ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!
ಭರ್ತಡೇಗೆ ದುಬೈಗೆ ಕರೆದುಕೊಂಡು ಹೋಗಿಲ್ಲವೆಂದು ಕೋಪಗೊಂಡ ಹೆಂಡತಿ ಗಂಡನಿಗೆ ಹೊಡೆದ ರಭಸಕ್ಕೆ ಗಂಡ ಸಾವಿಗೀಡಾದ ಘಟನೆ ನಡೆದಿದೆ. ಪುಣೆಯ ವಾನವಾಡಿ ಪೊಲೀಸ್ ಸ್ಟೇಶನ್ ಇದರ ಹಿರಿಯ ಪೊಲೀಸ್ ಅಧಿಕಾರಿಯವರ ಪ್ರಕಾರ “ಹೆಂಡತಿ ರೇಣುಕ ಗಂಡ ತನ್ನ ಹುಟ್ಟುಹಬ್ಬದಂದು ದುಬಾರಿ ಉಡುಗೊರೆ ಕೊಡಲಿಲ್ಲ ಎಂದು ತಗಾದೆ ತೆಗೆದಿದ್ದಾಳೆ. ಇನ್ನು ದುಬೈಗೆ ಹೋಗಿ ಹುಟ್ಟುಹಬ್ಬ ಆಚರಣೆ ಮಾಡುವ ಎನ್ನುವ ಬೇಡಿಕೆಯನ್ನು ಗಂಡ ಈಡೇರಿಸಿಲ್ಲ. ಅದರೊಂದಿಗೆ ದೆಹಲಿಗೂ ತನ್ನ ಜೊತೆ ಗಂಡ ಬರುವುದಿಲ್ಲ ಎಂದು ಕೋಪಗೊಂಡ ಪತ್ನಿ ರೇಣುಕ ಗಂಡ ನಿಖಿಲ್ ಖನ್ನಾನ ಮುಖಕ್ಕೆ ಬಲವಾದ ಪಂಚ್ ನೀಡಿದ್ದಾಳೆ.
ಹೆಂಡತಿಯ ಹೊಡೆತ ಮುಖಕ್ಕೆ ಬಿದ್ದ ರಭಸಕ್ಕೆ 36 ವರ್ಷದ ನಿಖಿಲ್ ಖನ್ನಾ ಮೂಗಿನ ಮೂಳೆ ಮುರಿದು ರಕ್ತ ಸುರಿದಿದ್ದು, ಖನ್ನಾ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಆರು ವರ್ಷಗಳ ಹಿಂದೆ ರೇಣುಕಳನ್ನು ಪ್ರೀತಿಸಿ ಮದುವೆಯಾಗಿದ್ದ ನಿಖಿಲ್ ಖನ್ನಾ ಉದ್ಯಮಿಯಾಗಿದ್ದು, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.”
38 ವರ್ಷದ ರೇಣುಕಾ ವಿರುದ್ಧ ಐಪಿಸಿ 302 ಪ್ರಕಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Leave A Reply