ಮೋದಿ ಸರಕಾರದಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಸ್ಥಾನಮಾನ ಸಿಗುತ್ತಿದೆ – ಅಂಜು ಬಾಬ್ಬಿ ಜಾರ್ಜ್
20 ವರ್ಷಗಳ ಹಿಂದೆ ನನಗೆ ಮೊದಲ ಬಾರಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ದೊರೆತಾಗ ನನ್ನ ಇಲಾಖೆಯಲ್ಲಿ ಪದೋನ್ನತಿ ಕೊಡಲು ಅಧಿಕಾರಿಗಳು ಸಿದ್ಧರಿರಲಿಲ್ಲ. ಯಾಕೆಂದರೆ ಅದು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುತ್ತಿದ್ದರು.
ಆದರೆ ನೀರಜ್ (ಒಲಿಂಪಿಕ್ಸ್ ವಿಜೇತ) ಪದಕ ಗೆದ್ದ ಬಳಿಕ ಬಹಳ ಬದಲಾವಣೆ ಆಗಿತ್ತು. ನಾವು ಅದನ್ನು ಸಂಭ್ರಮಿಸಿದ ರೀತಿ, ನೀವು (ಮೋದಿ) ಸಂಭ್ರಮಿಸಿದ ರೀತಿ, ದೇಶ ಸಂಭ್ರಮಿಸಿದ ರೀತಿ ಎಲ್ಲವೂ ವಿಶೇಷ ಖುಷಿ ನೀಡುತ್ತಿತ್ತು. ನನಗೆ ಅವರ ಬಗ್ಗೆ ಅಸೂಯೆ ಬರುತ್ತಿತ್ತು. ಯಾಕೆಂದರೆ ನಾನು ಗೆದ್ದ ಅವಧಿಯಲ್ಲಿ ಇಷ್ಟೆಲ್ಲಾ ಇರಲೇ ಇಲ್ಲ. ಖೇಲೋ ಇಂಡಿಯಾ ಯೋಜನೆ ಹಾಗೂ ಕೇಂದ್ರ ಸರಕಾರದ ಯೋಜನೆಗಳಿಂದ ಕ್ರೀಡಾಳುಗಳ ಭವಿಷ್ಯ ಬದಲಾಗುತ್ತಿದೆ. ಎಲ್ಲರೂ ನಮ್ಮ ಗೆಲುವನ್ನು ತಮ್ಮ ಗೆಲುವೆಂದು ಸಂಭ್ರಮಿಸುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಮ್ಮ ಸಮಯದಲ್ಲಿ ಒಂದೆರಡು ಅಥ್ಲಿಟ್ ಗಳು ಕಾಣುತ್ತಿದ್ದರು. ಈಗ ಅಥ್ಲಿಟ್ ಗಳ ಸಮೂಹವೇ ಕಾಣಸಿಗುತ್ತಿದೆ. ಇದಕ್ಕೆಲ್ಲಾ ನಿಮ್ಮದೇ (ಮೋದಿ) ನಾಯಕತ್ವ ಕಾರಣ ಎಂದು ಅಂಜು ಬಾಬ್ಬಿ ಜಾರ್ಜ್ ಹೇಳಿದ್ದಾರೆ.
ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಈಗ ಕ್ರೀಡಾಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿದ್ದಾಳೆ. ಅದು ನಿಜವಾಗುತ್ತದೆ ಎಂಬ ಕಲ್ಪನೆ ಕೂಡ ಅವಳಿಗಿದೆ. ಅದರೊಂದಿಗೆ 36 ನೇ ಒಲಿಂಪಿಕ್ಸ್ ಕ್ರೀಡಾಕೂಟದ ಅತಿಥೇಯವನ್ನು ನಾವು ವಹಿಸುತ್ತೇವೆ ಎಂದು ನೀವು ಘೋಷಣೆ ಮಾಡಿದ ಬಳಿಕ ನಮ್ಮ ಖುಷಿ ಇನ್ನಷ್ಟು ಗರಿಗೆದರಿದೆ. ಅದರ ಸಿದ್ಧತೆಯನ್ನು ನಾವು ಈಗಾಗಲೇ ಆರಂಭಿಸಿದ್ದೇವೆ. ಇನ್ನು ಆ ಕ್ರೀಡಾಕೂಟವನ್ನು ಸೇರಿಸಿಕೊಂಡು ಭಾರತ ವಿಶ್ವದಲ್ಲಿ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೆ ಏರಲಿದೆ ಎಂದು ಅಂಜು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಕ್ರೈಸ್ತ ಪ್ರಮುಖರೊಂದಿಗೆ ಕ್ರಿಸ್ ಮಸ್ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಂಜು ಅವರು ಪ್ರಧಾನಿ ಸಮ್ಮುಖದಲ್ಲಿ ಈ ರೀತಿ ಮಾತನಾಡಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ
Leave A Reply