ಪಂಚಾಯತ್ ಮೂಲಕ ಅಂಗಡಿ ಪಡೆದಿದ್ದ ಆತ!
ನೇರವಾಗಿ ಹೇಳುವುದಾದರೆ ದೇವಸ್ಥಾನಗಳ ಹೊರಗೆ ಅಂಗಡಿಗಳನ್ನು ಇಡಲು ಅನುಮತಿ ಕೊಡುವ ಸಂಬಂಧಪಟ್ಟ ಪಂಚಾಯತ್ ಅಥವಾ ದೇವಸ್ಥಾನಗಳ ಸಮಿತಿಯವರು ಸ್ಟಾಲ್ ಇಡಲು ಮುಂದೆ ಬಂದವರು ಕೇವಲ ವ್ಯವಹಾರಿಕ ಉದ್ದೇಶಕ್ಕೆ ಬಂದಿದ್ದಾರೋ ಅಥವಾ ಅವರಿಗೆ ದೇವರ ಮೇಲೆ ಭಕ್ತಿಭಾವ ಇದೆಯೋ ಎನ್ನುವುದು ನೋಡಬೇಕು. ಯಾಕೆಂದರೆ ಧಾರ್ಮಿಕ ಸ್ಟಾಲ್ ಗಳು ಎಂದರೆ ಅದು ಮಾಲ್ ನಲ್ಲಿ ಇಡುವ ಅಂಗಡಿಗಳ ಹಾಗೆ ಅಲ್ಲ. ಇದಕ್ಕೆ ಪ್ರತ್ಯೇಕವಾದ ಮನಸ್ಥಿತಿ ಬೇಕು. ಇಲ್ಲಿ ಬರುವ ಗ್ರಾಹಕರ ಬಗ್ಗೆ ಒಂದು ರೀತಿಯ ಪೂಜ್ಯ ಭಾವನೆ ಬೇಕು. ವ್ಯಾಪಾರ ಎಂದರೆ ಲಾಭ ನಿಜ. ಆದರೆ ಲಾಭಕ್ಕಾಗಿ ಧಾರ್ಮಿಕ ವಠಾರವನ್ನು ಹೇಗೆ ಬೇಕಾದರೂ ಬಳಸುತ್ತೇನೆ ಎನ್ನುವ ಕೆಲಸಕ್ಕೆ ಇಳಿಯಬಾರದು.
ಪಂಚಾಯತ್ ಮೂಲಕ ಅಂಗಡಿ ಪಡೆದಿದ್ದ ಆತ!
ಆದರೆ ಅದು ಶಬರಿಮಲೆ ವಿಷಯದಲ್ಲಿ ಆಗಿದೆ. ಶಬರಿಮಲೆ ದೇವರ ಸನ್ನಿಧಿಗೆ ಹೋದವರಿಗೆ ಅಲ್ಲಿ ಏಳು ಮಲೆ ಬೆಟ್ಟ ಎನ್ನುವುದು ಗೊತ್ತಿದೆ. ಅಲ್ಲಿ ಶಬರಿಮಲೆ ಯಾತ್ರಿಗಳು ಒಂದಿಷ್ಟು ಹೊತ್ತು ತಂಗಿ, ಸ್ನಾನ ಮಾಡಿ, ಒಂದಿಷ್ಟು ಅಹಾರ ಸೇವಿಸಿ ಮುಂದುವರೆಯುತ್ತಾರೆ. ಅಲ್ಲಿ ಭಕ್ತರಿಗಾಗಿ ಅನೇಕ ಅಂಗಡಿಗಳು ತೆರೆದಿರುತ್ತವೆ. ಆ ಅಂಗಡಿಗಳಿಗೆ ಒಳ್ಳೆಯ ವ್ಯಾಪಾರ ಇರುತ್ತದೆ. ಶಬರಿಮಲೆ ಒಂದು ನಿರ್ದಿಷ್ಟ ಸೀಸನ್ ನಲ್ಲಿ ಬರುವುದರಿಂದ ಅಲ್ಲಿ ಏಳು ಮಲೆ ಬೆಟ್ಟದ ಒಂದು ಭಾಗದಲ್ಲಿ ಅಂಗಡಿಗಳ ವ್ಯವಸ್ಥೆಯನ್ನು ಸ್ಥಳೀಯ ಪಂಚಾಯತ್ ಮಾಡುತ್ತದೆ. ಅಂಗಡಿಗಳನ್ನು ತೆರೆಯಲು ಬಯಸುವವರಿಗೆ ಲೈಸೆನ್ಸ್ ನೀಡಲಾಗುತ್ತದೆ. ಅದಕ್ಕೆ ಪಂಚಾಯತ್ ನಲ್ಲಿ ಅರ್ಜಿ ನೀಡಿ, ನಿಗದಿಪಡಿಸಿದ ಹಣ ಕಟ್ಟಿ, ಅನುಮತಿ ಸಿಕ್ಕಿದ ತಕ್ಷಣ ವ್ಯಾಪಾರವನ್ನು ಆರಂಭಿಸಬಹುದು. ಹಾಗೆ ಅನುಮತಿ ಪಡೆದು ಕಾಫಿ, ಟೀ, ಜ್ಯೂಸಿನ ಅಂಗಡಿ ತೆರೆದವನ ಹೆಸರು ಮಹಮ್ಮದ್ ಶಮೀನ್. ಅವನು ಅಂಗಡಿ ತೆರೆದು ನ್ಯಾಯಯುತವಾಗಿ ವ್ಯಾಪಾರ ಮಾಡುತ್ತಿದ್ದರೆ ಈ ಜಾಗೃತಿ ಅಂಕಣದಲ್ಲಿ ಈ ವಿಷಯದ ಪ್ರಸ್ತಾಪವನ್ನೇ ಮಾಡುವ ಅಗತ್ಯವಿರಲಿಲ್ಲ. ಆದರೆ ಶಮೀಮ್ ಹಾಗೆ ನೆಟ್ಟಗೆ ವ್ಯಾಪಾರ ಮಾಡಿಲ್ಲ. ಹೇಗೂ ಶಬರಿಮಲೆಗೆ ಬರುವ ಯಾತ್ರಿಕರು. ಇವತ್ತು ಬರುತ್ತಾರೆ, ನಾಳೆ ಹೋಗ್ತಾರೆ. ಇವರಿಗೆ ಏನು ಮಾಡಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ, ಶಾಂತವಾಗಿ ಮುಂದುವರೆಯುತ್ತಾರೆ ಎಂದುಕೊಂಡು ಅವನು ಮಾಡಿದ ಕಚಡಾ ಕೆಲಸ ಇದೆಯಲ್ಲ, ಅದನ್ನು ಅಯ್ಯಪ್ಪ ಸ್ವಾಮಿ ಬಿಡಿ, ಅವನದ್ದೇ ದೇವರು ಕೂಡ ಕ್ಷಮಿಸುವುದಿಲ್ಲ.
ಇದನ್ನು ಹಾಗೆ ಬಿಟ್ಟರೆ ಕಷ್ಟ!
ಮೊಹಮ್ಮದ್ ಶಮೀಮ್ ತನ್ನ ಕಾಫಿ, ಟೀ, ಜ್ಯೂಸಿಗೆ ಬಳಸುತ್ತಿದ್ದ ನೀರೇ ಡ್ರೈನೇಜಿನದ್ದು. ಅವನ ಅಂಗಡಿಯ ಹತ್ತಿರದಲ್ಲಿ ಒಂದು ತೋಡು ಹರಿಯುತ್ತದೆ. ಅದರಲ್ಲಿ ವ್ರತಧಾರಿಗಳು ಸ್ನಾನ ಮಾಡಿದ, ಮೂತ್ರ ಮಾಡಿದ ನೀರು ಹರಿಯುತ್ತಾ ಇರುತ್ತದೆ. ಇವನು ಏನು ಮಾಡಿದ ಎಂದರೆ ಆ ತೋಡಿಗೆ ಒಂದು ಪೈಪು ನೀಡಿ ಹರಿದು ಹೋಗುವ ಗಲೀಜು ನೀರು ಒಂದು ಟ್ಯಾಂಕಿನಲ್ಲಿ ತುಂಬುವಂತೆ ಮಾಡಿದ. ಆ ಟ್ಯಾಂಕಿಗೆ ಒಂದು ಪೈಪ್ ನೀಡಿ ಅದೇ ನೀರನ್ನು ಒಂದು ಬಕೆಟಿನಲ್ಲಿ ತುಂಬಿಸಿ ಆ ಕಲ್ಮಶಯುಕ್ತ ನೀರನ್ನು ತನ್ನ ಅಂಗಡಿಯ ಎಲ್ಲಾ ಅವಶ್ಯಕತೆಗಳಿಗೆ ಬಳಸುತ್ತಿದ್ದ. ಇದು ಸುಮಾರು ಎರಡು ವಾರ ನಡೆದಿದೆ. ನಂತರ ಇದು ಯಾರಿಗೋ ಸಂಶಯ ಬಂದಿದೆ. ಅವರು ತಕ್ಷಣ ಇದನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ನಂತರ ಇದನ್ನು ಪಂಚಾಯತ್ ಅವರ ಗಮನಕ್ಕೆ ತಂದು ಅವರು ಕೊನೆಗೆ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ.
