ಸುರಂಗದಿಂದ ಪಾರಾಗಿ ಬಂದವರಿಗೆ ತಲಾ 1 ಲಕ್ಷ ರೂಪಾಯಿ-ಉತ್ತರಾಖಂಡ ಸಿಎಂ
ಸುರಂಗದಿಂದ ಪಾರಾಗಿ ಬಂದವರಿಗೆ ತಲಾ 1 ಲಕ್ಷ ರೂಪಾಯಿ!
ಭಾರತ ಕಂಡ ಅತೀ ದೊಡ್ಡ ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಒಂದಾಗಿರುವ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಿಂದ ಪಾರಾಗಿ ಬಂದ 41 ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ ದಾಮಿ ಘೋಷಿಸಿದ್ದಾರೆ. ಕಾರ್ಮಿಕರು ಸುರಂಗದಿಂದ ಸುರಕ್ಷಿತವಾಗಿ ಹೊರಗೆ ಬರುವಾಗ ಅವರನ್ನು ಅಲ್ಲಿಯೇ ಕಾದು ನಿಂತು ಸ್ವಾಗತಿಸಿದ ಮುಖ್ಯಮಂತ್ರಿಯವರ ನಡೆ ಶ್ಲಾಘನೆಗೆ ಪಾತ್ರವಾಗಿತ್ತು. ಅದರೊಂದಿಗೆ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ಅತ್ಯಾಧುನಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡಿ ಅವರು ಮನೆ ತಲುಪುವ ತನಕ ಜವಾಬ್ದಾರಿಯನ್ನು ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉತ್ತರಖಂಡ ಸಿಎಂ ಹೇಳಿದ್ದಾರೆ.
“ನಾನು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿಯವರು ನಿತ್ಯ ಈ ವಿಷಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಕೇಂದ್ರದಿಂದ ಸೂಕ್ತ ನೆರವನ್ನು ಕಲ್ಪಿಸಿದ್ದಾರೆ. ಅವರ ಸಹಾಯವಿಲ್ಲದೇ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ದಾಮಿ ತಿಳಿಸಿದರು. ಉತ್ತರಖಂಡದಲ್ಲಿ ನೈಸರ್ಗಿಕ ವಿಕೋಪಗಳು ಸರ್ವೆ ಸಾಮಾನ್ಯವಾಗಿದ್ದರೂ ಪ್ರತಿ ಬಾರಿ ಅಂತಹ ಸಂದರ್ಭದಲ್ಲಿ ಸಿಎಂ ಈ ಕಾರ್ಯಾಚರಣೆಗಳಲ್ಲಿ ತೆಗೆದುಕೊಳ್ಳುವ ಕ್ರಮಗಳಿಂದ ಪರಿಸ್ಥಿತಿ ನಿರೀಕ್ಷೆಗಿಂತ ಶೀಘ್ರದಲ್ಲಿ ಸುಧಾರಣೆಗೊಳ್ಳುತ್ತಿರುವುದು ನಿಜಕ್ಕೂ ಮಾದರಿಯಾಗಿದೆ.
Leave A Reply