ಪಕ್ಷಕ್ಕಾಗಿ ಧನ ಸಂಗ್ರಹಕ್ಕೆ ಕಾಂಗ್ರೆಸ್ ವಿನೂತನ ಸೂತ್ರ!
ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದು 138 ವರ್ಷಗಳಾಗುತ್ತಿರುವ ಈ ವರ್ಷದಲ್ಲಿ ಪಕ್ಷಕ್ಕಾಗಿ ಧನ ಸಂಗ್ರಹಕ್ಕೆ ಹಲವು ರೀತಿಯ ಮಾರ್ಗೋಪಾಯಗಳನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಆನ್ ಲೈನ್ ಮೂಲಕ ಹಣ ಸಂಗ್ರಹ ಮಾಡುವ ಚಿಂತನೆಯಿದ್ದು, ಅದಕ್ಕೆ “ಡೋನೇಟ್ ಟು ದೇಶ್” ಎಂದು ಹೆಸರಿಡಲಾಗಿದೆ. ಇದು 1920 -21 ರಲ್ಲಿ ಮಹಾತ್ಮಾ ಗಾಂಧಿಜಿಯವರು ನಡೆಸಿದ ಅಭಿಯಾನ ” ತಿಲಕ್ ಸ್ವರಾಜ್ಯ ಫಂಡ್” ನಿಂದ ಪ್ರಭಾವಿತರಾಗಿರುವುದಾಗಿ ವೇಣುಗೋಪಾಲ್ ಹೇಳಿದ್ದಾರೆ.
ಉದ್ಘಾಟನಾ ಅಭಿಯಾನದಲ್ಲಿ ” ಉತ್ತಮ ಭಾರತಕ್ಕಾಗಿ ದೇಣಿಗೆ” ಎಂದು ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪಕ್ಷದ 138 ವರ್ಷಗಳ ಇತಿಹಾಸದ ಸ್ಮರಣೆಗಾಗಿ ಆ ಸಂಖ್ಯೆಯಿಂದಲೇ ಉದಾಹರಣೆಗೆ 138 ರೂ, 1380 ರೂ, 13800 ಹೀಗೆ ಆರ್ಥಿಕ ಸಹಾಯವನ್ನು ನೀಡಬಹುದಾಗಿದೆ. ಪಕ್ಷದ ಆನ್ ಲೈನ್ ಪೋರ್ಟಲ್ ಹಾಗೂ ಅಧಿಕೃತ ವೆಬ್ ಸೈಟ್ ನಿಂದ ಹಣ ಸಂದಾಯ ಮಾಡಲು ಅವಕಾಶವಿದೆ. ಡಿಸೆಂಬರ್ 18 ರಂದು ರಾಷ್ಟ್ರೀಯ ಅಧ್ಯಕ್ಷರು ಈ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.
ಈ ಆನ್ ಲೈನ್ ದೇಣಿಗೆ ಸಂಗ್ರಹ ಅಭಿಯಾನ ಡಿಸೆಂಬರ್ 18 ರಿಂದ 28 ರವರೆಗೆ ನಡೆಯಲಿದ್ದು, ನಂತರ ಮನೆ-ಮನೆ ಸಂಗ್ರಹ, ಪ್ರತಿ ಬೂತ್ ನಲ್ಲಿ 10 ಮನೆಗಳಿಂದ ಹಣ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ನಾಗರಿಕರು ಕನಿಷ್ಟ 138 ರೂಗಳನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಹೇಳಲಾಗಿದೆ. ಪಕ್ಷದ ಪದಾಧಿಕಾರಿಗಳು 1380 ರೂ ನೀಡಲು ಸೂಚಿಸಲಾಗಿದೆ.
Leave A Reply