ಇಂತವರಿಗೆ ಈ ಕೇಸಿನಲ್ಲಿ ಅದರಲ್ಲಿಯೂ ಕಮ್ಯೂನಿಸ್ಟರ ನಾಡಿನಲ್ಲಿ ಎಂತಹ ವಿಚಾರಣೆ ಆಗುತ್ತದೆ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಆದರೆ ಹೀಗೆ ಮಾಡುವವರಿಗೆ ಕಠಿಣ ಶಿಕ್ಷೆ ಕೊಡದೇ ಹೋದರೆ ಅವರಿಗೆ ಬುದ್ಧಿ ಬರುವುದಿಲ್ಲ. ಇನ್ನು ಅವನ ಮೇಲೆ ಸಣ್ಣಪುಟ್ಟ ಪಿಟ್ಟಿ ಕೇಸ್ ಹಾಕಿ ಕಳುಹಿಸಿದರೆ ಅವನು ತನ್ನ ಊರಿಗೆ ಹೋಗಿ ತಾನು ಹಿಂದೂಗಳಿಗೆ ಹೇಗೆ ಮೋಸ ಮಾಡಿದೆ ಎಂದು ತಿಳಿಸಿ ದೊಡ್ಡ ಫೋಸ್ ನೀಡುತ್ತಾನೆ. ಅನ್ಯಧರ್ಮಿಯರ ಬಳಿ ಹಿಂದೂಗಳ ಜಾತ್ರೆಯ ಸಮಯದಲ್ಲಿ ವ್ಯಾಪಾರ ಮಾಡಬೇಡಿ ಎಂದು ಕೇಸರಿ ಸಂಘಟನೆಯವರು ಹೇಳುತ್ತಾ ಬರುತ್ತಾರೆ. ಹಿಂದೂಗಳ ಅಂಗಡಿ ಎಂದು ಗೊತ್ತಾಗಲು ಸ್ಟಾಲ್ ಹೊರಗೆ ಕೇಸರಿ ಫ್ಲಾಗ್ ನೇತಾಡಿಸಿರುತ್ತಾರೆ. ಆದರೂ ಹಿಂದೂಗಳು ಪರಮಸಹಿಷ್ಣುತೆಯನ್ನು ಮೈಗೂಡಿಸಿಕೊಂಡು ಬಂದಿರುವುದರಿಂದ ಅಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ಈಗ ಆಟಿಕೆ, ಬಟ್ಟೆಯಾದರೆ ಬೇರೆ ವಿಷಯ. ಆದರೆ ನೇರವಾಗಿ ದೇಹಕ್ಕೆ ಸೇರುವ ಪದಾರ್ಥಗಳಿಗೆ ಗಲೀಜು ನೀರು ಸೇರಿಸಿ ಕೊಟ್ಟರೆ ಅದಕ್ಕೆ ಏನು ಮಾಡುವುದು. ಒಬ್ಬ ಶಮೀಮ್ ನಿಂದ ಎಲ್ಲರಿಗೂ ಕೆಟ್ಟ ಹೆಸರು!
Leave A Reply