ಖರ್ಗೆ ಮೋದಿಗೆ ಸಮನಾದ ನಾಯಕ ಎಂದ ಜಾರಕಿಹೊಳಿ!
ಇಲ್ಲಿಯವರೆಗೆ ಮೋದಿಗೆ ಸರಿಸಮನಾದ ನಾಯಕ ಸಿಕ್ಕಿರಲಿಲ್ಲ. ಈಗ ಮಲ್ಲಿಕಾರ್ಜುನ ಖರ್ಗೆ ಮೋದಿಯವರಿಗೆ ಸೂಕ್ತವಾಗಿ ಮ್ಯಾಚ್ ಆಗುವ ನಾಯಕ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇ.0.ಡಿ.ಯಾ ಒಕ್ಕೂಟ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮೋದಿ ವರ್ಸಸ್ ಖರ್ಗೆ ಎನ್ನುವುದು ಉತ್ತಮ ಪರಿಣಾಮ ಬೀರುತ್ತದೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ಖರ್ಗೆ ಉತ್ತಮ ಸಂಸದೀಯ ಪಟು ಎಂದು ಹೊಗಳಿದ ಸತೀಶ್ ಜಾರಕಿಹೊಳಿ ಅನುಭವದ ಆಧಾರದ ಮೇಲೆ ಅವರು ಮುನ್ನಲೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಮತ್ತು ರಾಜ್ಯಾಧ್ಯಕ್ಷರಾಗಿಯೂ ಅವರಿಗೆ ಅನುಭವ ಇದೆ. ಅದರೊಂದಿಗೆ ಅವರೀಗ ರಾಷ್ಟ್ರಾಧ್ಯಕ್ಷರಾಗಿಯೂ ಅವರು ದೇಶದ ಉದ್ದಕ್ಕೂ ಓಡಾಡುತ್ತಿದ್ದಾರೆ. ಅವರೊಬ್ಬ ಪ್ರಬುದ್ಧ ನಾಯಕ ಎಂದು ಹೇಳಿದ್ದಾರೆ.
ಖರ್ಗೆ ಹೆಸರನ್ನು ಇ.0.ಡಿ.ಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರಿವಾಲ್ ಅವರು ಒಕ್ಕೂಟದ ಸಭೆಯಲ್ಲಿ ಹೆಸರು ಪ್ರಸ್ತಾಪಿಸಿದ್ದರು. ಅದಕ್ಕೆ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸದಿದ್ದರೂ ಅವರು ಅದಕ್ಕೆ ವಿರೋಧವಾಗಿರುವುದು ಸ್ಪಷ್ಟ. ಸದ್ಯ ಒಕ್ಕೂಟ ಮಾತ್ರ ರಾಹುಲ್ ಗಾಂಧಿ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ ಅವರು ಸರ್ವಸಮ್ಮತ ನಾಯಕ ಅಲ್ಲ ಎಂದು ಪರೋಕ್ಷವಾಗಿ ಸೂಚಿಸಿದಂತಿದೆ. ಇದರೊಂದಿಗೆ ಖರ್ಗೆ ಹೆಸರು ಮುನ್ನಲೆಗೆ ತರುವ ಮೂಲಕ ರಾಹುಲ್ ಗಾಂಧಿಯವರನ್ನು ಬದಿಗೆ ಸರಿಸಿದಂತೆ ಆಗಿದೆ ಎನ್ನುವುದು ಸಾಬೀತಾಗಿದೆ.
Leave A Reply