ಪಂಚಾಯತನ ಪೂಜಾ ಪದ್ದತಿ ತಿಳಿದಿದೆಯಾ?
ಪಂಚಾಯತನ ಪೂಜಾ ಪದ್ದತಿ.
ಇದು ಶಂಕರರು ತಮ್ಮ ಅನುಯಾಯಿಗಳಿಗೆ/ ಸನಾತನ ಧರ್ಮಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ..
ಶಂಕರರು ಭಾರತದಲ್ಲಿ ಜನಿಸಿದ ಕಾಲ ಹೇಗಿತ್ತು ಎಂದರೆ ಒಂದು ಕಡೆ ಭಾರತದಲ್ಲಿ ಬೌದ್ಧ ಪಂಥ ರಾರಾಜಿಸುತ್ತಿತ್ತು…..
ಮತ್ತೊಂದು ಕಡೆ ವೇದಗಳನ್ನು ಒಪ್ಪುವ ಅನೇಕರು ಕೂಡ ಅನೇಕ ಮತ ಪಂಥಗಳಲ್ಲಿ ಒಡೆದು ಹೋಗಿದ್ದರು…..
ಒಂದು ಪಂಥದವರನ್ನು ಕಂಡರೆ ಇನ್ನೊಂದು ಪಂಥದವರಿಗೆ ಆಗಿ ಬರುತ್ತಿರಲಿಲ್ಲ…. ಅಷ್ಟರ ಮಟ್ಟಿಗಿನ ದ್ವೇಷ….. ಒಬ್ಬರನ್ನು ಕಂಡರೆ ಕೊಲ್ಲುವಷ್ಟು ಮತ್ತೊಬ್ಬರಿಗೆ ಆಕ್ರೋಶ…. ಹೀಗಿತ್ತು ಪರಿಸ್ಥಿತಿ.
ಅನೇಕ ಮತ ಪಂಥಗಳು ಇದ್ದರೂ ಸುಮಾರು ಆರು ಮತಗಳು ಬಹಳ ಪ್ರಬಲವಾಗಿ ಇದ್ದವು…
ಆ ಆರು ಪಂಥಗಳು ಈ ಕೆಳಗಿನಂತೆ ಇವೆ.
1. ಶೈವ
2. ವೈಷ್ಣವ
3. ಗಾಣಪತ್ಯ.
4. ಶಾಕ್ತ.
5. ಸೌರ.
6. ಕೌಮಾರ
ಈ ಪಂಥದವರು ಶಿವ, ವಿಷ್ಣು, ಗಣಪತಿ, ಶಕ್ತಿ, ಸೂರ್ಯ ಮತ್ತು ಸುಬ್ರಮಣ್ಯ ನನ್ನ ತಮ್ಮ ಆರಾಧ್ಯ ದೇವತೆಯಾಗಿ ಹೊಂದಿದ್ದರು…. ಅಥವಾ ಆ ದೇವರುಗಳನ್ನೇ ಪರಬ್ರಹ್ಮ ಎಂದುಕೊಂಡಿದ್ದರು.
ಹೀಗಾಗಿ ಆಯಾ ಮತದವರಿಗೆ ತಮ್ಮ ದೇವರೇ ಹೆಚ್ಚು ಮತ್ತು ಇತರ ದೇವತೆಗಳು ತುಚ್ಛ… ಹೀಗಿತ್ತು ಶಂಕರರ ಕಾಲ.
ಈ ಪಂಥಗಳಲ್ಲಿ ಪ್ರಾದೇಶಿಕವಾಗಿ ಒಂದೊಂದು ಪಂಥ ಒಂದೊಂದು ಪ್ರದೇಶದಲ್ಲಿ ಪ್ರಬಲವಾಗಿತ್ತು….
ಈಗಲೂ ನೀವು ಅಸ್ಸಾಂ ಮತ್ತು ಬಂಗಾಳದಂತಹ ರಾಜ್ಯದಲ್ಲಿ ಶಕ್ತಿಯ ಆರಾಧನೆ ಪ್ರಬಲವಾಗಿ ಇರೋದನ್ನ ಕಾಣಬಹುದು.
