• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!

Santhosh Kumar Mudradi Posted On December 6, 2023
0


0
Shares
  • Share On Facebook
  • Tweet It

ಕಂಬಳವನ್ನು ನಿಲ್ಲಿಸಬೇಕೆಂದು ಹೋರಾಟ ಮಾಡುವ ಪ್ರಾಣಿ ದಯಾ ಸಂಘಗಳಿಗೆ ತಾಕತ್ತಿದ್ದರೆ,ಅರ್ಜುನನ ಸಾವಿಗೆ ನ್ಯಾಯ ಒಗಿಸಲಿ.

60 ವರ್ಷ ಮೇಲ್ಪಟ್ಟ ಕಾರಣದಿಂದ ಅರ್ಜುನನ್ನು ಅಂಬಾರಿಯನ್ನು ಹೊರದಂತೆ ಕೋರ್ಟ್ ನಿಷೇಧಿಸಿತ್ತು. ಒಂದು ವೇಳೆ ನಿಷೇಧವಿಲ್ಲದಿದ್ದರೆ ಈಗಲೂ ಕೂಡ ಈ ಅಧಿಕಾರಿಗಳು ಆತನಿಂದಲೇ ಹೊರಿಸುತ್ತಿದ್ದರೋ ಏನೋ. ಮತ್ತೊಂದು ಆನೆಯನ್ನು ಇದಕ್ಕಾಗಿ ನಿಯೋಜಿಸಿ, ಟ್ರೈನಿಂಗ್ ಕೊಡುವ ಖರ್ಚು ಇವರ ಮನೆಗೆ ಸೇರುತ್ತದೆಯಲ್ಲವೇ. ನಿಷೇಧವಿದ್ದ ಕಾರಣ ಅನಿವಾರ್ಯವಾಗಿ ಬದಲಾಯಿಸಬೇಕಾಯಿತು. ಆದರೆ ಅರವತ್ತು ವರ್ಷ ಕಳೆದ ಆನೆಯನ್ನು ಕಾದಾಟಕ್ಕೆ ಇಳಿಸಬಾರದು ಎನ್ನುವುದು ಕೋರ್ಟ್ ಆದೇಶಿಸಿಲ್ಲ.ಆದ್ದರಿಂದ ಅಧಿಕಾರಿಗಳು ಮನುಷ್ಯತ್ವವನ್ನು ಬದಿಗಿಟ್ಟು ಪ್ರಾಣಿಗಿಂತಲೂ ಕಡೆಯಾಗಿ ಅರ್ಜುನನನ್ನು ಏಕಾಂಗಿಯಾಗಿ ಆ ಮದಗಜದ ನಿಯಂತ್ರಣಕ್ಕೆ ಕಳುಹಿಸಿ ನಿರ್ದಯವಾಗಿ ಕೊಂದರು ಎಂದೇ ಹೇಳಬೇಕಷ್ಟೆ.

ಜೊತೆಗಿದ್ದ ಆನೆಗಳು ಕೂಡ ಬದುಕಿನ ಆಸೆಗಾಗಿ ಕೈಕೊಟ್ಟವು. ಆದರೆ ಹಿಡಿದ ಕಾರ್ಯವನ್ನು ಪೂರ್ಣಗೊಳಿಸದೆ ಹಿಂತಿರುಗುವ ಜಾಯಮಾನದವನಲ್ಲ ಈ ಅರ್ಜುನ. ತಾನು ಮಾತ್ರ ಸತತ ಹೋರಾಡುತ್ತಲೇ ತನ್ನ ಪ್ರಾಣವನ್ನು ಸಮರ್ಪಿಸಿಕೊಂಡ. ಆನೆಗಾದರೂ ತನ್ನ ಕರ್ತವ್ಯ ಪ್ರಜ್ಞೆಯ ಜಾಗೃತಿ ಇಷ್ಟು ಮಟ್ಟಿಗೆ ಇದೆ. ಆದರೆ ಸರ್ಕಾರದ ಅಧಿಕಾರಿಗಳು ಯಥಾ ಪ್ರಕಾರ ಹೊತ್ತಿ ಹೊತ್ತಿಗೆ ತಿನ್ನುವುದನ್ನು, ತಿರುಗುವುದನ್ನು, ತಮ್ಮ ಕರ್ತವ್ಯ ಎಂದು ಭಾವಿಸಿದ ಕಾರಣ ಈ ಅವ್ಯವಸ್ಥೆ ಘಟಿಸಿತು ಎಂದು ಎಲ್ಲರೂ ಒಳಗೊಳಗೆ ಹೇಳಿಕೊಳ್ಳುತ್ತಿದ್ದಾರೆ.

