ದೇಶದ ಅತ್ಯಂತ ಭ್ರಷ್ಟ ರಾಜಕಾರಣಿ ಯಾರು ಎಂದದ್ದಕ್ಕೆ ಯೆಚೂರಿ ಏನು ಹೇಳಿದ್ರು?
ದೇಶದಲ್ಲಿ ತಾವು ಕಂಡಿರುವ ಭ್ರಷ್ಟ ರಾಜಕಾರಣಿ ಯಾರು, ಅವರೊಂದಿಗೆ ನೀವು ಕೂಡ ಉತ್ತಮ ಬಾಂಧವ್ಯ ಹೊಂದಿರಬಹುದು, ಯಾರು ಎಂದು ಹೇಳಿಬಿಡಿ, ಇವತ್ತು ಈ ಸಂಗತಿ ಮನಬಿಚ್ಚಿ ಮಾತನಾಡಿ ಎಂದು ನಿರೂಪಕನೊಬ್ಬ ಸಂದರ್ಶನದಲ್ಲಿ ಸಿಪಿಐಎಂ ರಾಷ್ಟ್ರೀಯ ಮುಖಂಡ ಸೀತಾರಾಂ ಯೆಚೂರಿಗೆ ಕೇಳುತ್ತಾರೆ.
ಅದಕ್ಕೆ ಯೆಚೂರಿ ನಗುತ್ತಾ ಹಾಗೇ ಹೇಳಿದರೆ ನಮ್ಮ ಮೈತ್ರಿಕೂಟ ಏನಾಗುತ್ತದೆ ಎಂದು ಗೊತ್ತಿದೆಯಾ ಎಂದು ನಗುತ್ತಾ ಉತ್ತರ ಕೊಡುತ್ತಾರೆ. ಈಗಾಗಲೇ ಪ್ರಯಾಸದಿಂದ ಮೈತ್ರಿಕೂಟ ರಚಿಸಿದ್ದೇವೆ. ಹೀಗಿರುವಾಗ ಅತ್ಯಂತ ಭ್ರಷ್ಟ ರಾಜಕಾರಣಿಯ ಹೆಸರು ಹೇಳಿದ್ರೆ ಮೈತ್ರಿಕೂಟ ಉಳಿಯುತ್ತಾ ಎಂದು ಹೇಳಿದ್ದಾರೆ. ಈ ತುಣುಕನ್ನು “ಎಕ್ಸ್” ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ.
ಯೆಚೂರಿಯವರ ಬಾಡಿ ಲ್ಯಾಂಗ್ವೆಜ್ ಹಾಗೂ ವಾಕ್ಯಗಳನ್ನು ಗಮನಿಸಿದವರಿಗೆ ಒಂದಂತೂ ಸ್ಪಷ್ಟ. ಎಡಪಕ್ಷಗಳು ಎಲ್ಲವೂ ಗೊತ್ತಿದ್ದೇ ಇ.ಂ.ಡಿ.ಯಾ ಒಕ್ಕೂಟದಲ್ಲಿ ಮುಂದುವರೆಯುತ್ತಿವೆ. ಯಾಕೆಂದರೆ ಅವರಿಗೆ ಬೇರೆ ದಾರಿ ಇಲ್ಲ. ಹೇಗಾದರೂ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಒಕ್ಕೂಟವನ್ನು ಮುಂದಿನ ಬಾರಿ ಸೋಲಿಸದಿದ್ದರೆ ಎಡಪಕ್ಷಗಳು ಶಾಶ್ವತವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಲಿವೆ. ಹಾಗಂತ ವಿಪಕ್ಷಗಳ ಮೈತ್ರಿಕೂಟದಲ್ಲಿ ಇರುವ ಒಂದೊಂದು ಪಕ್ಷ ಕೂಡ ಭ್ರಷ್ಟಾಚಾರದಲ್ಲಿ ಎಷ್ಟನೇ ಸ್ಥಾನದಲ್ಲಿವೆ ಎನ್ನುವುದು ಕೂಡ ಸೀತಾರಾಮ್ ಯೆಚೂರಿಯವರಿಗೆ ಗೊತ್ತಿದೆ. ಸ್ಥೈಂದಾತಿಕ ಕಾರಣವೊಂದು ಇರದೇ ಇದ್ದಿದ್ದರೆ ಇಷ್ಟೊತ್ತಿಗೆ ಅವರು ಕೂಡ ಅದರೊಂದಿಗೆ ಇರುತ್ತಿರಲಿಲ್ಲ. ಆದರೆ ರಾಜಕೀಯದಲ್ಲಿ ಕೊನೆಗೆ ಗೆಲುವು ಮಾತ್ರ ಮುಖ್ಯ ಎನ್ನುವುದು ಅವರಿಗೂ ಗೊತ್ತಿದೆ. ಆದರಿಂದ ಮೋದಿ ವಿರೋಧಿ ಪಡೆಗಳೆಲ್ಲಾ ಒಂದಾಗಿವೆ.
Leave A Reply