ಶಿಂಧೆ ಶಿರಚ್ಚೇದನಕ್ಕೆ ಕಾಶ್ಮೀರದಲ್ಲಿ ಒತ್ತಾಯ!

ವಿಡಿಯೋ ಶೇರ್ ಮಾಡಿದ್ದಕ್ಕೆ ಯುವಕನ ಶಿರಚ್ಚೇದನಕ್ಕೆ ಕಾಶ್ಮೀರದಲ್ಲಿ ಒತ್ತಾಯ!
ಹಮಾಸ್ ಲೀಡರ್ ಮಗನೊಬ್ಬ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದರೆನ್ನಲಾದ ವಿವಾದಾತ್ಮಕ ವಿಡಿಯೋವೊಂದನ್ನು ಕಾಶ್ಮೀರದ ವಿದ್ಯಾರ್ಥಿಯೊಬ್ಬ ಶೇರ್ ಮಾಡಿಕೊಂಡ ಎನ್ನುವ ವಿಷಯ ಕಾಶ್ಮೀರದಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿದೆ. ಯುವಕ ಮೂಲತ: ಮಹಾರಾಷ್ಟ್ರದವನ್ನಾಗಿದ್ದು ಹೆಸರು ಪ್ರಥಮೇಶ್ ಶಿಂಧೆ. ಈತ ಕಾಶ್ಮೀರದ ಶ್ರೀನಗರದ ಎನ್ ಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತ ಶೇರ್ ಮಾಡಿದ ವಿಡಿಯೋ ಮುಸ್ಲಿಂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದೆ. ಆದ್ದರಿಂದ ಕೆಲವು ಮುಸ್ಲಿಂ ಸಂಘಟನೆಗಳು ಇತನ ಶಿರಚ್ಚೇದ ಮಾಡುತ್ತೇವೆ ಎಂದು ಘೋಷಣೆ ಕೂಗಿರುವ ವಿಡಿಯೋ ಕೂಡ ವೈರಲ್ ಆಗಿದೆ. ಅದರೊಂದಿಗೆ ಈತ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇದು ಕೂಡ ಮುಸ್ಲಿಂ ಸಂಘಟನೆಗಳ ಯುವಕರ ಕೋಪಕ್ಕೆ ಗುರಿಯಾಗಿದೆ. ಒಟ್ಟಿನಲ್ಲಿ ಅವರಿಬ್ಬರ ಜೀವಕ್ಕೆ ಅಪಾಯ ಇರುವುದು ಈಗ ಪತ್ತೆಯಾಗಿದೆ.
ಭಾರತೀಯ ಜನತಾ ಪಾರ್ಟಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಟಿವಿ ಡಿಬೇಟ್ ವೊಂದರಲ್ಲಿ ಆಡಿದ ಮಾತುಗಳು ಅವಳ ಜೀವಕ್ಕೆ ಅಪಾಯವನ್ನು ತಂದೊಡ್ಡಿತ್ತು. ನೂಪುರ್ ವಿರುದ್ಧ ಮುಸ್ಲಿಂ ಸಂಘಟನೆಗಳು ಸಾಕಷ್ಟು ಪ್ರತಿಭಟನೆ ನಡೆಸಿದ್ದವು. ಕಲ್ಲು ತೂರಾಟ, ದೊಂಬಿಗಳು ನಡೆದಿದ್ದವು. ಡಿಬೇಟಿನಲ್ಲಿ ಆಕೆ ನುಡಿದಿದ್ದ ಮಾತುಗಳನ್ನೇ ಹಮಾಸ್ ಮುಖಂಡನ ಮಗ ಹೇಳಿರುವ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ಅದನ್ನು ಶೇರ್ ಮಾಡಿದ ಪ್ರಥಮೇಶ್ ಶಿಂಧೆ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಯುವಕ ಮಹಾರಾಷ್ಟ್ರ ಮೂಲದವನಾಗಿರುವುದರಿಂದ ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ತಕ್ಷಣ ಯುವಕನ ರಕ್ಷಣೆಗೆ ಮುಂದಾಗಬೇಕೆಂದು ಏಕ್ಸ್ ನಲ್ಲಿ ಹಲವರು ಆಗ್ರಹಿಸಿದ್ದಾರೆ.
Leave A Reply