ಬಿಜೆಪಿ 350 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರದಲ್ಲಿ ಮುಂದುವರೆಯುತ್ತೆ – ನಾನಾ ಪಾಟೇಕರ್
2024 ರ ಲೋಕಸಭಾ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ಎಂದು ರಾಷ್ಟ್ರೀಯ ಮಾಧ್ಯಮದ ಪ್ರಶ್ನೆಗೆ ಬಹಳ ದೊಡ್ಡ ರೀತಿಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಮರಳುತ್ತದೆ ಎಂದು ಖ್ಯಾತ ನಟ ನಾನಾ ಪಾಟೇಕರ್ ಹೇಳಿದ್ದಾರೆ. ನೀವು ಅಂದಾಜು ಕೂಡ ಮಾಡಲಾಗದಷ್ಟು ಸ್ಥಾನಗಳು ಸಿಗಲಿವೆ. ಎಲ್ಲಿ, ಹೇಗೆ ಎಂದು ಈಗಲೇ ಹೇಳಲಾಗುವುದಿಲ್ಲ. ಆದರೆ 350 ರಿಂದ 375 ರ ತನಕ ಬರುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಬಿಜೆಪಿಗೆ ಯಾವುದೇ ಪರ್ಯಾಯ ಇಲ್ಲ. ಅದರೊಂದಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕೂಡ ಆಗಿದೆ. ಆದ್ದರಿಂದ ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ನಾನಾ ಹೇಳಿದ್ದಾರೆ.
ತಮ್ಮ ಸಹಜ ಅಭಿನಯ ಮತ್ತು ವಿಶಿಷ್ಟ ಮ್ಯಾನರೀಸಂಗಳಿಂದ ನಾನಾ ಪಾಟೇಕರ್ ಅವರಿಗೆ ದೇಶಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ. ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸಿನೆಮಾಗಳು ಯಶಸ್ವಿಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಮಾತ್ರವಲ್ಲದೇ ಸ್ವತ: ನಾನಾ ಅವರಿಗೆ ಮೂರು ರಾಷ್ಟ್ರ ಪ್ರಶಸ್ತಿ, ನಾಲ್ಕು ಫಿಲಂಫೇರ್ ಪ್ರಶಸ್ತಿ ಹಾಗೂ ಮರಾಠಿ ಸಿನೆಮಾದ ಅಭಿನಯಕ್ಕಾಗಿ ಎರಡು ಫಿಲಂಫೇರ್ ಪ್ರಶಸ್ತಿಗಳು ಕೂಡ ದೊರಕಿದೆ. 2013 ರಲ್ಲಿ ಇವರಿಗೆ ಪದ್ಮಶ್ರೀ ನೀಡಿ ಪುರಸ್ಕೃರಿಸಲಾಗಿತ್ತು.
Leave A Reply