ಇವತ್ತು ವಿಜ್ಞಾನ ಬೇಕಾದಷ್ಟು ಮುಂದುವರಿದಿದೆ. ಆದರೂ ಕೂಡ ಒಂದು ಮದವೇರಿದ ಒಂಟಿ ಸಲಗವನ್ನು ಪಳಗಿಸಲು ಹಳೆಯ ಕಾಲದ ಹಾಗೆ ಸಾಕಿದ ಆನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಅಥವಾ ಸರ್ಕಾರಗಳಿಗೆ ಇದಕ್ಕೆ ಬೇಕಾದ ಸಲಕರಣೆಗಳನ್ನು ಉಪಯೋಗಿಸಿಕೊಳ್ಳಬಹುದು.ಎಲ್ಲದಕ್ಕೂ ಅಗತ್ಯವನ್ನು ಮೀರಿದ ಸಲಕರಣೆಗಳು ಆಯುಧಗಳು ಒದಗುತ್ತಿದೆ. ಆದರೂ ಕೂಡ ಇದಕ್ಕಾಗಿ ರಾಜ್ಯದ ಗೌರವದ ಸಂಕೇತವಾಗಿದ್ದ ಅರ್ಜುನ ಯಕ್ಕಶ್ಚಿತವಾಗಿ ತನ್ನವರು ಯಾರು ಇಲ್ಲದೆ ಸಾಯಬೇಕಾಯಿತು ಎಂದರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಧಿಕ್ಕಾರವನ್ನು ಹೇಳಲೇಬೇಕು. ಇದೇನು ಅರ್ಜುನನೇ ಮೊದಲಲ್ಲ. ಆದರೆ ಸಾಯುವ ಆನೆಗಳಿಗೆ ಮರುಗಿ ಹೋರಾಡುವವರಿಲ್ಲದ ಕಾರಣ ಈ ಚಾಳಿ ಮುಂದುವರೆಯುತ್ತಲೇ ಇದೆ. ಆದ್ದರಿಂದಲೇ ಇಂತಹ ಸಾವುಗಳು ಮತ್ತೆ ಮತ್ತೆ ಸಂಭವಿಸುತ್ತಿದೆ. ಈ ಅರ್ಜುನನ ಸಾವಿನಿಂದ ಇದು ನಿಲ್ಲಲೇ ಬೇಕು.

ರಾಜ್ಯಕ್ಕೆ ದಸರಾ ಹೆಮ್ಮೆಯ ವಿಚಾರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ದಸರಾ ಸಮಯದಲ್ಲಿ ಅಂಬಾರಿಯನ್ನು ಹೊರುವ ಆನೆ ರಾಜ್ಯದ ಗೌರವದ ಪ್ರತಿನಿಧಿಯಾಗದೆ ಇರಲು ಸಾಧ್ಯವೇ. ಈ ಸಾಂಸ್ಕೃತಿಕ ಕಾರ್ಯಕ್ರಮ ಬಂದು ಉದ್ಘಾಟಿಸಿದರೆ ಸಾಕು, ಆತನಿಗೆ ಸರ್ಕಾರದಿಂದ ಅದೆಷ್ಟು ಗೌರವಗಳು ಸಲ್ಲಿಕೆಯಾಗುತ್ತದೆ. ಅಂತದ್ದರಲ್ಲಿ ಸತತ ಏಳೆಂಟು ವರ್ಷ ಸಾವಿರ ಕೆಜಿಯ ಅಂಬಾರಿಯನ್ನು ಹೊತ್ತು ಸಾಗಿ ರಾಜ್ಯದ ಸೇವೆಯನ್ನು ಮಾಡಿದ ಆನೆ ಇಷ್ಟು ನಿರ್ಲಕ್ಷ್ಯವಾಗಿ ಸಾಯುವುದು ಖಂಡಿತ ಅವಮಾನ. ಸಾಮಾನ್ಯ ಬೀದಿ ನಾಯಿಗಳಿಗೂ, ಮಾನ್ಯತೆಯನ್ನು, ಹೋರಾಟವನ್ನು ಮಾಡುವ ಕಾಲದಲ್ಲಿ, ಅಂಬಾರಿಯನ್ನು ಹೊರುವ ಆನೆ ಈ ರೀತಿಯಾಗಿ ಸಾಯುವುದು ಉಚಿತವೇ. ಇದಕ್ಕೆ ಬೇಕಾದ ಗೌರವವನ್ನು ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳು ಕೊಡಲೇಬೇಕಿತ್ತು. ಅಧಿಕಾರಿಗಳು ತಮಗೆ ಅಧಿಕಾರವನ್ನು ಅನುಭವಿಸಲು ಮಾತ್ರ ಬರುವುದು ಕರ್ತವ್ಯವನ್ನು ಮಾಡಲು ಬರುವುದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇರುತ್ತಾರೆ.

