ಅದು ಬರೀ ಫಲಕ ಅಲ್ಲ…
ಅಹಂಗೆ ಪೆಟ್ಟು ಬಿದ್ದಾಗ ಪ್ರಶಸ್ತಿಯ ಫಲಕ ಗುಜರಿ ಅನಿಸುತ್ತಾ?
ನಿಮಗೆ ಈ ದೇಶ ಎಲ್ಲವನ್ನು ಕೊಟ್ಟಿದೆ. ನಿಮ್ಮ ಪರಿಶ್ರಮದಿಂದ ಅನೇಕ ಅಂತರಾಷ್ಟ್ರೀಯ ಪದಕಗಳು ಬಂದಿರಬಹುದು. ಅದು ಬಂದ ಮೇಲೆ ನಿಮಗೆ ಅದಕ್ಕೆ ತಕ್ಕುದಾದ ಪ್ರಶಸ್ತಿ, ಅದರೊಂದಿಗೆ ಲಕ್ಷಾಂತರ ರೂಪಾಯಿ ಹಣ, ಇಡೀ ದಿನ ಪ್ರಾಕ್ಟೀಸ್ ಎಂದು ಫೀಲ್ಡ್ ನಲ್ಲಿದ್ದರೂ ಕೇಂದ್ರ ಸರಕಾರದ ನೌಕರಿ, ಅದಕ್ಕೆ ದೊಡ್ಡ ಸಂಬಳ, ಸೈಟ್, ಗೌರವ ಎಲ್ಲವೂ ಸಿಕ್ಕಿದೆ. ಇಷ್ಟಾದ ಮೇಲೆ ನೀವು ಹೇಳಿದಂತೆ ನಿಮ್ಮ ಕ್ರೀಡೆಗೆ ಸಂಬಂಧಪಟ್ಟ ಪ್ರಾಧಿಕಾರದ ಅಧ್ಯಕ್ಷೀಯ ಚುನಾವಣೆಗಳು ನಡೆದವು. ನೀವು ವಿರೋಧಿಸುವ ವ್ಯಕ್ತಿ ಚುನಾವಣೆಗೆ ನಿಂತಿಲ್ಲ. ಬೇರೊಬ್ಬರು ಗೆದ್ದರು. ಆದರೆ ಈತ ನೀವು ವಿರೋಧಿಸುವ ವ್ಯಕ್ತಿಯ ಆಪ್ತ ಎಂದು ಹೇಳಿದ್ದೀರಿ. ಅದಕ್ಕಾಗಿ ಆ ಹೊಸ ಸಮಿತಿಯನ್ನೇ ಸೂಪರ್ ಸೀಡ್ ಮಾಡಲಾಯಿತು. ಇನ್ನು ನ್ಯಾಯ ಬೇಕು ಎಂದರೆ ಏನು?
ವಿನೀಶ್ ಪೋಗೋಟ್, ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ ನೀವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ವಿರೋಧಿಸಿದಿರಿ. ಈ ಬಗ್ಗೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿದ್ದೀರಿ, ಕಾಂಗ್ರೆಸ್ ಇದನ್ನು ಅಸ್ತ್ರವನ್ನಾಗಿ ಬಳಸಿತು, ನೀವು ಹತ್ತಾರು ದಿನ ಪ್ರತಿಭಟನೆಗೆ ಕುಳಿತುಕೊಂಡು ಬಿಟ್ರಿ, ನಿಮ್ಮ ಬೇಡಿಕೆಯನ್ನು ಸರಕಾರ ಕೇಳಿ ನೀವು ಹೇಳಿದ ಹಾಗೆ ನಡೆದುಕೊಂಡಿತು. ಇಷ್ಟೆಲ್ಲಾ ಆದ ಮೇಲೆಯೂ ನೀವು ನಿಮಗೆ ಕೊಟ್ಟಿರುವ ಪ್ರಶಸ್ತಿಯನ್ನು ಹಿಂತಿರುಗಿಸುವ ಸಲುವಾಗಿ ಡ್ರಾಮ ಮಾಡುತ್ತಿದ್ದಿರಿ.
