ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!

ಉತ್ತರ ಪ್ರದೇಶದ ಫತೇಪುರದ ಹಾರ್ದಿಕ್ ವರ್ಮ ಎಂಬ 32 ಯುವಕ ನೆದರ್ ಲ್ಯಾಂಡಿನ ಯುವತಿ 21 ವರ್ಷದ ಗಬ್ರೀಯಾ ಅವರನ್ನು ಮದುವೆಯಾಗಿದ್ದಾರೆ. ಉದ್ಯೋಗ ನಿಮಿತ್ತ ನೆದರ್ ಲ್ಯಾಂಡಿಗೆ ತೆರಳಿದ್ದ ಹಾರ್ದಿಕ್ ವರ್ಮಾ ಅಲ್ಲಿನ ಫಾರ್ಮಾಸುಟಿಕಲ್ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಸಹೋದ್ಯೋಗಿ ಗಾಬ್ರೀಲ್ಲಾ ಅವರನ್ನು ಭೇಟಿಯಾಗಿದ್ದರು.
ಅಲ್ಲಿ ಆಕೆಯನ್ನು ಪ್ರೀತಿಸಲು ಶುರು ಮಾಡಿದ ಹಾರ್ದೀಕ್ ಗೆ ಗಾಬ್ರೀಲ್ಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಬ್ಬರೂ ಮೂರು ವರ್ಷದಿಂದ ಲಿವಿಂಗ್ ಟುಗೆದರ್ ಬಳಿಕ ಈಗ ಮದುವೆ ಆಗುವ ನಿರ್ದಾರಕ್ಕೆ ಬಂದಿದ್ದಾರೆ.
ಕಳೆದ ವಾರ ಹಾರ್ದೀಕ್ ವರ್ಮಾ ಹಾಗೂ ಗಾಬ್ರೀಲ್ಲಾ ಫತೇಪುರಕ್ಕೆ ಬಂದು ಅಲ್ಲಿ ಹಾರ್ದೀಕ್ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇನ್ನು ಡಿಸೆಂಬರ್ 25 ಕ್ಕೆ ನೆದರ್ ಲ್ಯಾಂಡಿಗೆ ಮರಳಲಿರುವ ನವದಂಪತಿ ಅಲ್ಲಿನ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆಯಾಗಲಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ ಪ್ರಸ್ತುತ ನೆಲೆಸಿರುವ ಹಾರ್ದಿಕ್ ಕುಟುಂಬ ಅಲ್ಲಿ ಡಿಸೆಂಬರ್ 11 ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ. ಅದರಲ್ಲಿ ಗಾಬ್ರೀಲ್ಲಾ ಅವರ ಪೋಷಕರು, ಸಂಬಂಧಿಕರು ಭಾಗವಹಿಸಲಿದ್ದಾರೆ.
Leave A Reply