ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ!
Posted On December 19, 2023
ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಮೃತರು.
ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಮಹೇಶ್ 43 ನಂಬರಿನ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು, ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕನ್ನಿಟ್ಟು, ಟವಲೊಂದರಲ್ಲಿ ಬೈಕ್ ಕೀ, ಪಸ್ ೯, ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪಸ್೯ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ. ಅವಿವಾಹಿತರಾಗಿರುವ ಜಗದೀಶ್ ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಇವರ ತಂದೆ ಕೂಡ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply