ಚೋಪ್ರಾ ಆಗಲ್ಲ ಎಂದದ್ದಕ್ಕೆ ರಶ್ಮಿಕಾ ಆದ್ಲು ರಣಬೀರ್ ಜೋಡಿ!
ಸಿನೆಮಾ ಎನ್ನುವುದೇ ಒಂದು ಗ್ಯಾಮ್ಲಿಂಗ್. ಇಲ್ಲಿ ಯಾರು ಯಾವಾಗ ಸ್ಟಾರ್ ಗಳಾಗುತ್ತಾರೆ. ಯಾವಾಗ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ರಶ್ಮಿಕಾ ಮಂದಣ್ಣ ವಿಷಯದಲ್ಲಿಯೂ ಹಾಗೆ ಆಗಿದೆ. ಎನಿಮಲ್ ಸಿನೆಮಾ ಅದಕ್ಕೆ ಸಾಕ್ಷಿ.
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಸಿನೆಮಾ ಎನಿಮಲ್ ಈಗಾಗಲೇ ಸಿನೆಮಾ ಪ್ರಿಯರ ಮನಸ್ಸನ್ನು ರಂಜಿಸುತ್ತಿದೆ. ಕೊಡಗಿನ ಬೆಡಗಿ ರಶ್ಮಿಕಾ ಈ ಸಿನೆಮಾದಲ್ಲಿ ರಣಬೀರ್ ಜೊತೆ ಬಿಸಿಬಿಸಿ ಕಿಸ್ ದೃಶ್ಯಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಅವರ ಕಿಸ್ಸಿನ ಪೋಸ್ಟರ್ ಗಳೇ ಯುವಜೋಡಿಗಳನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ರಶ್ಮಿಕಾ ಈ ಸಿನೆಮಾದ ಮೂಲಕ ಬಾಲಿವುಡ್ ನಲ್ಲಿ ಭದ್ರವಾಗಿ ಊರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಆದರೆ ಈ ಸಿನೆಮಾದ ನಿರ್ದೇಶಕರ ಮೊದಲ ಆಯ್ಕೆ ರಣಬೀರ್ ಜೋಡಿಯಾಗಿ ರಶ್ಮಿಕಾ ಆಗಿರಲಿಲ್ಲ ಎನ್ನುವುದು ಈಗ ಬಂದಿರುವ ಮಾಹಿತಿ.
ಅವರು ರಣಬೀರ್ ಎದುರು ಪರಿಣೀತಿ ಚೋಪ್ರಾ ಒಳ್ಳೆಯದಾಗಿ ಸೂಟ್ ಆಗುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಬೇರೊಂದು ಸಿನೆಮಾಕ್ಕೆ ಕಮೀಟ್ ಆಗಿದ್ದ ಪರಿಣಿತಿ ಇದಕ್ಕೆ ಡೇಟ್ ಹೊಂದಿಸಲು ಆಗುವುದಿಲ್ಲ ಎಂದು ಈ ಸಿನೆಮಾದ ಅಫರ್ ಕೈಬಿಟ್ಟಿದ್ದರು.
ಆಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿ ಆದದ್ದೇ ರಶ್ಮಿಕಾ ಅವರನ್ನು. ನಂತರ ಈಗ ಸಿನೆಮಾ ಏನಾಗಿದೆ ಎಲ್ಲರಿಗೂ ಗೊತ್ತು. ಈ ಬಗ್ಗೆ ಪರಿಣಿತಿ ಚೋಪ್ರಾ ಮಾತನಾಡುತ್ತಾ ” ಸಿನೆಮಾ ಜೀವನದಲ್ಲಿ ಇದೆಲ್ಲಾ ಸಾಮಾನ್ಯ” ಎಂದಿದ್ದಾರೆ.
Leave A Reply