ನಾನು ಮೊದಲೇ ಹೇಳಿದನಲ್ಲ… ಈ ಪಂಥದವರ ನಡುವೆ ಕೊಂದುಕೊಳ್ಳುವಷ್ಟು ದ್ವೇಷ ಇತ್ತು ಎಂದು.
ಈ ಮತ ಪಂಥಗಳ ನಡುವೆ ಸಮನ್ವಯತೆ ಸಾಧಿಸದೆ ಸನಾತನ ಹಿಂದೂ ಧರ್ಮ ಉಳಿಯುವ ಪ್ರಮೇಯವೇ ಇರಲಿಲ್ಲ.
ಏಕೆಂದರೆ ಒಂದು ಕಡೆ ಬೌದ್ಧರು ರಾರಾಜಿಸುತ್ತಿದ್ದರು…. ಮತ್ತೊಂದು ಕಡೆ ಈ ಮತ ಪಂಥದವರು ತಮ್ಮ ತಮ್ಮ ನಡುವೆಯೇ ಕೊಂದುಕೊಳ್ಳುವಷ್ಟು ದ್ವೇಷ ಬೆಳೆಸಿಕೊಂಡಿದ್ದರು..
ಹೀಗಾಗಿ ಸನಾತನ ಧರ್ಮವನ್ನು ಉಳಿಸಲು ಶಂಕರು ಮೊದಲು ತಮ್ಮ ಪ್ರಚಂಡ ಪ್ರತಿಭೆಯ ಮೂಲಕ ಬೌದ್ಧರನ್ನು ವಾದಗಳಲ್ಲಿ ಸೋಲಿಸಿದರು.
ಮತ್ತೊಂದು ಕಡೆ ಒಡೆದು ಹೋಗಿದ್ದ ಸನಾತನಿಗಳ ನಡುವೆ ಸಮನ್ವಯ ಸಾಧಿಸಲು ಒಂದು ಅದ್ಭುತ ಉಪಾಯ ಮಾಡಿದರು/ ಮಾರ್ಗ ಕಂಡು ಹಿಡಿದರು.
ಆ ಉಪಾಯವೇ ಪಂಚಾಯತನ ಪೂಜಾ ಪದ್ದತಿ….
ಈ ಪೂಜಾ ಪದ್ದತಿಯಲ್ಲಿ ಐದು ದೇವರನ್ನು ಒಂದೇ ಕಡೆ ಇಟ್ಟು… ಸಮಾನವಾಗಿ ಕಂಡು ಪೂಜೆ ಸಲ್ಲಿಸುವುದು…..
ಆ ಐದು ದೇವರುಗಳು ಯಾವುವೆಂದರೆ ಶಿವ, ವಿಷ್ಣು, ಸೂರ್ಯ, ಶಕ್ತಿ, ಗಣಪತಿ…. ಈ ಐದೂ ದೇವತೆಗಳನ್ನು ಒಟ್ಟಾಗಿ ಪೂಜಿಸುವ ಪದ್ದತಿಯೇ ಪಂಚಾಯತನ ಪೂಜಾ ಪದ್ದತಿ.
ಹೀಗೆ ಇದೊಂದು ಪೂಜಾ ಪದ್ದತಿಯನ್ನು ಜಾರಿಗೆ ತರುವ ಮೂಲಕ ಶಂಕರರು ಸನಾತನ ಧರ್ಮದ ಅಂದಿನ ಎಲ್ಲಾ ಪ್ರಬಲ ಮತಗಳ ನಡುವೆ ಅಂತರ ಕಡಿಮೆ ಮಾಡುವ, ಸಮನ್ವಯ ಸಾಧಿಸುವ ಒಂದು ಅದ್ಭುತ ಉಪಾಯವನ್ನು ಕಂಡು ಹಿಡಿದರು.
