ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
ಜನವರಿ 22, 2024 ಸನಾತನಿಗಳ ಪಾಲಿಗೆ ಬಹಳ ಪುಣ್ಯದ ದಿನ. ಅಂದು ಶತಕೋಟಿ ಭಾರತೀಯರ ನೂರಾರು ವರ್ಷಗಳ ಕನಸು ಈಡೇರುವ ದಿನ. ಜನವರಿ 22 ರಂದು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭಗವಂತ ಶ್ರೀರಾಮಚಂದ್ರ ದೇವರ ಭವ್ಯಮೂರ್ತಿಯ ಪ್ರಾಣಪ್ರತಿಷ್ಟೆಯ ಜೊತೆಗೆ ಶ್ರೀರಾಮ ಮಂದಿರ ಲೋಕಾರ್ಪಣೆಯ ಕಾರ್ಯ ಕೂಡ ನಡೆಯಲಿದೆ. ಇದಕ್ಕಾಗಿ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗುತ್ತಿದ್ದು, ಸಾಮಾನ್ಯ ಜನರಿಗೂ ಆಹ್ವಾನ ಪತ್ರಿಕೆಯನ್ನು ನೀಡಲು ಟ್ರಸ್ಟ್ ತೀರ್ಮಾನಿಸಿದೆ.
ಆಹ್ವಾನ ಪತ್ರಿಕೆಯಲ್ಲಿ ಇರುವ ವಿಶೇಷ ಏನೆಂದರೆ ” ಸುದೀರ್ಘ ಹೋರಾಟದ ನಂತರ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜನವರಿ 22, 2024 ರಂದು ರಾಮಲಲ್ಲಾನ ವಿಗ್ರಹವನ್ನು ಹೊಸ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಈ ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗಲು ಮತ್ತು ಮಹಾನ್ ಐತಿಹಾಸಿಕ ದಿನದ ಘನತೆಯನ್ನು ಹೆಚ್ಚಿಸಲು ನೀವು ಈ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಉಪಸ್ಥಿತರಿರಬೇಕು ಎಂಬುದು ನಮ್ಮ ಬಲವಾದ ನಂಬಿಕೆಯಾಗಿದೆ. ಇದಕ್ಕಾಗಿ ಜನವರಿ 21 ರ ಮೊದಲು ಅಯೋಧ್ಯೆಗೆ ಭೇಟಿ ನೀಡಲು ನಿಮ್ಮನ್ನು ವಿನಂತಿಸುತ್ತಿದ್ದೇವೆ. ನೀವು ಅಯೋಧ್ಯೆಗೆ ಎಷ್ಟು ಬೇಗ ಬರುತ್ತೀರೋ ಅಷ್ಟು ಅನುಕೂಲವಾಗುತ್ತದೆ. ನೀವು ತಡವಾಗಿ ಬಂದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಮುನ್ನ ಅಯೋಧ್ಯೆಗೆ ಬರಬೇಕು” ಎಂದು ಮನವಿ ಮಾಡಲಾಗಿದೆ.
ಈ ಅದ್ದೂರಿ ಕಾರ್ಯಕ್ರಮಕ್ಕೆ ಆರು ಸಾವಿರ ಜನರಿಗೆ ಆಹ್ವಾನಪತ್ರ ಕಳುಹಿಸಲಾಗುವುದು. ಅದರಲ್ಲಿ ಪುರೋಹಿತರು, ಮಹಾನ್ ದಾನಿಗಳು, ಕೆಲವು ರಾಜಕಾರಣಿಗಳು ಕೂಡ ಇದ್ದಾರೆ ಎಂದು ತಿಳಿಸಲಾಗಿದೆ
Leave A Reply