗಿದ್ದು ನ್ಯುಮೋನಿಯಾ ರೀತಿಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಆರೋಗ್ಯ ಇಲಾಖೆ, ಪ್ರಕರಣದ ಕುರಿತು ತೀವ್ರ ನಿಘಾವಹಿಸಲು ಸೂಚಿಸಲಾಗಿದೆ.
ಚೀನಾದಲ್ಲಿ ಎಚ್ 9 ಎನ್ 2 ಸೋಂಕಿನಿಂದ ಆಸ್ಪತ್ರೆ ದಾಖಲಾಗುವ ಮಕ್ಕಳು ಶ್ವಾಸಕೋಶದ ಉರಿ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಫ್ಲ್ಯೂ ಆರ್ ಎಸ್ ವಿ ಅಥವಾ ಕೋವಿಡ್ ನಂತಹ ಇತರೆ ಶ್ವಾಸಕೋಶ ಸಂಬಂಧಿ ಸಮಸ್ಯೆ ವೇಳೆ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಈ ಕಾಯಿಲೆ ಕಳವಳಕ್ಕೆ ಕಾರಣವಾಗಿದೆ. ಚೀನಾದಲ್ಲಿ ಚಳಿಗಾಲ ವ್ಯಾಪಕವಾಗುತ್ತಿರುವ ಈ ಹೊತ್ತಿನಲ್ಲಿ ಕಾಣಿಸಿಕೊಂಡ ಈ ಸೋಂಕು ಪ್ರಸಕ್ತ ವಾತಾವರಣದಲ್ಲಿ ಇನ್ನಷ್ಟು ವ್ಯಾಪಕವಾಗುವ ಲಕ್ಷಣಗಳು ಕಾಣಿಸಿವೆ. ಕೋವಿಡ್ ರೀತಿ ಜಗತ್ತಿಗೆ ಈ ಸೋಂಕು ಹರಡುವ ಸಾಧ್ಯತೆ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದೆ ಕೊರೊನಾವನ್ನು ಮುಚ್ಚಿಡುವ ರೀತಿಯಲ್ಲಿ ಈಗ ಈ ಹೊಸ ಸೋಂಕನ್ನು ಕೂಡ ಮುಚ್ಚಿಡುವ ಕೆಲಸ ಚೀನಾ ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದನ್ನು ಸಾಮಾನ್ಯ ಅನಾರೋಗ್ಯ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಆತಂಕ ಜಗತ್ತಿನಲ್ಲಿ ಇದೆ.
Leave A Reply