ಮಗಳ ಸ್ಕೂಲ್ ಡೇಗೆ ಒಟ್ಟಿಗೆ ಕಾಣಿಸಿಕೊಂಡ ಐಶ್ಚರ್ಯ ಹಾಗೂ ಅಭಿಷೇಕ್!
ಇತ್ತೀಚಿಗಷ್ಟೇ ಮಗಳೊಂದಿಗೆ ಗಂಡನ ಮನೆ ಬಿಟ್ಟು ತಾಯಿ ಮನೆ ಸೇರಿಕೊಂಡಿರುವ ಐಶ್ಚರ್ಯ ರೈ ಮಗಳ ಶಾಲಾ ವಾರ್ಚೀಕೋತ್ಸವದ ದಿನ ಗಂಡ ಅಭಿಷೇಕ್ ಬಚ್ಚನ್ ಜೊತೆ ಒಟ್ಟಿಗೆ ಕಾಣಿಸಿಕೊಂಡು ಅನೇಕ ಊಹಾಪೋಹಗಳಿಗೆ ಮತ್ತೊಂದು ಆಯಾಮ ನೀಡಿದರು. ಐಶ್ಚರ್ಯ ಹಾಗೂ ಅಭಿಷೇಕ್ ವಿಚ್ಚೇದನದ ವದಂತಿಯ ನಡುವೆ ಇಬ್ಬರೂ ಮಗಳು ಕಲಿಯುತ್ತಿರುವ ಧೀರುಬಾಯಿ ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲಿಗೆ ಆಗಮಿಸಿದ್ದಾರೆ. ಅದರೊಂದಿಗೆ ದಂಪತಿ ಕಾರ್ಯಕ್ರಮ ಮುಗಿದ ಬಳಿಕ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಬರುವಾಗ ಐಶ್ಚರ್ಯ, ಮಗಳು ಆರಾಧ್ಯ ಹಾಗೂ ತಾಯಿ ಬೃಂದಾ ರೈ ಒಂದು ಕಾರಿನಲ್ಲಿ ಬಂದರೆ, ಅಭಿಷೇಕ್ ಬಚ್ಚನ್ ಪ್ರತ್ಯೇಕ ಕಾರಿನಲ್ಲಿ ಆಗಮಿಸಿದ್ದರು. ತೆರಳುವಾಗ ವೃಂದಾ ರೈ ಅವರು ತಾವು ಬಂದ ಕಾರಿನಲ್ಲಿ ತೆರಳಿದರೆ ದಂಪತಿ ಹಾಗೂ ಮಗಳು ಆರಾಧ್ಯ ತನ್ನ ತಂದೆ ಅಭಿಷೇಕ್ ಬಂದ ಕಾರಿನಲ್ಲಿ ಮರಳಿದರು.
ದೀರುಬಾರು ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲ್ ಇದರ ವಾರ್ಷೀಕೋತ್ಸವ ಪ್ರತಿ ಸಲ ಸ್ಟಾರ್ ನಟರ ಸಮಾಗಮಕ್ಕೆ ಕಾರಣವಾಗುತ್ತದೆ. ಏಕೆಂದರೆ ಬಾಲಿವುಡ್ ನ ಹೆಚ್ಚಿನ ನಟ, ನಟಿಯರ ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಾರೆ. ಈ ಬಾರಿಯೂ ಶಾರುಖ್ ಖಾನ್, ಕರೀನಾ ಕಪೂರ್, ಕರಣ್ ಜೋಹರ್, ಶಹೀದ್ ಕಪೂರ್ ಹಾಗೂ ಬಚ್ಚನ್ ಕುಟುಂಬ ಇದರಲ್ಲಿ ಪಾಲ್ಗೊಂಡಿತ್ತು. ಜಯಾ ಬಚ್ಚನ್ ಜೊತೆ ಮುನಿಸಿನ ಕಾರಣದಿಂದ ಐಶ್ವರ್ಯ ರೈ ಅವರು ಅಭಿಷೇಕ್ ಅವರಿಗೆ ವಿಚ್ಚೇದನ ನೀಡುತ್ತಾರೆ ಎನ್ನುವುದು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಈಗ ದಂಪತಿ ಒಟ್ಟಿಗೆ ಕಾಣಿಸಿಕೊಂಡು ಚರ್ಚೆಗೆ ಅಂತ್ಯ ಹಾಡಿದ್ದಾರೆ
Leave A Reply