ಸರಕಾರಕ್ಕೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಆಹಾರವೇ ಮುಖ್ಯವಾಯಿತೇ!
ನೋಡುವಲ್ಲಿ, ಹೋಗುವಲ್ಲಿ, ತಿನ್ನುವಲ್ಲಿ, ಮಾತಾಡುವಲ್ಲಿ, ಹೀಗೆ ಎಲ್ಲಾ ವಿಚಾರದಲ್ಲೂ ಕೂಡ ಮಕ್ಕಳನ್ನು ಹದ್ದುಬದ್ದಿನಲ್ಲಿಟ್ಟು ಕೊಳ್ಳಲೇಬೇಕು. ಏಕೆಂದರೆ ಮಕ್ಕಳಿಗೆ ಅದು ಯಾವುದು ಕೂಡ ಗೊತ್ತಾಗುವುದಿಲ್ಲ. ನಮ್ಮ ಸಂಸ್ಕೃತಿಯನ್ನು, ನಮ್ಮ ಆಚಾರ ವಿಚಾರವನ್ನು, ಮೊದಲು ಬಲವಂತವಾಗಿಯೇ ತಿಳಿಸಿಕೊಡುವುದು ತಂದೆ ತಾಯಿಗಳ ಕರ್ತವ್ಯ. ಈ ವಿಚಾರದಲ್ಲಿ ಹಿಂದುವಾಗಲಿ, ಮುಸ್ಲಿಂ ಆಗಲಿ, ಕ್ರೈಸ್ತ ಆಗಲಿ, ಯಾರಿಗೂ ಭೇದಭಾವವಿಲ್ಲ ಎಲ್ಲಾ ಮಕ್ಕಳು ಅವರವರ ಮತದ ಆಚಾರ ವಿಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ನಾವು ಕಾಣುತ್ತೇವೆ.
ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಿಯ ಕುರಿತು ಎಳ್ಳಿನ ಶಿಕ್ಷಣವು ಇವತ್ತು ಇಲ್ಲ.ಮಾತ್ರವಲ್ಲ ಇವತ್ತಿನ ವಾತಾವರಣ ಕೂಡ ಹಿಂದುಗಳಿಗೆ ವಿರುದ್ಧವಾಗಿದೆ.ನಮ್ಮ ಸಂಸ್ಕೃತಿಗೆ ಪ್ರತೀಕವಾದ ಯಾವುದೇ ವೇಷಭೂಷಣಗಳು ಹುಡುಗಿಯರಿಗೆ ಹಾಕುವಂತಿಲ್ಲ. ಆದರೆ ಹಿಜಾಬಿಗೆ ನಿರ್ಬಂಧ ವಿಲ್ಲ. ಕುಂಕುಮ ಇಟ್ಟುಕೊಳ್ಳುವುದು ಕೋಮುವಾದ. ಆದರೆ ಟೊಪ್ಪಿ ಹಾಕಿಕೊಳ್ಳಬಹುದು. ಹೀಗೆ ಬೇಕಾದಷ್ಟಿದೆ. ಮಕ್ಕಳಲ್ಲಿ ಸಾಮಾನ್ಯ ಪ್ರಜ್ಞೆಯನ್ನು ಕಲ್ಪಿಸಿಕೊಳ್ಳಲಾಗದ ಇವತ್ತಿನ ಸರ್ಕಾರಕ್ಕೆ ಎಲ್ಲದರಲ್ಲೂ ಹಿಂದೂಗಳನ್ನು ಮತ್ತಷ್ಟು ರಾಜಕೀಯ ದಾಟಕ್ಕೆ ಗುರಿಪಡಿಸುವುದೇ ಉದ್ದೇಶ.
ಬಿಸಿ ಊಟದೊಂದಿಗೆ ಮೊಟ್ಟೆಯನ್ನು ಕೊಡುತ್ತಾರೆ ಎನ್ನುವಾಗ ಮೊದಲು ಎದೆ ಬಡಿತ ಸುರುವಾದದ್ದೆ ಸಸ್ಯಾಹಾರಿಗಳಿಗೆ. ಇವತ್ತಿಗೂ ಬೇಕಾದಷ್ಟು ಮನೆಯಲ್ಲಿ ಕೇವಲ ಸಸ್ಯಹಾರ ತಿನ್ನುವವರಿದ್ದಾರೆ. ಇದು ಗೊತ್ತಿದ್ದು, ಬೇಕೆಂದೇ ಸರ್ಕಾರ ಬಿಸಿ ಊಟದೊಂದಿಗೆ ಮೊಟ್ಟೆಯನ್ನು ಕೊಡಲು ಶುರು ಮಾಡಿದ್ದು. ಶಾಲೆಯಲ್ಲಿ ತನ್ನ ಮಗು ಎಲ್ಲಿ, ಮೊಟ್ಟೆ ಕೊಡುವಾಗ ತಿನ್ನುತ್ತದೆ ಎನ್ನುವ ತಲೆಬಿಸಿಯಲ್ಲಿ ತಂದೆ-ತಾಯಿಗಳು ಇರುವ ಹಾಗೆ ಮಾಡಿದ ಸರಕಾರಕ್ಕೆ ಮೊದಲು ಧಿಕ್ಕಾರ ಹೇಳಬೇಕು. ಏಕೆಂದರೆ ಬೌದ್ಧಿಕವಾದ ವಿಚಾರದಲ್ಲಿ ಪೌಷ್ಟಿಕಾಂಶ ಕೊಡಬೇಕಾದ ಶಾಲೆ ಆಹಾರದ ವಿಚಾರದಲ್ಲಿ ಪೌಷ್ಟಿಕಾಂಶವನ್ನು ಕೊಡುವ ಅಗತ್ಯವಿರಲ್ಲ. ಬೆಳಗ್ಗೆ ತಂದಿರುವ ಬುತ್ತಿಯಲ್ಲಿರುವ ಆಹಾರ ತಣ್ಣಗಾಗಿ ವಿಷಕಾರಿಯಾಗುವ ಪರಿಣಾಮವಿರುತ್ತದೆ. ಆದ್ದರಿಂದ ಬಿಸಿಯೂಟವನ್ನು ಬೇಕಾದರೆ ಒಪ್ಪಬಹುದು. ಆದರೆ ಅದರೊಟ್ಟಿಗೆ ಮೊಟ್ಟೆಯನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ.ಇಷ್ಟು ಹೇಳುವಾಗ ಹಿಂದೂಗಳಲ್ಲಿಯೇ ಮಾಂಸಹಾರ ತಿನ್ನುವವರು ಸಸ್ಯಹಾರಿಗಳ ಮೇಲೆ ಹೋರಾಟಕ್ಕೆ ಬರುತ್ತಾರೆ. ಇದು ನಮ್ಮ ದುರಂತ.
