ಪಿಒಕೆ ಶಾರದಾ ಪೀಠದಲ್ಲಿ ಪಾಕ್ ಕಾಫಿ ಶಾಪ್!
ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳಲಿದೆ ಎಂಬ ಆಶಾಭಾವನೆ ಭಾರತೀಯರಲ್ಲಿ ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನ ಹೊಸ ಆಟವನ್ನು ಶುರು ಮಾಡಿಕೊಂಡಿದೆ. ಭಾರತೀಯರ ಶ್ರದ್ಧಾ ಕೇಂದ್ರ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠ ಈಗ ಪಿಒಕೆಯ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿಯೇ ಏನಾದರೂ ಮಾಡಿ ಹೊಸ ಗೇಮ್ ಪ್ಲಾನ್ ಮಾಡಿಕೊಳ್ಳಲು ಪಾಕ್ ಷಡ್ಯಂತ್ರ ಹೆಣೆದಿದೆ. ಈ ಕುತಂತ್ರದ ಭಾಗವಾಗಿ ಪಾಕ್ ಸೇನೆ ಶಾರದಾ ದೇಗುಲದ ಸನಿಹದಲ್ಲಿಯೇ ಕಾಫಿ ಶಾಪ್ ತೆರೆದಿದೆ. ಇಲ್ಲಿ ಕಾಫಿ ಶಾಪ್ ತೆರೆಯುವುದು ಅಗತ್ಯ ಇಲ್ಲ ಎನ್ನುವುದು ಒಂದು ಕಡೆಯಾದರೆ ಹೀಗೆ ಮಾಡುವುದು ಕೂಡ ಅಂತರಾಷ್ಟ್ರೀಯ ನಿಯಮಗಳಿಗೆ ವಿರೋಧವಾಗಿದೆ. ಇದು ನಮ್ಮ ಶ್ರದ್ಧಾ ಭಾವನೆಗಳಿಗೆ ವಿರೋಧವಾಗಿದೆ. ಆದ್ದರಿಂದ ಇದನ್ನು ಈಗ ತೆರವುಗೊಳಿಸಬೇಕು ಎನ್ನುವ ಒತ್ತಾಯ ಭಕ್ತರಿಂದ ಕೇಳಿಬರುತ್ತಿದೆ.
ಈ ಶಾರದಾ ಪೀಠವನ್ನು ಯೂನೆಸ್ಕೂ ಪಾರಂಪರಿಕ ಪಟ್ಟಿಯಲ್ಲಿ ಹಾಕಿದ್ದು, ಇದಕ್ಕೆ ಯಾವುದೇ ರೀತಿಯ ಹಾನಿ ಮಾಡುವುದು ಅಪರಾಧವಾಗುತ್ತದೆ. ಆದರೆ ಈ ಬಗ್ಗೆ ಪಾಕ್ ನಿರ್ಲಕ್ಷ್ಯ ವಹಿಸಿದ್ದು, ಶಾರದಾ ಪೀಠದ ಗೋಡೆಗಳಿಗೂ ಒಂದಿಷ್ಟು ಹಾನಿ ಉಂಟಾಗಿದ್ದು, ಇದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಶಾರದಾ ಪೀಠ ಸಮಿತಿ ಹೇಳಿದೆ.
ಈ ಬಗ್ಗೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಈ ಬಗ್ಗೆ ನಾವು ಕಾರ್ಯತತ್ಪರರಾಗಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಿತಿಗೆ ಭರವಸೆ ನೀಡಿದ್ದಾರೆ
Leave A Reply