ಜನವರಿ 22 ರಂದು ದೀಪಾವಳಿ ಆಚರಣೆಗೆ ಮಹಾರಾಷ್ಟ್ರ ಸಿಎಂ ಕರೆ!
ಮುಂಬೈಯಲ್ಲಿರುವ ದೇವಸ್ಥಾನಗಳನ್ನು ಮತ್ತು ಸರಕಾರಿ ಕಟ್ಟಡಗಳನ್ನು ವಿದ್ಯುದೀಪಾಲಂಕಾರಗಳ ಮೂಲಕ ಚೆಂದ ಕಾಣಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. ಜನವರಿ 22 ರಂದು ಮುಂಬೈ ದೀಪಾವಳಿಯಂತೆ ಸಂಭ್ರಮಿಸಬೇಕು ಎಂದು ಬಯಸಿರುವ ಅವರು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಭವ್ಯ ದೇಗುಲ ಉದ್ಘಾಟನೆ ಆಗುವ ದಿನ ಮುಂಬೈಯಲ್ಲಿಯೂ ಅದರ ಸಂಭ್ರಮ ರಾರಾಜಿಸಬೇಕು ಎಂದು ಅವರು ಯೋಜನೆ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ” ಶ್ರೀರಾಮ ಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಆವತ್ತು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ವತಿಯಿಂದ ಇಡೀ ಮುಂಬೈಯಲ್ಲಿ ದೀಪಾವಳಿಯ ಸಂಭ್ರಮವನ್ನು ಅನುಭವಿಸುವ ವಾತಾವರಣ ನಿರ್ಮಿಸಲಾಗುವುದು. ಅದಕ್ಕಾಗಿ ಅಲಂಕಾರಿಕ ವಿದ್ಯುದೀಪಗಳನ್ನು ದೇವಸ್ಥಾನಗಳ ಮೇಲೆ, ಕಟ್ಟಡಗಳ ಮೇಲೆ ಹಾಕಿದರೆ ಅದು ಚೆಂದವಾಗಿ ಕಾಣುತ್ತದೆ ” ಎಂದು ಹೇಳಿದ್ದಾರೆ. ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದು ಶಿವಸೇನೆಯ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರ ಕನಸಾಗಿತ್ತು ಎಂದು ಅವರು ಹೇಳಿದ್ದಾರೆ.
“ಮೋದಿಯವರು ನಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಪ್ರಧಾನಿ ಏನು ಹೇಳುತ್ತಾರೋ ಅದನ್ನು ಮಾಡಿ ತೋರಿಸುತ್ತಾರೆ. ಅದು ರೈಲ್ವೆ ನಿಲ್ದಾಣವಿರಲಿ, ವಿಮಾನ ನಿಲ್ದಾಣವಿರಲಿ, ಮೋದಿಯವರ ಭರವಸೆಗಳು ಅನುಷ್ಟಾನಕ್ಕೆ ಬರಲು ತಡವಾಗುವುದಿಲ್ಲ. ಪ್ರತಿಯೊಬ್ಬರಿಗೂ ಮೋದಿಯವರೇ ಗ್ಯಾರಂಟಿ” ಎಂದು ಹೇಳಿದ್ದಾರೆ.
Leave A Reply