ಯಾಕಿ ಡ್ರಾಮ?
ಈ ಡ್ರಾಮ ಎನ್ನುವ ಶಬ್ದ ಎಂಬ ಶಬ್ದವನ್ನು ಉದ್ದೇಶಪೂರ್ವಕವಾಗಿಯೇ ಬಳಸಬೇಕಿದೆ. ಏಕೆಂದರೆ ಇಲ್ಲಿ ಇರುವ ಏಕೈಕ ಕಾರಣ ಅಂದರೆ ನಿಮ್ಮ ಅಹಂಗೆ ಪೆಟ್ಟಾಗಿದೆ. ಅಷ್ಟೇ. ನೀವು ಅಂತರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡುವುದು, ದೇಶಿಯ ಪಂದ್ಯಗಳು ನಿಮ್ಮ ಲೆವೆಲ್ಲಿಗೆ ಹೊಂದುವುದಿಲ್ಲ ಎನ್ನುವ ಅಹಂ ನಿಮ್ಮ ತಲೆಯೊಳಗೆ ಯಾವಾಗ ಹೋಯಿತೋ ಆಗ ಹಿಂದಿನ ಅಧ್ಯಕ್ಷರು ನೀವು ದೇಶಿಯ ಪಂದ್ಯಗಳನ್ನು ಕೂಡ ಆಡಲೇಬೇಕು ಎಂದು ಸೂಚಿಸಿದಾಗ ನಿಮ್ಮ ಇಗೋಗೆ ಪೆಟ್ಟು ಬಿದ್ದಿತು. ನಾವು ದೇಶಿಯ ಮಟ್ಟದಲ್ಲಿ ಆಡುವುದಿಲ್ಲ, ಬೇಕಾದರೆ ನಿನ್ನನ್ನೇ ಕೆಳಗೆ ಇಳಿಸುತ್ತೇವೆ ಎಂದು ಯಾವಾಗ ನಿರ್ಧರಿಸಿದ್ದಿರೋ ಆಗಲೇ ನಿಮ್ಮ ಅಹಂ ಎದ್ದೇಳಿತ್ತು. ಅದರ ನಂತರ ನಡೆದದ್ದು ಅಪ್ಪಟ ಡ್ರಾಮ. ಕೊನೆಗೂ ಕ್ರೀಡಾಳುಗಳ ಮೇಲಿನ ಅಭಿಮಾನ, ಪ್ರೀತಿ, ವಿಶ್ವಾಸದ ಕಾರಣದಿಂದ ನಿಮ್ಮ ಒಂದೊಂದೇ ಬೇಡಿಕೆಗಳನ್ನು ಈಡೇರಿಸಲಾಗಿದೆ. ಆದರೆ ನೀವು ನಿಮ್ಮ ಹಟವನ್ನು ಬಿಡುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ಪ್ರಶಸ್ತಿ ವಾಪಾಸು ಇಟ್ಟು ಹೋಗುತ್ತಿರಿ ಎಂದಾದರೆ ನಿಮಗೆ ಈ ದೇಶದ ಅತ್ಯುನ್ನತ ಪ್ರಶಸ್ತಿಗಳ ಬಗ್ಗೆ ಗೌರವ ಇಲ್ಲ ಎಂದು ತಾನೆ ಅರ್ಥ.
