ನಿತೀಶ್ ಗೆ ಹಿಂದೂಗಳ ನಾಡಿಮಿಡಿತ ಗೊತ್ತಿದೆ!
ಇದನ್ನು ನೋಡಿ ಸ್ವತ: ಮುಸಲ್ಮಾನರು ಕೂಡ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಅಸಹ್ಯಪಟ್ಟುಕೊಂಡಾರು. ಇ.0.ಡಿ.ಯಾ ಮೈತ್ರಿಕೂಟದ ಬೆಸುಗೆಯಾಗಿರುವ ನಿತೀಶ್ ಅವರಿಗೆ ಹೇಗಾದರೂ ಮಾಡಿ ಒಮ್ಮೆಯಾದರೂ ಪ್ರಧಾನಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕೆನ್ನುವುದು ಹಳೆಯ ಆಸೆ. ಅದಕ್ಕಾಗಿ ಮಮತಾಳಿಂದ ಹಿಡಿದು ಸೋರೇನ್ ತನಕ ಇದ್ದಬದ್ದವರನ್ನೇಲ್ಲಾ ಒಟ್ಟು ಮಾಡಿ ಅಲ್ಲಲ್ಲಿ ಸಭೆ ಮಾಡಿ ಒಗ್ಗಟ್ಟು ಪ್ರದರ್ಶಿಸುವ ಕೆಲಸ ಮಾಡುತ್ತಲೇ ಬಂದರು. ಆದರೆ ಅವರು ಏನು ಮಾಡಿದರೂ ಅವರ ದುರಾದೃಷ್ಟಕ್ಕೆ ರೈಲು ಹಳಿಗಳ ಮೇಲೆ ಸ್ವಲ್ಪ ದೂರ ಹೋಗಿ ಮತ್ತೆ ದಾರಿ ತಪ್ಪಿ ಎಲ್ಲೆಲ್ಲೋ ಓಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಹಾಗಿರುವಾಗ ಅದನ್ನು ಸರಿ ಮಾಡಲು ಸಮಯ ವ್ಯರ್ಥ ಮಾಡುವುದನ್ನು ಪಕ್ಕಕ್ಕೆ ಇಟ್ಟು ತನ್ನದೇ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟು ಪಡೆದುಕೊಂಡರೆ ಪ್ರಧಾನಿ ಹುದ್ದೆಗೆ ಒಂದು ಕೈ ನೋಡಬಹುದು ಎಂದು ನಿತೀಶ್ ಲೆಕ್ಕಹಾಕಿದ್ದಾರೆ. ಎಲ್ಲಿಯಾದರೂ ಅಪ್ಪಿತಪ್ಪಿ ಎನ್ ಡಿಎಗೆ ಬಹುಮತ ಬರದೇ ವಿಪಕ್ಷಗಳಿಗೆ ಬಂದುಬಿಟ್ಟರೆ ಆಗ ಅತೀ ಹೆಚ್ಚು ಸೀಟು ಗಳಿಸಿದ ಪಕ್ಷದ ನಾಯಕನನ್ನು ಪ್ರಧಾನಿ ಮಾಡಲಾಗುತ್ತೆ. ಕರ್ನಾಟಕದಲ್ಲಿ ಹಿಂದೆ ದೇವೆಗೌಡರಿಗೆ ಲಕ್ಕು ಹೊಡೆದ ಹಾಗೆ ಈ ಬಾರಿ ತಮಗೆ ಹೊಡೆದುಬಿಟ್ಟರೆ ಎನ್ನುವ ಖುಷಿಯಿಂದ ನಿತೀಶ್ ತಾವೇ ತಮ್ಮ ಬಿಲ್ಲನ್ನು ಎದೆಗೆ ಏರಿಸಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಅವರು ಕೈಹಾಕಿದ್ದು ಸರಕಾರಿ ರಜೆಗಳಿಗೆ.
ಯಾವ ರಜೆ ಕಟ್, ಯಾವುದು ಹೆಚ್ಚುವರಿ!
