• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?

Hanumantha Kamath Posted On December 9, 2023


  • Share On Facebook
  • Tweet It

ಇಂತವರು ಜನರ ಪರವಾಗಿ ಕೆಲಸ ಮಾಡ್ತಾರಾ?

ಹಮ್ ಭ್ರಷ್ಟಾಚಾರ್ ಕಿ ಕಿಲಾಫ್ ಹೇ ಎಂದು ಚುನಾವಣೆಗಳಲ್ಲಿ ಮಾತನಾಡುವ ಮುಖಂಡರಿಗೆ ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯನ ಮನೆಯಲ್ಲಿ ಸಿಕ್ಕಿದ ನೋಟುಗಳನ್ನು ಮಿಶಿನ್ ನಲ್ಲಿ ಲೆಕ್ಕ ಮಾಡಲು ದಿನಗಟ್ಟಲೆ ಬೇಕಾಗುತ್ತದೆ ಎಂದು ಗೊತ್ತಿಲ್ವಾ?

https://tulunadunews.com/wp-content/uploads/2023/12/WhatsApp-Video-2023-12-09-at-17.20.43_58e1b162.mp4

ಹೀಗೆ ಪ್ರಪಂಚದ ಕಣ್ಣಿನಲ್ಲಿ ಭ್ರಷ್ಟಾಚಾರದ ಹಣದ ಕುಬೇರರು ನಗ್ನರಾಗುತ್ತಿದ್ದಂತೆ ಅವರ ಪಕ್ಷದ ಮುಖಂಡರು ಅದ್ಯಾವ ಮುಖ ಇಟ್ಟು ಸಮಾವೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೋ ದೇವರೇ ಬಲ್ಲ. ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ಎಂಪಿ ಧೀರಜ್ ಸಾಹು ಬಂಗಲೆಯಲ್ಲಿ 156 ಚೀಲ ಹಾಗೂ 30 ಕಪಾಟುಗಳಿಂದ ತುಂಬಿ ತುಳುಕಿ ಹೊರಗೆ ಬೀಳುತ್ತಿರುವ ನೋಟಿನ ಕಂತೆಗಳನ್ನು ಎಣಿಸಿ ಎಣಿಸಿಯೇ ಮಿಶಿನ್ ಗಳು ಸುಸ್ತಾಗಿವೆ. ಎಲ್ಲಾ ಲೆಕ್ಕ ಮುಗಿದಾಗ ಹತ್ತಿರ ಹತ್ತಿರ ಒಂದು ಸಾವಿರ ಕೋಟಿಗೆ ಲೆಕ್ಕ ಹೋದರೂ ಆಶ್ಚರ್ಯವಿಲ್ಲ. ಇದು ಬರಿ ನಗದು ಹಣದ ಲೆಕ್ಕ. ಇಲ್ಲಿ ಸ್ಥಿರ ಆಸ್ತಿಯ ವಿಷಯಕ್ಕೆ ಹೋದರೆ ಅದು ಎಷ್ಟಿರಬಹುದೋ. ಇಂತವರು ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರು. ಒಂದು ರೀತಿಯಲ್ಲಿ ಕಾಂಗ್ರೆಸ್ಸಿನ ಖರ್ಚಿನ ಹಣದ ಪೈಪುಗಳು. ಇನ್ನು ಇವರ ವಿರುದ್ಧ ತನಿಖೆ ಬಿಗಿ ಮಾಡಿದ ಕೂಡಲೇ ಮುಂದಿನ ದಿನಗಳಲ್ಲಿ ಇದು ದ್ವೇಷದ ರಾಜಕೀಯ ಎಂದು ವಿಪಕ್ಷಗಳು ಬೊಬ್ಬೆ ಹೊಡೆದರೂ ಆಶ್ಚರ್ಯವಿಲ್ಲ.

ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?