ಅದು ಬರೀ ಫಲಕ ಅಲ್ಲ…
ಈಗ ಪ್ರಶಸ್ತಿಗಳ ಜೊತೆಗೆ ನಿಮಗೆ ಸಿಕ್ಕಿರುವ ಲಕ್ಷಾಂತರ ರೂಪಾಯಿ ಹಣವನ್ನು ಕೂಡ ಹಿಂತಿರುಗಿಸಿ ಎಂದು ಸರಕಾರ ಕೇಳಿದರೆ ಏನಾಗಲಿದೆ. ಅರ್ಜುನ ಪ್ರಶಸ್ತಿಯೊಂದಿಗೆ 15 ಲಕ್ಷ, ಖೇಲ್ ರತ್ನ ಪ್ರಶಸ್ತಿಯೊಂದಿಗೆ 25 ಲಕ್ಷ, ನಿಮಗೆ ಲಕ್ಷ ರೂಪಾಯಿ ಕೊಡುವ ಕೇಂದ್ರ ಸರಕಾರದ ನೌಕರಿ, ಅದರೊಂದಿಗೆ ನೀವು ವಾಸವಾಗಿರುವ ರಾಜ್ಯದಲ್ಲಿರುವ ಸರಕಾರಗಳು ಕೊಟ್ಟ ಹಣ ಇತರೆ ಭತ್ಯೆಗಳು ಎಲ್ಲವನ್ನು ವಾಪಾಸು ಕೊಡಿ ಎಂದು ಕೇಳಿದರೆ ಏನಾದಿತು. ಹಾಗಾದರೆ ನಿಮಗೆ ಆ ಅರ್ಜುನ ಪ್ರಶಸ್ತಿ ಅಥವಾ ಖೇಲ್ ರತ್ನ ಪ್ರಶಸ್ತಿಯ ಟ್ರೋಫಿ ಎಂದರೆ ಬರೀ ಒಂದು ಸ್ಮರಣಿಕೆ ಮಾತ್ರವಾಯಿತೇ? ಅದಕ್ಕೆ ಏನೂ ಗೌರವವಿಲ್ಲವೇ? ಈ ಪ್ರಶಸ್ತಿಗಳು ಸಿಗಲಿ ಎಂದು ಹಗಲಿರುಳು ಅವಿರತವಾಗಿ ಶ್ರಮಿಸುತ್ತಿರುವ ಯಾವುದೋ ಗ್ರಾಮದ ಕ್ರೀಡಾಪಟುಗೆ ನೀವು ಮಾಡುತ್ತಿರುವ ಅವಮಾನ ಇದು ಎಂದು ಅನಿಸುವುದಿಲ್ಲವೇ? ಪ್ರತಿ ಕ್ರೀಡಾಪಟುವಿಗೂ ನಿಮಗೆ ಸಿಕ್ಕಷ್ಟು ಸ್ಥಾನಮಾನ, ಗೌರವ ಸಿಗುವುದಿಲ್ಲ. ಹಾಗೆಂದು ಯಾವ ಕ್ರೀಡಾಪಟು ಕೂಡ ಕಡಿಮೆ ಪರಿಶ್ರಮ ಹಾಕುವುದಿಲ್ಲ. ಆದರೂ ನೀವು ಆ ಪ್ರಶಸ್ತಿಗಳನ್ನು ಹಿಂತಿರುಗಿ ಅದು ಯಕಶ್ಚಿತ್ ಟ್ರೋಫಿ ಎಂದು ಹೀಗಳೆದಂತೆ ಆಗಿದೆ. ನಿಮ್ಮ ಬೇಡಿಕೆಯಂತೆ ಯಾರ ವಿರುದ್ಧ ತನಿಖೆ ಆಗಬೇಕೋ ಅವರ ವಿರುದ್ಧ ತನಿಖೆ ಆಗಿದೆ. ತಪ್ಪಿತಸ್ಥ ಅಲ್ಲ ಎಂದು ವಿಚಾರಣೆಯಿಂದ ಬಹಿರಂಗವಾಗಿದೆ. ಅವರು ಅಧಿಕಾರದಿಂದ ಕೆಳಗಿಳಿದ್ದಿದ್ದಾರೆ. ಆದರೂ ನೀವು ಹಟ ಸಾಧಿಸುತ್ತಿದ್ದೀರಿ. ಅತ್ತ ಅಥ್ಲೇಟ್ ಅಂಜು ಬಾಬಿ ಜಾರ್ಜ್ ತರದವರು ಮೋದಿಯವರು ನಾವು ಕ್ರೀಡಾಳುಗಳಾಗಿ ಇರುವಾಗ ಪ್ರಧಾನಿಯಾಗಿ ಇರಬೇಕಿತ್ತು. ಆಗ ನಮ್ಮ ಭವಿಷ್ಯ ಒಳ್ಳೆಯದಾಗುತ್ತಿತ್ತು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ನೀವು?
Leave A Reply