ಅವಳ ಮೇಲೆ ಹಿಂದೆ ದೂರಿತ್ತಾ..
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮನ್ಸೂರ್ ಅಲಿ ಅವರ ಮೇಲೆ ಈಗ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿ ಕೊನೆಗೆ ಸಂಧಾನ ಪ್ರಕ್ರಿಯೆಗಳೆಲ್ಲವೂ ನಡೆದು ಸಂತ್ರಸ್ತ ಯುವತಿಯ ಮನವೊಲಿಸಿ ದೂರು ಹಿಂದಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿ ಬರುತ್ತಿದೆ. ತನಗೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಅವಳನ್ನು ಕೆಲಸದಿಂದಲೂ ತೆಗೆಯಬೇಕು ಎನ್ನುವ ಒತ್ತಡವನ್ನು ಇದೇ ಮನ್ಸೂರ್ ಅವಳ ಗುತ್ತಿಗೆದಾರನಿಗೂ ಹಾಕಿದ್ದರು. ಯಾಕೆಂದರೆ ಈಗ ಕಂಪ್ಲೇಟ್ ಕೊಟ್ಟಿದ್ದ ಯುವತಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದಳು. ನೀನು ನನ್ನ ಆಸೆಗಳನ್ನು ಪೂರೈಸದಿದ್ದರೆ ಕೆಲಸದಿಂದ ತೆಗೆಸುತ್ತೇನೆ ಎಂದು ಅವಳಿಗೆ ಧಮ್ಕಿ ಕೂಡ ಆಯುಕ್ತ ಹಾಕಿದ್ದರು. ಅವಳನ್ನು ಸಂಜೆ ಕೆಲಸದ ಅವಧಿ ಮುಗಿದ ಬಳಿಕವೂ ಅಲ್ಲಿಯೇ ಇರುವಂತೆ ಸೂಚನೆ ಕೊಡುತ್ತಿದ್ದರು. ಆಯುಕ್ತರ ಕಾಟವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಯುವತಿ ಮನೆಗೆ ಹೋಗಿ ಅಳುತ್ತಾ ಇದ್ದಳು. ಅವಳ 23 ವರ್ಷಗಳ ಸೇವಾವಧಿಯಲ್ಲಿ ಇಂತವರನ್ನು ಅವಳು ನೋಡಿರಲಿಲ್ಲ. ಕೊನೆಗೆ ಇವರ ಪೀಡನೆಯನ್ನು ತಪ್ಪಿಸಿಕೊಳ್ಳಲು ಪೊಲೀಸರಿಗೆ ದೂರು ಕೊಡುವುದೊಂದೇ ದಾರಿ ಎಂದು ಆಕೆ ನೇರವಾಗಿ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಳು.
ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ಕಂಪ್ಲೇಟ್..
ಆದರೆ ಪೊಲೀಸರಿಗೆ ಮೂಡಾ ಆಯುಕ್ತನ ಮೇಲೆ ಲೈಂಗಿಕ ದೌರ್ಜನ್ಯದ ಕೇಸನ್ನು ತೆಗೆದುಕೊಳ್ಳುವುದು ಹೇಗೆ ಎಂಬ ಟೆನ್ಷನ್ ಶುರುವಾಯಿತು. ಯಾಕೆಂದರೆ ದೊಡ್ಡ ಅಧಿಕಾರಿ. ಅಂತವರ ಮೇಲೆ ಅಷ್ಟು ದೊಡ್ಡ ಪ್ರಕರಣ ದಾಖಲಿಸುವುದು ಹೇಗೆ ಜಿಜ್ಞಾಸೆ ಶುರುವಾಗಿತ್ತು. ನೀವು ಸೀದಾ ಪೊಲೀಸ್ ಕಮೀಷನರ್ ಅವರ ಬಳಿ ತೆರಳಿ ನಿಮ್ಮ ಕಷ್ಟ ಹೇಳಿ ಎಂದು ಅಲ್ಲಿ ಸಲಹೆ ಸಿಕ್ಕಿತು. ಯುವತಿ ಪೊಲೀಸ್ ಕಮೀಷನರ್ ಅವರ ಬಳಿ ಈ ನೋವನ್ನು ಹೇಳಿಕೊಂಡಿದ್ದಾರೆ. ಪೊಲೀಸ್ ಕಮೀಷನರ್ ಅನುಪಮ್ ಅವರು ಉರ್ವಾ ಪೊಲೀಸ್ ಠಾಣೆಗೆ ಆಕೆಯ ದೂರನ್ನು ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ. ಅವಳು ಕಂಪ್ಲೇಟ್ ಕೊಡುತ್ತಿದ್ದಂತೆ ಅವಳಿಗೆ ಒತ್ತಡಗಳು ಬರಲು ಶುರುವಾಗಿದೆ. ಕೊನೆಗೆ ರಾಜಿ ಪಂಚಾಯತಿ ಮೂಲಕ ಪ್ರಕರಣ ಕೈಬಿಡಲು ನಿರ್ಧರಿಸಲಾಗಿದೆ.
ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ಕಡಿಮೆ ವೇತನವಾದ್ರೂ ಪರವಾಗಿಲ್ಲ ಎಂದು ಕೆಲಸಕ್ಕೆ ಬರುವ ಅಮಾಯಕ ಹೆಣ್ಣುಮಕ್ಕಳನ್ನು ತಮ್ಮ ಭೋಗದ ಆಸೆಗೆ ಗುರಿಯಾಗಿಸುವುದನ್ನು ತಡೆಯ ಬೇಕಾದರೆ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ಒಂದು ಕೋಟಿ ಕೊಟ್ಟು ಆ ಹುದ್ದೆಗೆ ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ಅವರು ಬಂದದ್ದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಲು. ಒಂದು ದಿನ ಬೆಳಿಗ್ಗೆ ಮನಪಾ ಆಯುಕ್ತರಾಗಲು ಇವರು ತಯಾರಾಗುತ್ತಿದ್ದಂತೆ ಸಂಜೆ ಮೂಡಾ ಆಯುಕ್ತರಾಗಿ ಹೋಗಲು ದಿಢೀರನೆ ಸೂಚನೆ ಸಿಕ್ಕಿತ್ತು.
ಅವಳ ಮೇಲೆ ಹಿಂದೆ ದೂರಿತ್ತಾ..
ಸದ್ಯ ಆಯುಕ್ತರು ಪೊಲೀಸ್ ಠಾಣೆಗೆ ಹೋಗಿ ತಾವು ಅವಳಿಗೆ ಏನೋ ಕೆಲಸ ಕೊಟ್ಟಿದ್ದಾಗಿಯೂ, ಅವಳು ಅದರಲ್ಲಿ ತುಂಬಾ ತಪ್ಪು ಮಾಡಿದ್ದಾಗಿಯೂ ಅದಕ್ಕೆ ಜೋರು ಮಾಡಿ ಹೀಗೆ ಮಾಡಿದರೆ ಕೆಲಸದಿಂದ ತೆಗೆಸುವುದಾಗಿ ಹೇಳಿದ್ದಾಗಿಯೂ, ಈ ಬಗ್ಗೆ ಅವಳ ಗುತ್ತಿಗೆದಾರನಿಗೆ ತಿಳಿಸಿದ್ದಾಗಿಯೂ ಸಮಜಾಯಿಷಿಕೆ ಕೊಟ್ಟು ಬಂದಿದ್ದಾರೆ. ಒಂದು ವೇಳೆ ಇದೇ ನಿಜವಾಗಿದ್ದರೆ, ಈ ಹಿಂದೆನೂ ಒಮ್ಮೆ ಹೀಗೆ ಇವರು ಬೇರೊಂದು ಹೆಣ್ಣು ಮಗಳಿಗೆ ಹೀಗೆ ಕಿರುಕುಳ ಕೊಡಲು ಹೋಗಿದ್ದು ಸುಳ್ಳಾ? ಆಗ ಅವಳು ಪೊಲೀಸ್ ಕಂಪ್ಲೇಟ್ ಕೊಡುತ್ತೇನೆ ಎಂದದ್ದು ಸುಳ್ಳಾ? ಆಗ ಇನ್ನೊಬ್ಬ ಇವರದ್ದೇ ಧರ್ಮದ ಅಧಿಕಾರಿ ಅವಳನ್ನು ಸಮಾಧಾನ ಮಾಡಿದ್ದು ಸುಳ್ಳಾ? ಆಗ ಆ ವಿಷಯ ಅಲ್ಲಿಗೆ ತಣ್ಣಗಾಗಿದ್ದು ಸುಳ್ಳಾ? ಒಟ್ಟಿನಲ್ಲಿ ಈ ಪ್ರಕರಣ ನಿಜಕ್ಕೂ ತನಿಖೆ ಆಗಲೇಬೇಕು. ಈಗ ದೂರು ಕೊಟ್ಟಿರುವ ಸಂತ್ರಸ್ತ ಯುವತಿ 23 ವರ್ಷಗಳಿಂದ ಅಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾಳೆ. ಹಾಗಿರುವಾಗ ಅವಳು ಅನೇಕ ಅಧಿಕಾರಿಗಳ ಕೈ ಕೆಳಗೆ ದುಡಿದಿದ್ದಾಳೆ. ಅವಳ ಇಷ್ಟು ವರ್ಷಗಳ ಸೇವಾವಧಿಯಲ್ಲಿ ಕೆಲಸದಲ್ಲಿ ತಪ್ಪು ಮಾಡಿದ್ದಕ್ಕೆ ಈ ಹಿಂದಿನ ಅಧಿಕಾರಿಗಳು ಬೈದಿರುವ ಉದಾಹರಣೆ ತುಂಬಾ ಇದೆಯಾ ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟದ ಕೆಲಸವಲ್ಲ. ಒಂದು ವೇಳೆ ಅಂತಹ ಉದಾಹರಣೆಗಳು ಇಲ್ಲ ಎಂದಾದಲ್ಲಿ ತಪ್ಪು ಯಾರದ್ದು ಎಂದು ಗೊತ್ತಾಗುವುದು ಕೂಡ ದೊಡ್ಡ ಸಂಗತಿ ಅಲ್ಲ. ಹಾಲು ಯಾವುದು, ನೀರು ಯಾವುದು ಎಂದು ಅನೇಕರಿಗೆ ಗೊತ್ತಿದೆ. ಅದೆಲ್ಲಾ ಗೊತ್ತಿದ್ದೇ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದುರ್ಗಾ ವಾಹಿನಿ, ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿರುವುದು!!
Leave A Reply