• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

500 ವರ್ಷ ಎದುರಿಸಿದ ನಮಗೆ ಈ ವಿವಾದ ಲೆಕ್ಕಕ್ಕೇ ಇಲ್ಲ!

Santhosh Kumar Mudradi Posted On January 13, 2024
0


0
Shares
  • Share On Facebook
  • Tweet It

ಕನಿಷ್ಠ ಪಕ್ಷ ನಮ್ಮ ಹಿಂದಿನ ಹತ್ತು ತಲೆಮಾರುಗಳು ರಾಮಮಂದಿರದ ನಿರೀಕ್ಷೆಯಲ್ಲಿಯೇ ತಮ್ಮ ಬದುಕನ್ನು ಸವೆಸಿದ್ದಾರೆ. ಲಕ್ಷಾಂತರ ಮಹನೀಯರು ಇದಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಆದರೆ ರಾಮಮಂದಿರದ ಉದ್ಘಾಟನೆಯನ್ನು ಕಾಣುವ ಸೌಭಾಗ್ಯ ನಮಗೆ ದೊರಕಿದೆ. ಇದರಲ್ಲೂ ಕೆಲವರು ಬದುಕಿನ ಪ್ರಾರಂಭದಲ್ಲಿದ್ದಾರೆ. ಮತ್ತೆ ಕೆಲವರು ಅಂತ್ಯದಲ್ಲಿದ್ದಾರೆ. ನಡುವಿನ ಸ್ಥಿತಿಯಲ್ಲಿರುವವರಿಗೆ ಮಾತ್ರ ಇದನ್ನು ಪೂರ್ತಿಯಾಗಿ ಕಣ್ತುಂಬಿಸಿಕೊಳ್ಳುವ ಮತ್ತಷ್ಟು ಸೌಭಾಗ್ಯ ದೊರಕಿದ್ದು.ಇದೆಲ್ಲವೂ ಎಲ್ಲರಿಗೂ ಗೊತ್ತಿರುವಂತದ್ದು.

ಈ ಸಂದರ್ಭದಲ್ಲಿ ನಮ್ಮವರೇ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮಂದಿರ ಪೂರ್ತಿಯಾಗಲಿಲ್ಲ,ಮುಹೂರ್ತ ಸರಿಯಿಲ್ಲ, ಇದರ ಲಾಭವನ್ನು ಬಿಜೆಪಿಯವರು ಪಡೆದುಕೊಳ್ಳುತ್ತಿದ್ದಾರೆ ಇತ್ಯಾದಿ ಕ್ಯಾತೆಯನ್ನು ತೆಗೆದು ಈ ಮಂದಿರದ ಉದ್ಘಾಟನೆಯ ಮಹೋತ್ಸವದಲ್ಲಿ ರಸಭಂಗಗೊಳಿಸುತ್ತಿರುವುದು ಬೇಸರದ ಸಂಗತಿ. ಇದಕ್ಕೆ ಇವರು ಕೊಡುವ ಶಾಸ್ತ್ರದ ಕಾರಣಗಳು ಬೇರೆ.”ಕ್ಷಾತ್ರವನ್ನು ಎದುರಿಟ್ಟುಕೊಂಡರೆ ಮಾತ್ರ, ಶಾಸ್ತ್ರಕ್ಕೆ ಬೆಲೆ ಇರುವುದು” ಎನ್ನುವ ವಿದ್ಯಾರಣ್ಯರ ಮಾತು ಇಲ್ಲಿ ಸ್ಮರಿಸಬೇಕು. ಕ್ಷಾತ್ರವನ್ನು ಬದಿಗಿಟ್ಟು ಶಾಸ್ತ್ರದಿಂದ ಮಠ ಸುಧಾರಿಸುವುದೇ ಕಷ್ಟ. ಅಂತದ್ದರಲ್ಲಿ ದೇಶಕ್ಕೆ ಸಂಬಂಧಪಟ್ಟ, ಅದರಲ್ಲೂ ನಮ್ಮ ಧರ್ಮದ ಆಚಾರ ವಿಚಾರಕ್ಕೆ ಬೆಲೆ ಬರುವಂತಹಾ ವಿಚಾರವನ್ನು ಶಾಸ್ತ್ರದ ದೃಷ್ಟಿಯಿಂದ ಹೀಗಳೆಯುವುದು ಅಥವಾ ದೂರುವುದು ಸುತಾರಾಂ ಓಪ್ಪಲು ಸಾಧ್ಯವಿಲ್ಲ.

