ಕೆಮ್ಮಿನ ಸಿರಫ್ ಎಂದು ಬಿಯರ್ ಮಾರಿ 42 ಕೋಟಿ ಸಂಪಾದನೆ!
ಗುಜರಾತಿನ ದೇವಭೂಮಿ ದ್ವಾರಕದಲ್ಲಿ ಆಯುರ್ವೇದಿಕ್ ಸಿರಪ್ ಎಂದು ನಿಷೇಧಿತ ಬಿಯರ್ ಒಂದನ್ನು ಮಾರಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ಒಂದು ರಾಕೆಟ್ 2020 ರಿಂದ ನಡೆಯುತ್ತಿದ್ದು, ಆರೋಪಿಗಳ ತಂಡ ಇಲ್ಲಿಯ ತನಕ ಎರಡು ಕೋಟಿಯ ಸಿರಪ್ ಹೆಸರಿನಲ್ಲಿ ಬಿಯರ್ ಮಾರಾಟ ಮಾಡಿದ್ದು, ಅಂದಾಜು 42 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ದೇವಭೂಮಿ ದ್ವಾರಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ ” ನಾವು ಕಳೆದ ಮೂರು ತಿಂಗಳ ಹಿಂದೆ ಓಕಾ ಎನ್ನುವ ಪ್ರದೇಶದಲ್ಲಿ ಕೆಲವು ಆಯುರ್ವೇದಿಕ್ ಬಾಟಲುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವು. ಅದನ್ನು ಎಫ್ ಎಸ್ ಎಲ್ ವರದಿಗಾಗಿ ಕಳುಹಿಸಿಕೊಟ್ಟಿದ್ದೇವು. ವರದಿಯ ಪ್ರಕಾರ ಸಿರಪ್ ನಲ್ಲಿ ಇರಬೇಕಾಗಿದ್ದ ಅಂಶಕ್ಕಿಂತ ಬಿಯರ್ ನಲ್ಲಿ ಇರುವ ಅಂಶಗಳೇ ಹೆಚ್ಚಾಗಿದ್ದವು. ಅದರೊಂದಿಗೆ ಉತ್ಪಾದನೆ ಮತ್ತು ಮಾರುವಾಗ ಸಂದಾಯ ಮಾಡಿದ್ದಾರೆ ಎಂದು ತೋರಿಸಿದ ಜಿಎಸ್ ಟಿ ದಾಖಲೆಗಳು ಕೂಡ ಫೇಕ್ ಆಗಿದ್ದವು. ಈ ಜಾಡನ್ನು ಹಿಡಿದು ಎಂಟು ಮಂದಿಯನ್ನು ಬಂಧಿಸಿದ್ದೇವು. ಅದರಲ್ಲಿ ಪ್ರಧಾನ ಆರೋಪಿ ಸುನೀಲ್ ಕಕ್ಕಡ್ ಈ ಹಿಂದೆನೂ ಒಮ್ಮೆ ಸಿಬಿಐ ಕೇಸಿನಲ್ಲಿ ಬಂಧಿತನಾಗಿದ್ದ” ಎಂದು ತಿಳಿಸಿದ್ದಾರೆ. ಹೆಚ್ಚಿನ ಗ್ರಾಹಕರು ಇದನ್ನು ಉತ್ತಮ ಕಿಕ್ ಕೊಡುತ್ತದೆ ಎನ್ನುವ ಕಾರಣಕ್ಕೂ ಖರೀದಿ ಮಾಡುತ್ತಿದ್ದರು.
Leave A Reply