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ, ಶ್ರೀರಾಮನವಮಿ, ಶಿವರಾತ್ರಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ಬಿಹಾರ ಶಿಕ್ಷಣ ಇಲಾಖೆ ರದ್ದುಗೊಳಿಸಿದೆ. ಇನ್ನು ಗಾಂಧಿ – ಶಾಸ್ತ್ರಿಜಯಂತಿಯಾದ ಅಕ್ಟೋಬರ್ 2 ರಂದು ನೀಡುವ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಅದರೊಂದಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಕೂಡ ಇರುವುದಿಲ್ಲ. ಅದರೊಂದಿಗೆ ಬಿಹಾರದ ಸ್ಥಳೀಯ ಹಬ್ಬಗಳಾದ ತೇಜ್ ಮತ್ತು ವಸಂತ ಪಂಚಮಿಗೆ ಕೊಡುವ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಇಷ್ಟೇ ಆಗಿದ್ದರೆ ಅದು ಬೇರೆ ವಿಷಯ. ಆದರೆ ಬರಿ ಹಿಂದೂಗಳ ರಜೆ ಕಡಿಮೆ ಮಾಡಿದರೆ ಏನು ಪ್ರಯೋಜನ. ಆ ರಜೆಗಳನ್ನು ಮುಸ್ಲಿಮರ ಹಬ್ಬಗಳಂದು ಹೆಚ್ಚುವರಿಯಾಗಿ ಕೊಟ್ಟರೆ ಮುಸ್ಲಿಮರು ಖುಷಿಪಡುತ್ತಾರೆ ಎಂದು ನಿತೀಶ್ ಪ್ಲಾನ್ ಮಾಡಿದ್ದಾರೆ. ಹಾಗೆ ಬಕ್ರೀದ್ ಹಬ್ಬಕ್ಕೆ 3 ದಿನ, ಈದ್ ಮಿಲಾದ್ ಗೆ 3 ದಿನ, ಮೊಹರಂಗೆ 2 ದಿನ ರಜೆಯನ್ನು ಹೆಚ್ಚಿಸಲಾಗಿದೆ. ಸದ್ಯ ಇದು ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಎಂದುಕೊಂಡರೂ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸಾರ್ವತ್ರಿಕವಾಗಿ ಜಾರಿ ಬರಲು ತಡವಾಗಲಿಕ್ಕಿಲ್ಲ.
ನಿತೀಶ್ ಗೆ ಹಿಂದೂಗಳ ನಾಡಿಮಿಡಿತ ಗೊತ್ತಿದೆ!
ನಿತೀಶ್ ಮಾಡಿದ ಈ ನಿರ್ಧಾರವನ್ನು ಸಹಜವಾಗಿ ಭಾರತೀಯ ಜನತಾ ಪಾರ್ಟಿ ವಿರೋಧಿಸಿದೆ. ಆದರೆ ನಿತೀಶ್ ಇದನ್ನು ಕ್ಯಾರೇ ಮಾಡಿಲ್ಲ. ಯಾಕೆಂದರೆ ಹಿಂದೂಗಳಿಗೆ ನೀವು ಏನೇ ಮಾಡಿದ್ರೂ ಅವರು ಕೊನೆಯಲ್ಲಿ ಜಾತಿಗಳ ನಡುವೆ ಓಡೆದು ಹಂಚಿ ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಅವರಲ್ಲಿ ಒಗ್ಗಟ್ಟು ಎನ್ನುವುದು ಇಲ್ಲವೇ ಇಲ್ಲ ಎಂದು ನಿತೀಶ್ ಗೆ ಗೊತ್ತಿದೆ. ಅದೇ ಮುಸ್ಲಿಮರನ್ನು ಓಲೈಸಿದರೆ ಅವರು ಖುಷಿಗೊಂಡು ಸಾರಾಸಗಟಾಗಿ ತಮಗೆ ವೋಟ್ ಹಾಕುತ್ತಾರೆ ಎಂಬ ಧೈರ್ಯ ಅವರಿಗೆ ಇದೆ. ಬಿಹಾರದಲ್ಲಿ ಕಾಂಗ್ರೆಸ್ಸಿಗೆ ಕೇಳುವವರು ಇಲ್ಲ. ನಿತೀಶ್ ಅವರ ಜೆಡಿಯು, ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮುಸ್ಲಿಂ ಮತಗಳು ಪಾಸ್ವಾನ್ ಪಕ್ಷಕ್ಕೆ ಹೋಗಬಾರದು ಎಂದಾದರೆ ತಾವು ಇಂತಹ ಒಂದು ಹೆಜ್ಜೆಯನ್ನು ಇಡಲೇಬೇಕು ಎನ್ನುವುದು ನಿತೀಶ್ ಅವರಿಗೆ ಅರಿವಿದೆ.
Leave A Reply