ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
ಯುನೈಟೆಡ್ ಸ್ಟೇಟ್ ನಲ್ಲಿ ಇರುವ ಒಂದು ಪುಟ್ಟ ದೇಶದ ಹೆಸರು ಅಲಸ್ಕಾ. ಅಲಸ್ಕಾದಲ್ಲಿರುವ ಒಂದು ಪುಟ್ಟ ಊರೇ ವೈಟಿಯರ್. ವೈಟಿಯರ್ ನ ಒಟ್ಟು ಜನಸಂಖ್ಯೆ ಸುಮಾರು 272. ಈ ಊರಿನಲ್ಲಿ 14 ಮಹಡಿಗಳ ಒಂದು ಬೃಹತ್ ಕಟ್ಟಡ ಇದೆ. ಈ ಕಟ್ಟಡದಲ್ಲಿ ಊರಿನ ಬಹುತೇಕ ಜನರು ವಾಸ ಮಾಡುತ್ತಾರೆ. ಆ ಬಿಲ್ಡಿಂಗ್ ಹೆಸರು ಬೇಗಿಕ್ ಟವರ್ಸ್. ಈ ಊರಿಗೆ ಇರುವ ಅಡ್ಡ ಹೆಸರು “ಒಂದೇ ಸೂರಿನಡಿ ಇಡೀ ಊರು” . 1953 ರಲ್ಲಿ ಈ ಕಟ್ಟಡ ಪೂರ್ಣಗೊಂಡಾಗ ಅದರಲ್ಲಿ ಯೋಧರ ವಾಸಸ್ಥಾನವಾಗಿ ಬಳಸು ನಿರ್ಧರಿಸಲಾಗಿತ್ತಾದರೂ ಇತ್ತೀಚೆಗೆ ಅದು ನಾಗರಿಕರ ವಸತಿಗೆ ಅನುಕೂಲವಾಗಿ ಬಳಕೆಯಾಗುತ್ತಿದೆ. ಆ ಕಟ್ಟಡದಲ್ಲಿ ಪೋಸ್ಟ್ ಆಫೀಸ್, ಜಿನಸು ಅಂಗಡಿ, ಪೊಲೀಸ್ ಸ್ಟೇಶನ್, ಲಾಂಡ್ರಿ, ಹೆಲ್ತ್ ಕ್ಲಿನಿಕ್, ಮೇಯರ್ ಕಚೇರಿ, ಒಳಾಂಗಣ ಈಜುಕೊಳ ಕೂಡ ಇದೆ.
ಈ ಊರಿಗೆ ಇರುವ ಸಂಪರ್ಕಗಳು ಎರಡೇ ಆಗಿದ್ದು ಒಂದು ವಾಯು ಮಾರ್ಗ ಇನ್ನೊಂದು ಸುರಂಗ ಮಾರ್ಗ. ವಿಮಾನ, ಹೆಲಿಕಾಪ್ಟರ್ ಮೂಲಕ ಸಂಪರ್ಕ ಹೊಂದಿರುವ ವೈಟಿಯರ್ ಗೆ ಇರುವ ಇನ್ನೊಂದು ದಾರಿ ಎಂದರೆ ಹತ್ತಿರದ ಮೇನಾರ್ಡ್ ಬೆಟ್ಟದಿಂದ ಎರಡು ಮೈಲು ಅಂತರದ ಟನೆಲ್ ನಿರ್ಮಿಸಲಾಗಿದೆ. ಚಳಿಗಾಲದಲ್ಲಿ ಅತ್ಯಂತ ಭೀಕರ ಶೀತಹವೆ ಇರುವುದರಿಂದ ಬೇಗಿಚ್ ಟವರ್ ನಲ್ಲಿ ಜನರು ಒಂದೇ ಏರಿಯಾದಲ್ಲಿ ವಾಸಿಸುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಾಗಿದೆ. ಈ ಕಟ್ಟಡ ಬಿಟ್ಟರೆ ಇನ್ನೊಂದು ಕಾಂಡೋ ಹೆಸರಿನ ಕಟ್ಟಡವಿದ್ದು, ಅಲ್ಲಿ ಒಂದಿಷ್ಟು ಜನರು ವಾಸ ಮಾಡುತ್ತಾರೆ. ಈ ಊರಿನಲ್ಲಿರುವ ಶಾಲೆ ಮತ್ತು ಜಿಮ್ ಅನ್ನು ಪ್ರತ್ಯೇಕ ಜಾಗೆಯಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಬೇಗಿಚ್ ಕಟ್ಟಡದಿಂದ ಒಂದು ಸುರಂಗ ವ್ಯವಸ್ಥೆ ಮಾಡಲಾಗಿದ್ದು, ಶೀತ ಸಮಯದಲ್ಲಿಯೂ ಮಕ್ಕಳು ಶಾಲೆಗೆ ಹೋಗಿ ಬರಲು ಉತ್ತಮ ಸಂಪರ್ಕ ಕಲ್ಪಿಸಲಾಗಿದೆ. ಇಂತಹ ಪುಟ್ಟ ಊರುಗಳ ಕಥೆ ಕೂಡ ರೋಚಕವಾಗಿರಬಹುದು, ಅಲ್ವೇ!
Leave A Reply