ಜನವರಿ 22 ರಂದು ಮೋದಿ ಉಪವಾಸ ವ್ರತ!
ಜನವರಿ 22 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಟೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆವತ್ತು ಇಡೀ ದಿನ ಮೋದಿಯವರು ಅಯೋಧ್ಯೆಯಲ್ಲಿ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಆಚರಣೆಗಳು, ಸಂಪ್ರದಾಯಗಳು ಮುಗಿಯುವ ತನಕ ಪ್ರಧಾನಿಯವರು ಉಪವಾಸ ವ್ರತದಲ್ಲಿರುತ್ತಾರೆ.
ಹಿಂದೂ ಶಾಸ್ತ್ರಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವ ಮೊದಲು ಅಂದು ಬೆಳಿಗ್ಗೆ ಅಕ್ಕಿಯಿಂದ ತಯಾರಿಸಲಾಗುವ ಯಾವುದೇ ಆಹಾರವನ್ನು ಸೇವಿಸುವ ಪದ್ಧತಿ ಇಲ್ಲ. ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕವೇ ಅಕ್ಕಿಯಿಂದ ತಯಾರಿಸಿದ ತಿಂಡಿಯನ್ನು ಸೇವಿಸಬಹುದು. ಇನ್ನು ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿಯೇ ಇದ್ದು ಎಲ್ಲಾ ಮುಗಿದ ಮೇಲೆ ಆಹಾರ ಸೇವಿಸಬೇಕಾಗುತ್ತದೆ.
ಮೋದಿಯವರು ಯಾವಾಗಲೂ ಶುಭ ದಿನಗಳು ಇರುವಾಗ ಉಪವಾಸ ವ್ರತವನ್ನೇ ಆಚರಿಸುತ್ತಾರೆ. ಅವರು ಅಯೋಧ್ಯೆಯಲ್ಲಿ ಶಿಲಾನ್ಯಾಸ, ಭೂಮಿ ಪೂಜೆಯ ದಿನದಂದು ಕೂಡ ಯಾವುದೇ ಆಹಾರ ಸೇವಿಸದೇ ಉಪವಾಸ ವ್ರತವನ್ನು ಆಚರಿಸಿದ್ದರು. ಈ ಬಾರಿಯೂ ಅದೇ ರೀತಿಯಲ್ಲಿ ಕಠಿಣ ವ್ರತಕ್ಕೆ ಮುಂದಾಗಲಿದ್ದಾರೆ. ಪ್ರತಿ ಬಾರಿ ನವರಾತ್ರಿಯ ದಿನಗಳಲ್ಲಿಯೂ ಮೋದಿ ಕೇವಲ ನೀರು ಮಾತ್ರ ಸೇವಿಸುತ್ತಾರೆ. ಇದು ಅನೇಕ ವರ್ಷಗಳಿಂದ ಅವರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.
500 ವರ್ಷಗಳ ಹೋರಾಟದಿಂದ ದೊರೆತಿರುವ ಈ ಪುಣ್ಯದಿನದಂದು ಅವರು ಕೈಗೊಂಡಿರುವ ಹೆಜ್ಜೆಗಳು ನಿಜಕ್ಕೂ ಮಾದರಿ. ಅಂದು ಕನಿಷ್ಟ 10 ಸಾವಿರ ಜನರು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಲಿದ್ದಾರೆ.
Leave A Reply