ಗೃಹಪ್ರವೇಶ ಇತ್ಯಾದಿ ಸಣ್ಣ ಕಾರ್ಯಕ್ರಮದಲ್ಲೂ ಕೂಡ ಬಂದು ತಿಂದು ದೂರಿ ಹೋಗುವವರಿದ್ದಾರೆ. ಅಂತದ್ದರಲ್ಲಿ ವಿಶ್ವಕ್ಕೆ ಸಂಬಂಧಪಟ್ಟ ಈ ಮಹಾ ಕಾರ್ಯದಲ್ಲಿ ಹುಳುಕು ಹುಡುಕುವವರು ಬೇಕಾದಷ್ಟು ಜನ ಇದ್ದೇ ಇರುತ್ತಾರೆ. ಇದೇನು ದೊಡ್ಡ ತಲೆ ಬಿಸಿಯ ವಿಚಾರವಲ್ಲ. ಸೇತುವೆ ಕಟ್ಟುವಾಗ ಅಳಿಲು ಸಲ್ಲಿಸಿದ ಸೇವೆಯನ್ನು ಕೂಡ ಇವರಿಗೆ ಇಲ್ಲಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವುದನ್ನು ಹಿಂದೂ ಸಮಾಜ ಅರಿತುಕೊಳ್ಳಬೇಕು.

ಎಡ ಕೈಯಲ್ಲಿ ಕೊಡಬೇಕಾದದ್ದನ್ನು ಬಲ ಕೈಗೆ ತಂದರೆ ಮನಸ್ಸು ಬದಲಾಗಿ ಕೊಡುವುದನ್ನು ನಿಲ್ಲಿಸಿ ಬಿಡುತ್ತೇವೆ. ಯಾವುದೇ ಧರ್ಮವನ್ನು ಆಚರಿಸುವುದಾದರೂ ಆ ಕೂಡಲೇ ಆಚರಿಸಬೇಕು. ಕ್ಷಣ ವ್ಯತ್ಯಾಸವಾದರೂ ಧರ್ಮ ಕಾರ್ಯ ನಡೆಯದಿರುವ ಸಾಧ್ಯತೆಯಿದೆ.
ಗೃಹೀತ ಇವ ಕೇಶೇಷು
ಮೃತ್ಯುನಾ ಧರ್ಮಮಾಚರೇತ್ ||.
ಮರಣ ಸ್ಥಿತಿಯಲ್ಲಿದ್ದೇವೆ ಎಂದು ಯೋಚಿಸಿಕೊಂಡು ಧರ್ಮಕಾರ್ಯ ಮಾಡಬೇಕು.
ಯದ್ಭಾವಿ ತದ್ಭವತ್ಯೇವ
ಯದಭಾವ್ಯಂ ನತದ್ಭವೇತ್ ||.
ಯಾವುದು ಯಾವಾಗ ನಡೆಯಬೇಕೋ,ಅದು ನಡೆದೇ ನಡೆಯುತ್ತದೆ. ಯಾವುದು ನಡೆಯಬಾರದೋ ಅದು ನಡೆಯುವುದೇ ಇಲ್ಲ.ಇದು ವಿಧಿ ನಿಯಮ.

