ಮುಂಬೈಯಲ್ಲಿ ಜನವರಿ 18 ರ ತನಕ ಸೆಕ್ಷನ್ 144!
Posted On December 21, 2023
0
ಮುಂಬೈಯಲ್ಲಿ ಭಯೋತ್ಪಾದಕ, ದೇಶದ್ರೋಹಿಗಳ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದ್ದು, ಜನವರಿ 18 ರ ತನಕ ದ್ರೋಣ್, ರಿಮೋಟ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ಪ್ಯಾರಾ ಗ್ಲೈಂಡರ್ಸ್ ಮೂಲಕ ದಾಳಿ ನಡೆಯುವ ಸಾಧ್ಯತೆಯ ವರದಿಗಳು ಬರುತ್ತಿವೆ.

ಕ್ರಿಸ್ ಮಸ್, ಹೊಸ ವರುಷ ಸಂಭ್ರಮವನ್ನು ಗುರಿಯಾಗಿಸಿ ದಾಳಿಗಳು ನಡೆಯುವ ಬಗ್ಗೆ ಮುಂಬೈ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಗಳು ಬಂದಿದ್ದು, ಸಾರ್ವಜನಿಕ ಬದುಕು, ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಲು ದೇಶವಿರೋಧಿ ಕೃತ್ಯಗಳು ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಮುಂಬೈಯಲ್ಲಿ ಸೆಕ್ಷನ್ 144 ಹೇರಲಾಗಿದೆ.

ಯಾರಾದರೂ ಅನುಮತಿ ಇಲ್ಲದೇ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 188 ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಮುಂಬೈ ಪೊಲೀಸ್ ಪ್ರಕಟನೆ ತಿಳಿಸಿದೆ.

Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









