ಬಾಕ್ಸರ್ ವಿಜೇಂದರ್ ಸಿಂಗ್ ರಾಜಕೀಯ ಸನ್ಯಾಸ!
2024 ರ ಲೋಕಸಭಾ ಚುನಾವಣೆ ಬೆರಳೆಣಿಕೆಯ ತಿಂಗಳಷ್ಟೇ ಬಾಕಿ ಇರುವ ಈ ಹಂತದಲ್ಲಿ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ರಾಜಕೀಯವನ್ನು ತ್ಯಜಿಸುವುದಾಗಿ ತಮ್ಮ ಸಾಮಾಜಿಕ ಜಾಲತಾಣ “ಎಕ್ಸ್” ನಲ್ಲಿ ಘೋಷಿಸಿದ್ದಾರೆ. ಒಲಿಂಪಿಕ್ಸ್ ಪದಕ ವಿಜೇತರಾಗಿರುವ ವಿಜೇಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.
2019 ರಲ್ಲಿ ಕಾಂಗ್ರೆಸ್ ಇವರನ್ನು ದಕ್ಷಿಣ ದೆಹಲಿಯಿಂದ ಕಣಕ್ಕೆ ಇಳಿಸಿತ್ತು. ಆದರೆ ವಿಜೇಂದರ್ ಸಿಂಗ್ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಸೋತಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯುವ ರಾಜಕೀಯ ಜೀವನವನ್ನು ಜೀವಂತವಾಗಿಟ್ಟಿದ್ದರು. ಆದರೆ ಈಗ ಅವರಿಗೆ ಕಾಂಗ್ರೆಸ್ಸಿನಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದು ಅಸಾಧ್ಯವೆನಿಸಿದೆ. ಅದಕ್ಕೆ ಮುಖ್ಯ ಕಾರಣ ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್ ಘಡದಲ್ಲಿ ಕಾಂಗ್ರೆಸ್ ಸೋತಿರುವುದರಿಂದ ವಿಜೇಂದರ್ ಸಿಂಗ್ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಕೂಡ ಮಸುಕಾದಂತೆ ಕಾಣುತ್ತಿದೆ. ಆದ್ದರಿಂದ ಅವರು ರಾಜಕೀಯ ಜೀವನದಿಂದ ವಿಮುಖರಾಗಲು ನಿರ್ಧರಿಸಿದ್ದಾರೆ. ರಾಜನೀತಿ ಕೋ ರಾಮ್ ರಾಮ್ ಭಾಯ್ ಎಂದು ಡಿಸೆಂಬರ್ 21 ರಂದು ಎಕ್ಸ್ ನಲ್ಲಿ ಬರೆದಿರುವ ವಿಜೇಂದರ್ ಸಿಂಗ್ ರಾಜಕೀಯ ಜೀವನ ಕೊನೆಗೊಂಡಿರುವುದು ಕಾಂಗ್ರೆಸ್ಸಿಗೆ ಹಿನ್ನಡೆ ಕೂಡ ಹೌದು. ಒಟ್ಟಿನಲ್ಲಿ ಸೋಲುಗಳು ಸಂಬಂಧಿಕರನ್ನು ಕೂಡ ನಮ್ಮಿಂದ ದೂರ ಮಾಡುತ್ತದೆ ಎನ್ನುವುದು ಇದೇ ಕಾರಣಕ್ಕೆ.
Leave A Reply