ಒಂದು ವೇಳೆ ಮೊಟ್ಟೆಯನ್ನು ಕೊಡುವುದು ಸರಿಯೆಂದು ಒಪ್ಪಿದರೆ ನಾಳೆ ಇನ್ನೊಬ್ಬ ಅಧಿಕಾರಿ ಬಂದು ಮೀನಿನ ಸಾರನ್ನು ಕೂಡ ಬಡಿಸಿಯಾನು. ಮಟ್ಟಿಗಿಂತಲೂ ಹೆಚ್ಚಿನ ಪೌಷ್ಟಿಕಾಂಶ ಇದರಲ್ಲಿದೆ ಎಂದು ಹೇಳಿದರೆ ಆಯ್ತಲ್ಲವೇ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ. ಅಷ್ಟೇ ಅಲ್ಲದೆ ಶಿವಮೊಗ್ಗದ ಘಟನೆಯನ್ನೇ ನೋಡಿ. ಮನೆಯವರು ಖುದ್ದಾಗಿ ಬಂದು ಶಾಲೆಯಲ್ಲಿ ನನ್ನ ಮಗುವಿಗೆ ಮೊಟ್ಟೆಯನ್ನು ಕೊಡಬೇಡಿ ಎಂದು ಹೇಳಿಕೊಂಡಿದ್ದರು. ಶಾಲೆಯವರು ಅದಕ್ಕೆ ಬೇಕಾದ ಜಾಗ್ರತೆಯನ್ನು ಮಾಡಬೇಕಿತ್ತು. ಆದರೆ ಮೀಸಲಾತಿಯೊಂದಿಗೆ ಅಧ್ಯಾಪಕ ಸ್ಥಾನವನ್ನು ಪಡೆದ ಅವರಿಗೆ ಈ ಸಸ್ಯಹಾರದ ಮಹತ್ವವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಎಲ್ಲದರಲ್ಲೂ ನಿರ್ಲಕ್ಷ್ಯ ಮಾಡುವ ಸರ್ಕಾರದ ಅಧಿಕಾರಿಗಳಂತೆ ಇವರು ಕೂಡ ಉಳಿದ ಮಕ್ಕಳೊಂದಿಗೆ ಕುಳಿತ ಈ ಮಗುವಿಗೂ ಕೂಡ ಮೊಟ್ಟೆಯನ್ನು ಕೊಟ್ಟಿದ್ದಾರೆ. ಈಗ ಒತ್ತಾಯದಿಂದ ಕೊಡಲಿಲ್ಲ ಆ ಮಗುವೆ ತಿಂದಿದೆ ಎಂದು ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅವರು ಸತ್ಯವನ್ನೇ ಹೇಳಿರಬಹುದು. ಆದರೆ ಮಕ್ಕಳಿಗೆ ಉಳಿದ ವಿಚಾರದಲ್ಲಿ ಬುದ್ಧಿ ಹೇಳುವ ಹಾಗೂ ಹುಡುಕಿ ಹುಡುಕಿ ಶಿಕ್ಷೆ ಕೊಡುವ ಅಧ್ಯಾಪಕರಿಗೆ ಈ ವಿಚಾರದಲ್ಲಿ ಯಾಕೆ ನಿರ್ಲಕ್ಷ್ಯ ಭಾವ ಇದೆ ಎಂದು ಸರ್ಕಾರ ಪ್ರಶ್ನಿಸ ಬೇಕು. ಆದರೆ ಸರ್ಕಾರವೇ ಮೊಟ್ಟೆಯನ್ನು ಕೊಡಲು ಹೇಳಿದ್ದಲ್ಲವೇ, ಇದು ಇಲ್ಲಿಗೆ ಶಾಂತವಾಗುತ್ತದೆ. ಆದರೆ ಒಮ್ಮೆ ಮೊಟ್ಟೆಯ ರುಚಿಯನ್ನು ಕಂಡ ಆ ವಿದ್ಯಾರ್ಥಿ ಮತ್ತೆ ಮೊಟ್ಟೆಯನ್ನು ತಿನ್ನದಂತೆ ತಡೆಯುವುದು ಮನೆಯವರಿಗೆ ಹರಸಾಹಸದ ಪ್ರಕ್ರಿಯೆಯಾಗುತ್ತದೆ. ಮೊಟ್ಟೆಯನ್ನು ತಿಂದ ವಿದ್ಯಾರ್ಥಿಯ ಮನೆಯವರ ಶಾಪದಿಂದ ಅಧ್ಯಾಪಕರ ಹಾಗೂ ಅಧಿಕಾರಿಗಳ ಮಕ್ಕಳು ಡ್ರಗ್ಸ್ ತಿನ್ನಲು ಶುರು ಮಾಡಿದರೆ ಅಲ್ಲಿಗೆ ಈ ಪಾಪಕ್ಕೆ ಪ್ರಾಯಶ್ಚಿತ್ತ ಸಿಗಬಹುದೋ ಏನೋ….
Leave A Reply