ವಶಿಷ್ಠಾದಿ ಋಷಿಗಳಿಗೆ ಸಮ್ಮತವಿದ್ದ ದಶರಥನಿಟ್ಟ ಮುಹೂರ್ತವನ್ನೇ ರಾಮ ತಿರುಗಿಸಿದ್ದಾನೆ. ಅದೇ ವನವಾಸದಿಂದ ತಿರುಗಿ ಬಂದ ರಾಮ ಆ ಕೂಡಲೇ ಪಟ್ಟಾಭಿಷೇಕಗೊಂಡಿದ್ದಾನೆ.”ವಿಂದ ಎನ್ನುವ ಮುಹೂರ್ತದಲ್ಲಿ ಸೀತೆಯನ್ನು ಅಪಹರಿಸಿದ ಕಾರಣದಿಂದ ರಾವಣ ಸಮೂಲ ನಾಶವಾಗುತ್ತಾನೆ”. ಹೀಗೆ ಮುಹೂರ್ತದ ಬಗ್ಗೆ ಜಟಾಯು ಹೇಳಿದ ಮಾತನ್ನು ವಾಲ್ಮೀಕಿಗಳು ದಾಖಲಿಸಿದ್ದಾರೆ. ಸ್ವರ್ಗಕ್ಕಿಂತಲೂ ಮಿಗಿಲಾದ ತನ್ನ ಜನ್ಮ ಭೂಮಿಯಲ್ಲಿ ಸ್ಥಾಪಿತವಾಗಲು ತನಗೆ ಯಾವುದೇ ಮುಹೂರ್ತದ ಅವಶ್ಯಕತೆಯೇ ಇಲ್ಲ ಎನ್ನುವುದನ್ನು ರಾಮ ತೋರಿಸಿಕೊಟ್ಟಿದ್ದಾನೆ. ಅದಕ್ಕಾಗಿಯೇ ವಾಲ್ಮೀಕಿಗಳು ಕೂಡ ಅದನ್ನು ದಾಖಲಿಸಲಿಲ್ಲ. ಈ ಎಲ್ಲಾ ವಿಚಾರವನ್ನು ನಮ್ಮ ಮಹಾಂತರಿಲ್ಲರೂ ಮರೆತಿದ್ದಾರೆಂದು ಕಾಣುತ್ತದೆ.

ಇನ್ನು ಎರಡು ಮೂರು ತಿಂಗಳಲ್ಲಿ ರಾಜಕೀಯದ ಮಹಾಸಮರ ನಡೆಯಲಿದೆ. ಅದು ಯುದ್ಧದ ಸನ್ನಿವೇಶಕ್ಕೆ ಹೊರತಲ್ಲ. ಯುದ್ಧಕಾಲಕ್ಕೆ ಎದುರಾಗಿ ಯಾವುದನ್ನು ಕೂಡ ಆ ಕೂಡಲೇ ನಡೆಸಬಹುದು ಎನ್ನುತ್ತದೆ ಶಾಸ್ತ್ರ.”ಮಧ್ಯಮಾಪದಿ ಮಧ್ಯಮಾ”.
ಒಂದು ವೇಳೆ ಆ ಸಮರದಲ್ಲಿ ಬಿಜೆಪಿ ಬರದೇ ಇದ್ದರೆ, ಅಂತಹಾ ಸಂಭವ ಖಂಡಿತಾ ಇಲ್ಲ. ಏಕೆಂದರೆ ಇದು ಬದಲಾವಣೆಯ ಪರ್ವಕಾಲ. ಆದರೂ ಊಹಿಸಿಕೊಳ್ಳುವುದಕ್ಕೇನು?. ಆಗ ಮಂದಿರವನ್ನು ಪೂರ್ತಿಯಾಗಿಸುವ ತಾಕತ್ತು ಈ ಧರ್ಮಶಾಸ್ತ್ರ ಪಂಡಿತರುಗಿದೆಯೇ.ಇಲ್ಲ ಎನ್ನುವುದಕ್ಕೆ ನಮ್ಮಲ್ಲಿ ಇಷ್ಟು ವರ್ಷಗಳ ಸಾಕ್ಷಿಯೇ ಇದೆ. ಸುಮ್ಮನೆ ಒಪ್ಪಿಕೊಂಡು ಭಾಗಿಯಾಗುವುದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹಿಂದೂ ಸಮಾಜವನ್ನು ಸಂದಿಗ್ಧಕ್ಕೆ ಸಿಲುಕಿಸುತ್ತಿದ್ದಾರೆ. ಮಾಧ್ಯಮಗಳಂತೂ ಬಕಪಕ್ಷಿಗಳಂತೆ ಕಾಯುತ್ತಾ,ಇಂತಹಾ ವಿಚಾರವನ್ನು ಮತ್ತೆ ಮತ್ತೆ ಕೆಣಕುತ್ತಿದ್ದಾರೆ.