ಹೀಗೆ ಶಂಕರರು ಬೌದ್ಧರನ್ನು ವಾದಗಳಲ್ಲಿ ಗೆಲ್ಲೋದರ ಜೊತೆಗೆ ಅಖಂಡ ಭಾರತದಲ್ಲಿ ಮತ, ಪಂಥಗಳಲ್ಲಿ ಒಡೆದು ಹೋಗಿದ್ದ ಸನಾತನಿಗಳನ್ನೂ ಒಂದುಗೂಡಿಸಿ ಸಮನ್ವಯ ಸಾಧಿಸಿದರು
ಈಗ ಇನ್ನೊಂದು ವಿಚಾರಕ್ಕೆ ಬರೋಣ….ಶಂಕರ ಪರಂಪರೆಯ ಸನ್ಯಾಸಿಗಳಲ್ಲಿ ಅತಿ ಎತ್ತರದಲ್ಲಿ ಇರುವ ಆಮ್ನಾಯ ಪೀಠದ ಶಂಕರಾಚಾರ್ಯರುಗಳೇ ಮತ್ತೆ ಸಮಾಜವನ್ನು ಒಡೆಯುವ ಮಾತುಗಳನ್ನು ಆಡುತ್ತಿರುವುದು ಬಹಳ ನೋವಿನ ವಿಚಾರ.
ಇನ್ನು ಶಂಕರ ಪರಂಪರೆಯ ಬಗ್ಗೆ ಏನೇನೂ ತಿಳಿಯದೆ ಈಗ ಶಂಕರಾಚಾರ್ಯರು ತಮಗೆ ಅನುಕೂಲವಾಗುವ ಸ್ಟೇಟ್ ಮೆಂಟ್ ನೀಡಿದರು ಅನ್ನೋ ಕಾರಣಕ್ಕೆ ಶಂಕರ ಪರಂಪರೆಯ ಬಗ್ಗೆ ವಿಶೇಷ ಒಲವು ತೋರುತ್ತಿರುವವರಿಗೆ ನಮಸ್ಕಾರ.
ರಾಮಾನಂದಿ ಪಂಥದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ… ಆದರೆ ನನ್ನ ಸೀಮಿತ ಅಧ್ಯಯನದಲ್ಲಿ ನನಗೆ ತಿಳಿದಿರುವಂತೆ ಇದೊಂದು ಶ್ರೀ ಸಂಪ್ರದಾಯದ ಪಂಥ…. ಶ್ರೀ ಪಂಥ ಎಂದರೆ ವಿಷ್ಣುವಿನಷ್ಟೇ ಶ್ರೀ ಎಂದರೆ ಲಕ್ಷ್ಮಿಗೂ ಪ್ರಾಧಾನ್ಯತೆ ಕೊಟ್ಟ ಪರಂಪರೆ ಇದು..
ಹೀಗಾಗಿಯೇ ಶ್ರೀ ಸಂಪ್ರದಾಯದವರು ತಾವು ಧರಿಸುವ ನಾಮದಲ್ಲೂ ಲಕ್ಷ್ಮಿಗೆ ಸ್ಥಾನ ನೀಡಿದ್ದಾರೆ ಹಾಗಾಗಿ ಅವರು ಎರಡು ಬಿಳಿ ನಾಮಗಳ ಮಧ್ಯೆ ಲಕ್ಷ್ಮಿಯ ಸಂಕೇತವಾಗಿ ಕೆಂಪು ನಾಮವನ್ನೂ ಧರಿಸುವುದು.
ಇನ್ನು ರಾಮಾನಂದಿಗಳು ಶ್ರೀ ರಾಮನನ್ನೇ ತಮ್ಮ ಸಂಪ್ರದಾಯದ ಮೂಲ ಪುರುಷ ಪರಬ್ರಹ್ಮ ಎಂದು ನಂಬಿರುವವರು… ರಾಮನ ಬಗ್ಗೆ ಹೀಗೆ ವಿಶೇಷ ಭಕ್ತಿ, ಶ್ರದ್ದೆಗಳನ್ನು ಹೊಂದಿರುವ ರಾಮಾನಂದಿ ಸಂಪ್ರದಾಯದವರನ್ನು ಹೀಗಾಗಿಯೇ ಶ್ರೀ ರಾಮನ ಅರ್ಚನೆ, ಉಪಾಸನೆಗಾಗಿ ಆಯ್ಕೆ ಮಾಡಲಾಗಿದೆ ಅನ್ನೋದು ನನ್ನ ಬಲವಾದ ನಂಬಿಕೆ.
Leave A Reply