ವಿದೇಶಿಗನ ತುಳು ಪ್ರೇಮಕ್ಕೆ ಜೈಹೋ!
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ರೋಡ್ ಐಲ್ಯಾಂಡ್ ನಲ್ಲಿ ವಾಸವಿರುವ ಸ್ಯಾಮ್ಯುಯೆಲ್ ಡ್ರ್ಯಾಗೋಮೈರ್ ತಮ್ಮ ವಿಡಿಯೋ ಬ್ಲಾಗ್ ನಲ್ಲಿ ತುಳು ಭಾಷೆಯಲ್ಲಿ ಮಾತನಾಡುತ್ತಾ ವಿಡಿಯೋ ಮಾಡಿರುವುದು ತುಳು ಭಾಷಿಗರಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸ್ಯಾಮ್ ವಿಡಿಯೋ ಮಾಡಿ ಅದರಲ್ಲಿ ತುಳು ಭಾಷೆಯಲ್ಲಿ ಮಾತನಾಡುತ್ತಾ ಭಾಷಾ ವ್ಯಾಮೋಹ ಮೆರೆದಿದ್ದಾರೆ.
ಯುವಕ ಸ್ಯಾಮ್ ತನಗೆ ತುಳು ಕಲಿಯಲು ಆಸಕ್ತಿ ಮೂಡಿದ್ದು, ಅದನ್ನು ಇಷ್ಟಪಟ್ಟು ಸ್ವಲ್ಪ ಸ್ವಲ್ಪ ಕಲಿತಿರುವುದಾಗಿ ಹೇಳಿದ್ದಾನೆ. ಅವನ ವಿಡಿಯೋಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ತುಳು ಚೆನ್ನಾಗಿ ಮಾತನಾಡುತ್ತಿದ್ದೀರಿ ಎಂದು ನೆಟ್ಟಿಗರು ಹೊಗಳಿಕೆಯ ಕಮೆಂಟ್ ಹಾಕಿದ್ದಾರೆ. ವೋನಸ್ ಮಲ್ಪುವೆ, ದೀಪಾವಳಿ ಬೊಕ್ಕ ಥ್ಯಾಂಕ್ ಗಿವ್ವಿಂಗ್ ರಜೆ, ಪೆತ್ತಲು ಒಟ್ಟುಗ್ ಒಂಜಿ ವಿಡಿಯೋ, ತಮಿಳಿಗಿಂತ ತುಳು ಎನ್ನುವ ಅನೇಕ ಪುಟ್ಟ ವಿಡಿಯೋಗಳನ್ನು ಮಾಡಿ ಸ್ಯಾಮ್ ಅಪಲೋಡ್ ಮಾಡಿದ್ದಾರೆ.
ಯ್ಯಾನ್ ಸ್ಯಾಮ್ ಎಂದು ಹೇಳಿಯೇ ವಿಡಿಯೋ ಮಾಡುವ ಸ್ಯಾಮ್ ಕೆಲವು ಕನ್ನಡ ಶಬ್ದಗಳನ್ನು ಕೂಡ ಅಗತ್ಯಕ್ಕೆ ತಕ್ಕಂತೆ ಬಳಸಿದ್ದಾರೆ. ಕೆಲವು ಕಡೆ ತುಳುವಿನಲ್ಲಿ ಒಂದು ವಾಕ್ಯ ಮಾತನಾಡಿದ ನಂತರ ಅದರ ಅರ್ಥವನ್ನು ಇಂಗ್ಲೀಷಿನಲ್ಲಿ ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಸ್ಯಾಮ್ ತುಳು ಭಾಷೆಯಲ್ಲಿ ಮಾತನಾಡುತ್ತಾ ತನ್ನ ಖುಷಿಯನ್ನು ಹಂಚಿಕೊಂಡಿರುವುದು ನಿಜಕ್ಕೂ ಆಹ್ಲಾದಕಾರಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ನೀವು ಕೂಡ ಸ್ಯಾಮ್ಯುಯೆಲ್ ಡ್ರ್ಯಾಗೋಮೈರ್ ಬ್ಲಾಗ್ ಗೆ ಭೇಟಿಕೊಟ್ಟು ಅವನ ಭಾಷಾ ಪ್ರೇಮವನ್ನು ಪ್ರಶಂಸಿಸಬಹುದು
Leave A Reply