ಯಾಕೆಂದರೆ ಮಾಹುಅ ಮೊಯಿತ್ರ ಹೆಸರಲ್ಲಿ ಹಾಗೆ ಆಗಿದೆ. ಅವರು ಪ್ರಶ್ನೆಗಾಗಿ ಹಣ ವಿವಾದದಲ್ಲಿ ಸಿಲುಕಿಕೊಂಡು ಸಂಸತ್ತಿನ ಎಥಿಕ್ಸ್ ಕಮಿಟಿಯಿಂದ ವಿಚಾರಣೆ ನಡೆದು ಇವರು ಪ್ರಶ್ನೆಗಾಗಿ ಹಣ ಪಡೆದುಕೊಂಡಿರುವುದು ನಿಜ ಎಂದು ಸಾಬೀತಾಗಿರುವುದರಿಂದ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಅದನ್ನು ವಿಪಕ್ಷಗಳು ದ್ವೇಷ ರಾಜಕೀಯ ಎಂದು ಪ್ರತಿಭಟನೆ ಮಾಡಿವೆ. ಇದರಲ್ಲಿ ದ್ವೇಷದ ವಿಷಯ ಎಲ್ಲಿಂದ ಬಂತು? ನಮ್ಮ ಓದುಗರಿಗೆ ಒಂದು ವಿಷಯ ಗೊತ್ತಿರುತ್ತದೆ, ಅದೇನೆಂದರೆ ಸಂಸದರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಜನರ ಪರವಾಗಿ ಪ್ರಶ್ನೆಗಳನ್ನು ಕೇಳಲು ಅವಕಾಶ ಇದೆ. ಅದಕ್ಕಾಗಿ ಒಂದು ಸಿಸ್ಟಮ್ ಮಾಡಲಾಗಿದೆ. ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ ಲೋಕಸಭಾ ಸದಸ್ಯರ ಪೋರ್ಟಲ್ ನಲ್ಲಿ ನೀವು ಲೋಕಸಭೆಯ ಸಂಸತ್ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಬಹುದು. ಅದಕ್ಕಾಗಿ ಪ್ರತಿ ಲೋಕಸಭಾ ಸದಸ್ಯರಿಗೆ ಆ ಪೋರ್ಟಲಿಗೆ ಲಾಗ್ ಇನ್ ಆಗಲು ಪ್ರತ್ಯೇಕ ಐಡಿ ಹಾಗೂ ಪಾಸ್ ವರ್ಡ್ ಇದೆ. ಯಾರು ಬೇಕಾದರೂ ಒಳಗೆ ಹೋಗಿ ಪ್ರಶ್ನೆ ಕಳುಹಿಸುವಂತಿಲ್ಲ. ಇಲ್ಲಿ ಪ್ರಶ್ನೆಗಳನ್ನು ಟೈಪ್ ಮಾಡುವವರು ತಾವು ಕೇಳುತ್ತಿರುವ ವಿಷಯದ ಬಗ್ಗೆ ನಿಖರತೆಯನ್ನು ಹೊಂದಿರಬೇಕು. ತಾವು ಯಾವ ವಿಷಯದ ಬಗ್ಗೆ ಉತ್ತರ ಬಯಸುತ್ತಿದ್ದೇವೋ ಅದರ ಸಂಪೂರ್ಣ ಜ್ಞಾನ ಹೊಂದಿರಬೇಕು. ಸಾಮಾನ್ಯವಾಗಿ ಈ ಟೆಕ್ನಿಕಲ್ ವಿಷಯ ಗೊತ್ತಿರದ ಸಂಸದರು ತಮ್ಮ ಆಪ್ತ ಕಾರ್ಯದರ್ಶಿಗಳಿಂದ ಅದನ್ನು ಮಾಡಿಸುವುದು ಸಾಮಾನ್ಯ.

ಉದ್ಯಮಿ ಅಫಿದಾವಿತ್ ನೀಡಿ ಒಪ್ಪಿಕೊಂಡಿದ್ದಾರೆ!

