ಫೆಬ್ರವರಿಯಲ್ಲಿ ಮೋದಿಯಿಂದ ಅಬುದಾಬಿಯಲ್ಲಿ ದೇವಸ್ಥಾನ ಉದ್ಘಾಟನೆ!
ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಹಿಂದೂ ದೇವಾಲಯವನ್ನು ಉದ್ಘಾಟಿಸಲು ಯುನೈಟೆಡ್ ಅರಬ್ ಎಮಿರೇಟ್ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಯೇದ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಮಂತ್ರಣ ನೀಡಿದ್ದಾರೆ.
ಈ ದೇವಸ್ಥಾನ 2024 ರ ಫೆಬ್ರವರಿ 14 ರಂದು ಲೋಕಾರ್ಪಣೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ಶೇಕ್ ಜಯೇದ್ ಅವರು ” ಅಬುದಾಭಿಯಲ್ಲಿ ಬೃಹತ್ ದೇವಸ್ಥಾನ ನಿರ್ಮಾಣವಾಗಬೇಕೆಂಬುದು ನಮ್ಮ ಮನಸ್ಸಿನಾಳದ ಆಶಯವಾಗಿತ್ತು. ಆ ದೇವಸ್ಥಾನ ಬೃಹತ್ ರೀತಿಯಲ್ಲಿ ಇರಬೇಕು ಎಂದು ಮೊದಲೇ ಯೋಜನೆ ರೂಪಿಸಲಾಗಿತ್ತು. ಅದರಂತೆ ದೇವಸ್ಥಾನ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ. ದೇವಸ್ಥಾನವನ್ನು ಉದ್ಘಾಟಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಯುಎಇ ಅಧ್ಯಕ್ಷರ ಆತ್ಮೀಯ ಆಹ್ವಾನವನ್ನು ಗೌರವಪೂರ್ವಕವಾಗಿ ನರೇಂದ್ರ ಮೋದಿಯವರು ಸ್ವೀಕರಿಸಿದ್ದಾರೆ. ಅರಬ್ ನೆಲದಲ್ಲಿ ಜರುಗಲಿರುವ ಐತಿಹಾಸಿಕ ಮತ್ತು ಹಿಂದೂ ಸಂಪ್ರದಾಯಬದ್ಧ ಈ ಕಾರ್ಯಕ್ರಮವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೋದಿ ಹೇಳಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
Leave A Reply