ಅರ್ನಾಬ್ ಗೋಸ್ವಾಮಿ ವಿರುದ್ಧ ಸುಳ್ಳು ಟಿಆರ್ ಪಿ ಕೇಸ್ ಹಿಂಪಡೆಯಲು ನ್ಯಾಯಾಲಯದಲ್ಲಿ ಪೊಲೀಸರ ಅರ್ಜಿ!
ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ಸಂಪಾದಕ ಮತ್ತು ಆಡಳಿತ ನಿರ್ದೇಶಕ ಅರ್ನಬ್ ಗೋಸ್ವಾಮಿ ವಿರುದ್ಧ ಇರುವ ಫೇಕ್ ಟಿಆರ್ ಪಿ ಕೇಸನ್ನು ಹಿಂಪಡೆಯಲು ಅನುಮತಿ ಕೋರಿ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಹಾಕಿದೆ.
2020 ರ ಅಕ್ಟೋಬರ್ ನಲ್ಲಿ ಈ ಪ್ರಕರಣದಲ್ಲಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಸ್ ಆರ್ ಸಿ) ಪರವಾಗಿ ಹಂಸ ರಿಸರ್ಚ್ ಗ್ರೂಪ್ ದಾವೆ ಹೂಡಿತ್ತು. ದಾವೆಯಲ್ಲಿ ಕೆಲವು ಟಿವಿ ವಾಹಿನಿಗಳು ಟಿಆರ್ ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ವಿಷಯದಲ್ಲಿ ಗೋಲ್ ಮಾಲ್ ಮಾಡುತ್ತಿವೆ ಎಂದು ಆರೋಪಿಸಲಾಗಿತ್ತು. ಸಪ್ಲಿಮೆಂಟರಿ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಗೋಸ್ವಾಮಿಯನ್ನು ಆರೋಪಿಸಿ ಎಂದು ಹೆಸರಿಸಿದ್ದರು. ಅವರು ಬಿಎಆರ್ ಸಿ ಮಾಜಿ ಸಿಇಒ ಪಾರ್ತೋ ದಾಸ್ ಗುಪ್ತಾ ಅವರೊಂದಿಗೆ ಸೇರಿಕೊಂಡು ಟಿಆರ್ ಪಿ ಟೂಲ್ ದುರುಪಯೋಗಪಡಿಸಿದ್ದರು ಎಂದು ಸಪ್ಲಿಮೆಂಟರಿ ಚಾರ್ಜ್ ಶೀಟ್ ನಲ್ಲಿ ನಮೂದಿಸಲಾಗಿತ್ತು. ಅಷ್ಟೇ ಅಲ್ಲದೇ ದಾಸಗುಪ್ತ ಜೊತೆ ಗೋಸ್ವಾಮಿ ನಡೆಸಿದ ವಾಟ್ಸಪ್ ಚಾಟ್ ಪೂರಕ ಸಾಕ್ಷ್ಯ ಎಂದು ಹೇಳಲಾಗಿತ್ತು.
ಆದರೆ ಈಗ ಪ್ರಾಸಿಕ್ಯೂಶನ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿ ಈ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 28 ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಒಟ್ಟು 12 ಜನರನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ರಿಪಬ್ಲಿಕ್ ಟಿವಿಯ ಪ್ರಸರಣ ಅಧಿಕಾರಿ ಹಾಗೂ ಬೇರೆ ಎರಡು ವಾಹಿನಿಗಳ ಮುಖ್ಯಸ್ಥರು ಸೇರಿದ್ದರು. ಪ್ರಸ್ತುತ ಎಲ್ಲಾ ಆರೋಪಿಗಳು ಬೇಲ್ ನಲ್ಲಿದ್ದಾರೆ. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಲಾಗಿತ್ತು. ಆದರೆ ಜಾರಿ ನಿರ್ದೇಶನಾಲಯ ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿ ರಿಪಬ್ಲಿಕ್ ಟಿವಿ ಇದರಲ್ಲಿ ತಪ್ಪಿತಸ್ಥ ಅಲ್ಲ ಎಂದು ತಿಳಿಸಿತ್ತು.
Leave A Reply