ಸರ್ಕಾರ ಹಾಗೂ ಅಧಿಕಾರಿಗಳಿಂದ ಈ ಸಾವಿಗೆ ನ್ಯಾಯ ಒದಗಿಸುವುದನ್ನು ಖಂಡಿತಾ ನಿರೀಕ್ಷಿಸಲು ಸಾಧ್ಯವಿಲ್ಲ. ಮನುಷ್ಯರ ಸಾವಿಗೆ ನ್ಯಾಯ ಸಿಗದ ಕಾಲದಲ್ಲಿ ಈ ಮೂಕ ಪ್ರಾಣಿಯ ಸಾವಿಗೆ ನ್ಯಾಯ ಸಿಗುವುದು ಎಲ್ಲಿಂದ ಬಂತು.

ಪ್ರಾಣಿಗಳಿಗೂ ಕೂಡ ಪೂಜೆ ಮಾಡುವ ಸಂಸ್ಕೃತಿ ನಮ್ಮದು. ಇದಕ್ಕೆ ಗೋಪೂಜೆಯೆ ಸಾಕ್ಷಿ. ಕಂಬಳದ ಕೋಣಗಳು ಯಜಮಾನನ ಆರೈಕೆಯಲ್ಲಿ ವೈಭವದಲ್ಲಿ ಬದುಕುತ್ತವೆ. ದಿನವೂ ಮುತ್ತಿಟ್ಟು ಆರಾಧಿಸುವಾಗ ಹೊಡೆಯುವ ಪ್ರಮೇಯವೇ ಇರುವುದಿಲ್ಲ. ಆದರೆ ಇದು ಯಾವುದನ್ನೂ ಗಮನಿಸದ ಪ್ರಾಣಿ ದಯಾ ಸಂಘದವರು ಒಂದು ದಿವಸ ಕಂಬಳದಲ್ಲಿ ಹೊಡೆದ ಮಾತ್ರಕ್ಕೆ ಜೀವ ಹೋಗುವ ಹಾಗೆ ಬೊಬ್ಬೆ ಹಾಕಿ ಕಂಬಳವನ್ನು ನಿಲ್ಲಿಸುವ ಮಟ್ಟಿಗೆ ಬಂದಿದ್ದರು. ಆದರೆ ಇದಕ್ಕಿಂತಲೂ ಘನ ಘೋರವಾದ ಅಪರಾಧ ಈ ಅರ್ಜುನನ ಸಾವು. ಯೋಗ್ಯತೆಯಿದ್ದರೆ ಪ್ರಾಣಿ ದಯಾ ಸಂಘದವರು ಇದಕ್ಕೆ ನ್ಯಾಯ ಒದಗಿಸಬೇಕು.ಆಗ ಮಾತ್ರ ತನ್ನ ಮನೆಯವರು ಸತ್ತ ದುಃಖಕ್ಕಿಂತಲೂ ಹೆಚ್ಚಿನ ದುಃಖವನ್ನು ಅನುಭವಿಸುತ್ತಿರುವ ಮಾವುತರ ದುಃಖಕ್ಕೆ ಸಮಾಧಾನವಾಗುತ್ತದೆ.

ಹೇಗೆ ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿಗೆ ಗೌರವವಿದೆಯೋ ಅದೇ ರೀತಿಯಲ್ಲಿ ಅಂಬಾರಿಯನ್ನು ಬರುವ ಆನೆಗೂ ಆ ಗೌರವ ಸಲ್ಲಲಿ. ಆಗ ಮಾತ್ರ ಅರ್ಜುನನ ಸಾವು, ನ್ಯಾಯವಾಗಿ, ಹೊಸ ಹುಟ್ಟಾಗುತ್ತದೆ..

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Santhosh Kumar Mudradi July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Santhosh Kumar Mudradi July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search