2024 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ ಹಾಕುವ ಹಕ್ಕು ಏನಾಗುತ್ತದೆ?

2024 ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಜನರ ಮತ ಹಾಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತೆ. ಇದು ದೇಶದ ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂಬ ಕನಸು ಕಾಣುತ್ತಿರುವ ಇ.0.ಡಿ.ಯಾ ಮೈತ್ರಿಕೂಟ ಅದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡಲು ಆರಂಭಿಸಿರುವುದು ನಿಜಕ್ಕೂ ಅಪಾಯದ ಸಂಕೇತವೆನಿಸಿದೆ.
ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಜನರ ಮತದಾನದ ಹಕ್ಕನ್ನು ಕಸಿಯುವ ನಿಯಮ ಯಾವ ಪಕ್ಷ ಬಂದರೂ ತಡೆಯಲು ಸಾಧ್ಯವಿಲ್ಲ. ಹಾಗಿರುವಾಗ ಜನರಲ್ಲಿ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನವನ್ನು ಮಾಡುವುದು ಕೂಡ ತಪ್ಪಾಗುತ್ತೆ. ಇನ್ನು ಹೀಗೆ ಹೇಳುವ ಮೂಲಕ ಅಖಿಲೇಶ್ ಸಿಂಗ್ ಯಾದವ್ ಏನು ಸಾಬೀತು ಪಡಿಸಲು ಯತ್ನಿಸಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರಿಗೆ ಜನರಲ್ಲಿ ಗೊಂದಲ ಏರ್ಪಡಿಸಬೇಕು. ಬಿಜೆಪಿ ತಮ್ಮ ಮತದಾನದ ಹಕ್ಕು ಕಸಿಯುತ್ತೆ ಎಂದು ಹೇಳಬೇಕು. ಅದರಿಂದ ಜನ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು. ಇಷ್ಟೇ ಉದ್ದೇಶ.
ಜನರಿಗೆ ತಮಗೆ ಬೇಕಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ನೀಡುವ ಪವಿತ್ರ ಹಕ್ಕು ಮತ್ತು ಕರ್ತವ್ಯವೇ ಮತದಾನ. ಅದನ್ನು ಯಾರೂ ರದ್ದು ಮಾಡಲು ಆಗುವುದಿಲ್ಲ. ಏಕೆಂದರೆ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಚುನಾವಣೆ ಎಂದರೆ ದೇಶದ ಆರ್ಥಿಕತೆಯ ಮೇಲೆ ಹೊರೆ ಬೀಳುತ್ತದೆ ಎನ್ನುವುದು ಹೌದು. ಆದರೆ ಅದಕ್ಕಾಗಿ ರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳನ್ನು ಮತ್ತು ಲೋಕಸಭಾ ಚುನಾವಣೆಯನ್ನು ಒಂದೇ ಸಲ ಮಾಡಬೇಕೆನ್ನುವ ಚಿಂತನೆ ಕೇಂದ್ರ ಸರಕಾರದ ಮುಂದಿದೆ. ಇದರಿಂದ ಕೋಟಿಗಟ್ಟಲೆ ರೂಪಾಯಿ ದೇಶದ ಬೊಕ್ಕಸದಲ್ಲಿ ಉಳಿತಾಯವಾಗುತ್ತದೆ. ಒಂದೇ ರಾಷ್ಟ್ರ, ಒಂದೇ ಚುನಾವಣೆ ಎನ್ನುವ ಚಿಂತನೆ ಅಡಗಿದೆ. ಆದರೆ ಇಷ್ಟು ವಿಶಾಲ ದೇಶದಲ್ಲಿ ಅದು ಕಷ್ಟಸಾಧ್ಯವೂ ಆಗಿದೆ. ಆದರೆ ಎಲ್ಲಿಯೂ ಮತದಾನದ ಹಕ್ಕನ್ನು ರದ್ದುಪಡಿಸುವ ಸಾಧ್ಯತೆ ಇಲ್ಲ. ಆದರೆ ಸಮಾಜವಾದಿ ಪಾರ್ಟಿ ಹೀಗೆ ಸುಳ್ಳು ಹೇಳುವ ಮೂಲಕ ಜನರ ಭಾವನೆಗಳನ್ನು ಕೆರಳಿಸುತ್ತಿದೆ.
Leave A Reply