ಇಷ್ಟೇ ಅಲ್ಲದೆ ಬಿಜೆಪಿ ತಮ್ಮ ಲಾಭಕ್ಕಾಗಿ ತುರಾತುರಿಯಲ್ಲಿ ಮಂದಿರ ಉದ್ಘಾಟಿಸುತ್ತಿದೆ ಎನ್ನುವ ಆರೋಪ ಬೇರೆ. ಸರಕಾರದ ತೆರಿಗೆ ಹಣವನ್ನು ಯಾವುದೇ ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸದೆ ಬಿಟ್ಟಿ ಭಾಗ್ಯಗಳಿಗೆ ಉಪಯೋಗಿಸಿ ಗೆದ್ದು ಬಂದವರಿಗೆ ಬಿಜೆಪಿಯ ರಾಜಕೀಯದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಇದೇ ಕಾರಣಕ್ಕೆ ರಾಮಮಂದಿರಕ್ಕೆ ಸರಕಾರದಿಂದ ಒಂದು ರೂಪಾಯಿ ಕೂಡ ಉಪಯೋಗವಾಗಿಲ್ಲ. ತೆರಿಗೆಯ ಪೂರ್ತಿ ಹಣವನ್ನು ತಮ್ಮ ರಾಜಕೀಯದಾಟಕ್ಕೆ ಉಪಯೋಗಿಸಿಕೊಂಡವರು ರಾಮ ಮಂದಿರದಲ್ಲಿ ರಾಜಕೀಯದ ಲಾಭದ ಬಗ್ಗೆ ಮಾತನಾಡುವ ಯೋಗ್ಯತೆಯೆಲ್ಲಿಂದ ಬಂತು.

ಬಿಜೆಪಿ ಮೊದಲಿನಿಂದಲೂ ರಾಮಮಂದಿರದ ವಿಚಾರವಾಗಿ ರಥಯಾತ್ರೆಯಿಂದ ಹಿಡಿದು ಬೇಕಾದಷ್ಟು ಹೋರಾಟಗಳನ್ನು ಮಾಡಿದೆ. ಈ ಹೋರಾಟಕ್ಕೆ ಸಿಕ್ಕಿದ ಜಯದಲ್ಲಿ ಬಿಜೆಪಿಯ ಪಾಲು ಖಂಡಿತಾ ಇದ್ದೇ ಇದೆ. ಆದ್ದರಿಂದ ಬಿಜೆಪಿಗೆ ಇದನ್ನು ಅನುಭವಿಸುವ ಅಧಿಕಾರ ಇಲ್ಲ ಎಂದು ಯಾರಿಗೂ ಹೇಳಲಾಗದು. ಬಿಜೆಪಿಯನ್ನು ದೂರಿ ಇದನ್ನು ಬಹಿಷ್ಕರಿಸುವವರಿಗೆ ಒಂದು ಚಾಲೆಂಜಿದೆ. ಮಥುರೆಗಾಗಿ ಹೋರಾಟ ಮಾಡಿ ಅಲ್ಲಿ ಕೃಷ್ಣಮಂದಿರವನ್ನು ಕಟ್ಟಿ ತೋರಿಸಲಿ. ಇವರಿಂದ ಸಾಧ್ಯವೇ ಇಲ್ಲ.ಕೇವಲ ಬೀಗ ತೆಗೆಸಿದ್ದನ್ನೆ ದೊಡ್ಡ ಸಾಧನೆ ಎಂದು ನೂರಾರು ಬಾರಿ ಹೇಳಿಕೊಳ್ಳುತ್ತಿರುವವರು ಒಂದು ವೇಳೆ ಕೃಷ್ಣ ಮಂದಿರವನ್ನು ಕಟ್ಟಿದರೆ ಅದೆಷ್ಟು ಬಾರಿ ಹೇಳಿಕೊಂಡಾರೋ ಎಂದು ನೀವೇ ಊಹಿಸಿಕೊಳ್ಳಿ. ಇದೊಂತರ ಕೈಗೆ ಸಿಕ್ಕದ ದ್ರಾಕ್ಷಿ ಹುಳಿ ಎಂದ  ಕಥೆಯಂತೆ..

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Santhosh Kumar Mudradi November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Santhosh Kumar Mudradi November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search