ಏಲನ್ ಮಸ್ಕ್ ಕಂಪೆನಿಯಿಂದ ಗುಜರಾತ್ ನಲ್ಲಿ ವಾಹನ ಉತ್ಪಾದಕ ಘಟಕ!

ಏಕ್ಸ್ ಪ್ರವರ್ತಕ, ಟೆಸ್ಲಾ ಸ್ಥಾಪಕ, ಉದ್ಯಮಿ ಎಲನ್ ಮಸ್ಕ್ ಹೊಸದೊಂದು ಘೋಷಣೆ ಮಾಡಿದ್ದಾರೆ. ಇವರ ಕಂಪೆನಿ ಟೆಸ್ಲಾ ಗುಜರಾತಿನಲ್ಲಿ ಇಲೆಕ್ಟ್ರಿಕಲ್ ಕಾರುಗಳ ಹೊಸ ಘಟಕವನ್ನು ಆರಂಭಿಸಲಿದೆ. ಇದನ್ನು 2024ರಲ್ಲಿ ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ಗುಜರಾತ್ ವೈಬ್ರೆಂಟ್ ಈ ಕಾರ್ಯಕ್ರಮದಲ್ಲಿಯೇ ಎಲನ್ ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ.
ಆವತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲನ್ ಮಸ್ಕ್ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಟೆಸ್ಲಾ ಪ್ರತಿ ವರ್ಷ 5 ಲಕ್ಷ ಕಾರುಗಳನ್ನು ಉತ್ಪಾದಿಸಲಿದೆ. ಕಾರುಗಳ ಮೂಲಬೆಲೆ ಇಪ್ಪತ್ತು ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ. ಟೆಸ್ಲಾ ಕಂಪೆನಿಯ ಈ ನಡೆಯಿಂದ ಗುಜರಾತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗಲಿದೆ. ಇದು ಗುಜರಾತಿನ ಬೆಳವಣಿಗೆಗೂ ಸಹಕಾರಿಯಾಗಲಿದೆ.
ಇನ್ನು ಭಾರತದ ಮಟ್ಟಿಗೆ ಇದು ಮಹತ್ತರ ಹೆಜ್ಜೆ ಏನಿಸಲಿದೆ. ವಿದೇಶಿ ಉತ್ಪಾದಕರು ಭಾರತದ ಮಾರುಕಟ್ಟೆಯನ್ನು ವಿಸ್ತರಿಸುವ ಮತ್ತು ಹೆಚ್ಚೆಚ್ಚು ಬಂಡವಾಳ ಹೂಡುವ ನಿಟ್ಟಿನಲ್ಲಿ ನಮ್ಮ ಆರ್ಥಿಕ ಶಕ್ತಿಯನ್ನು ವರ್ಧಿಸಲಿದ್ದಾರೆ. ಟೆಸ್ಲಾ ನಡೆಯಿಂದ ಇನ್ನಷ್ಟು ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ತಮ್ಮ ಘಟಕ ನಿರ್ಮಾಣಕ್ಕೆ ನೈತಿಕ ಸ್ಥೈರ್ಯ ಸಹಜವಾಗಿ ಹೆಚ್ಚಾದಂತೆ ಆಗಿದೆ. ಮೋದಿಯವರ ಜನಪ್ರಿಯತೆ ಮತ್ತು ಅಭಿವೃದ್ಧಿಯ ದೃಷ್ಟಿಕೋನದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Leave A Reply