ಬ್ಲೂವೆಲ್ ಪ್ರವೇಶ ಸುಲಭ, ಹೊರ ಬರುವುದು ಅಸಾಧ್ಯ
ಚೆನ್ನೈ: ಬ್ಲೂವೆಲ್ ಗೇಮ್ ಬರೀ ಆಟವಲ್ಲ ವಿನಾಶಕಾರಿ. ನೀವು ಇಲ್ಲಿ ಸುಲಭವಾಗಿ ಪ್ರವೇಶಿಸಬಹುದು ಆದರೆ ಹೊರ ಬರುವುದು ಸಾಧ್ಯವೇ ಇಲ್ಲ ಹೀಗೆ ಡೆತ್ ನೋಟ್ ಬರೆದಿಟ್ಟು ಮದುರೈನಲ್ಲಿ 19 ವರ್ಷದ ವಿಘ್ನೇಶ್ ಆತ್ಮಹತ್ಯೆೆಗೆ ಶರಣಾಗಿದ್ದಾನೆ.
ಈ ಮೂಲಕ ಮುಂಬೈ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ನಂತರ ಆನ್‌ಲೈನ್ ಗೇಮ್ ಬ್ಲೂ ವೆಲ್ ಗೇಮ್ ತಮಿಳುನಾಡಿನಲ್ಲೂ 19 ವರ್ಷದ ಯುವಕನನ್ನು ಬಲಿ ಪಡೆದಿದೆ. ಮದುರೈನ ದ್ವಿತೀಯ ಬಿಕಾಂ ವಿದ್ಯಾಾರ್ಥಿ ಜೆ. ವಿಘ್ನೇಶ ಬ್ಲೂವೆಲ್ ಗೇಮ್‌ಗೆ ಬಲಿಯಾಗಿದ್ದಾಾನೆ. ಬುಧವಾರ ರಾತ್ರಿ ಮನೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೈ ಮೇಲೆ ಬ್ಲೂವೇಲ್ ಗೇಮ್‌ನ ಚಿತ್ರವನ್ನು ಹರಿತವಾದ ವಸ್ತುವಿನಿಂದ ಬಿಡಿಸಿಕೊಂಡಿದ್ದಾನೆ.
ಯುವಕನ ಆತ್ಮಹತ್ಯೆಗೆ ಬ್ಲೂವೆಲ್ ಗೇಮ್ ಕಾರಣ. ಗೇಮ್ ಕೊನೆ ಹಂತಕ್ಕೆ ಹೋದಾಗ ಯುವಕ ಕೈ ಮೇಲೆ ಚಿತ್ರವನ್ನು ಬಿಡಿಸಿಕೊಂಡಿದ್ದಾನೆ. ಗೇಮ್ ನಿಯಮದ ಪ್ರಕಾರ ನೀಡುವ ಪ್ರತಿ ಟಾಸ್‌ಕ್ ಮುಗಿದ ನಂತರ, ಹೊಸ ಟಾಸ್‌ಕ್ ನೀಡಲಾಗುತ್ತದೆ. 50 ದಿನದ ಗೇಮ್‌ನಲ್ಲಿ ಕೊನೆ ದಿನಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ ಎಂದು ಮದುರೈ ಎಸ್‌ಪಿ ಮಣಿವಣ್ಣನ್ ತಿಳಿಸಿದ್ದಾರೆ.
ಯಾರಿಗಾದರೂ ತಮ್ಮ ಮಕ್ಕಳ ಕೈ ಮೇಲೆ ಗಾಯದ ಅಥವಾ ವಿಚಿತ್ರವಾದ ಚಿತ್ರಗಳು ಕಂಡು ಬಂದರೆ ಕೂಡಲೇ ಪರಿಶೀಲಿಸಬೇಕು. ಮತ್ತು ಮಕ್ಕಳ ಚಲನವಲನಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಮಣಿವಣ್ಣನ್ ತಿಳಿಸಿದ್ದಾಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಘ್ನೇಶ ತಾಯಿ ‘ನಾನು ಆತನ ಕೈ ಮೇಲಿನ ಚಿತ್ರದ ಕುರಿತು ಪ್ರಶ್ನಿಸಿದ್ದೆ. ಏನು ಇಲ್ಲಾ ಅಮ್ಮಾ ನನಗೆ ಏನು ಆಗಲ್ಲ ಎಂದು ಹೇಳಿದ್ದ. ಆದರೆ ವಿಧಿ ಆತನನ್ನು ಕಿತ್ತುಕೊಂಡು ಬಿಟ್ಟಿದೆ ಎಂದು ಆಕ್ರಂದನ ತೋಡಿಕೊಂದ್ದಾರೆ.
Leave A Reply