ಆದರೆ ಮಾಹುಅ ಮೊಯಿತ್ರ ಪ್ರಕರಣದಲ್ಲಿ ಅವರು ಅದಾನಿ ವಿರುದ್ಧ ಪೋರ್ಟಲ್ ಮೂಲಕ ಕೆಲವು ಖಡಕ್ ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳು ಹೇಗಿದ್ದವು ಎಂದರೆ ಅದಾನಿಗೆ ವಿರುದ್ಧವಾಗಿದ್ದವರು ಕೇಳಿದ ಪ್ರಶ್ನೆಗಳಂತೆ ಇದ್ದವು. ಈ ಬಗ್ಗೆ ಸಂಶಯಗೊಂಡ ಭಾರತೀಯ ಜನತಾ ಪಾರ್ಟಿಯ ಸಂಸದರಾದ ನಿಶಿಕಾಂತ್ ದುಬೆ ಒಂದಿಷ್ಟು ಅದರ ಹಿಂದೆ ಬಿದ್ದಾಗ ಅದು ದರ್ಶನ್ ಹಿರನ್ನದಾನಿ ಬರೆದು ಹಾಕಿದ ಪ್ರಶ್ನೆಗಳಾಗಿದ್ದವು ಎನ್ನುವುದು ಹೊರಗೆ ಬಂತು. ಅದರ ಬಳಿಕ ಅವರು ಮಾಹುಅ ಮೊಯಿತ್ರ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದ್ದು. ಯಾವುದೇ ಸಂಸದ/ಸಂಸದೆ ಬೇರೆಯವರಿಂದ ಯಾವುದೇ ರೀತಿಯ ಲಾಭ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವುದಕ್ಕೆ ವಿರೋಧವಿದೆ. ಸದನದ ಸದಸ್ಯರಾಗುವುದು ಜನರ ಪರವಾಗಿ ಧ್ವನಿ ಎತ್ತಲು ವಿನ: ಯಾವುದೇ ಉದ್ಯಮಿಯ ಪರವಾಗಿ ಅಲ್ಲ. ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕೆ ಮಾಹುಅ ಮೊಯಿತ್ರ ವಿರುದ್ಧ ಎಥಿಕ್ಸ್ ಕಮಿಟಿಯಿಂದ ವಿಚಾರಣೆ ಆಗಿದೆ. ಅದರಲ್ಲಿ ದರ್ಶನ್ ಅವರು ಅಫಿದಾವಿತ್ ನೀಡಿ ಪ್ರಶ್ನೆಗಳನ್ನು ಕೇಳಲು ಲಾಗಿನ್ ಡಿಟೇಲ್ಸ್ ಪಡೆದುಕೊಂಡಿರುವುದು ನಿಜ. ಅದರೊಂದಿಗೆ ಮಾಹುಅ ಮೊಯಿತ್ರ ಅವರು ತಮ್ಮಿಂದ ಹಣ ಹಾಗೂ ವಿವಿಧ ರೀತಿಯ ವಸ್ತುಗಳನ್ನು ಪಡೆದುಕೊಳ್ಳುತ್ತಲೇ ಬಂದಿದ್ದರು ಎಂದು ಕೂಡ ಹೇಳಿದ್ದಾರೆ. ಇನ್ನೇನೂ ಬಾಕಿ ಇದೆ. ಯಾವಾಗ ಈ ವಿಚಾರ ಮುನ್ನಲೆಗೆ ಬಂತೋ ತೃಣಮೂಲ ಕಾಂಗ್ರೆಸ್ ತನ್ನ ಸಂಸದೆಯಿಂದ ಅಂತರವನ್ನು ಕಾಯ್ದುಕೊಂಡಿತ್ತು. ಕೊನೆಗೆ ಮಾಹುಅ ಮೊಯಿತ್ರ ಲೋಕಸಭೆಯಿಂದ ಉಚ್ಚಾಟನೆಗೊಂಡ ಬಳಿಕ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ” ಮಾಹುಅ ಮೊಯಿತ್ರ ಪರಿಸ್ಥಿತಿಯ ಶಿಶು, ಆದರೆ ಅವಳ ಬೆಂಬಲಕ್ಕೆ ಬಂದ ವಿಪಕ್ಷಗಳ ಮೈತ್ರಿಕೂಟಕ್ಕೆ ಧನ್ಯವಾದ” ಎಂದಿದ್ದಾರೆ. ಇದರರ್ಥ ಮಾಹುಅ ಮೊಯಿತ್ರ ಚರಿತ್ರೆ ಟಿಎಂಸಿಗೆ ಗೊತ್ತಿದೆ. ಸದ್ಯ ರಾಹುಲ್ ಮಾತ್ರ ತಮ್ಮ ಸಂಸದನ ಮನೆಯಲ್ಲಿ ಸಿಕ್ಕಿದ ಹಣದ ಬಗ್ಗೆ ಏನು ಹೇಳ್ತಾರೋ ಎಂದು ಕಾದು ನೋಡಬೇಕು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search