ಮೋದಿ ಎಸ್ ಪಿಜಿ ಕಮಾಂಡೊಗಳು ಕೂಡ ಧೋತಿಯಲ್ಲಿ!
ಭಾರತದ ಪ್ರಧಾನ ಮಂತ್ರಿಯವರು ಮೊನ್ನೆಯಷ್ಟೇ ಕೇರಳ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅವರು ಅಲ್ಲಿ ತ್ರಿಶೂರ್ ನಲ್ಲಿರುವ ಶ್ರೀ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇರಳದ ದೇವಸ್ಥಾನಗಳಲ್ಲಿ ಗಂಡಸರು ಪ್ರವೇಶಿಸುವಾಗ ಅಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶವಿದೆ. ಸಾಂಪ್ರದಾಯಿಕ ಉಡುಗೆಗಳು ಅಲ್ಲಿ ಕಡ್ಡಾಯ. ಅದು ಧೋತಿ ಮತ್ತು ಶಾಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಧರಿಸಿದರೆ ಮಾತ್ರ ಪ್ರವೇಶ ಸಾಧ್ಯ. ಮೋದಿಯವರು ಆಯಾ ಊರುಗಳಿಗೆ ಹೋಗುವಾಗ ಅಲ್ಲಿನ ಸಂಸ್ಕೃತಿಗೆ ತಕ್ಕಂತಹ ಉಡುಗೆ – ತೊಡುಗೆಗಳನ್ನು ಧರಿಸುವುದು ಸಾಮಾನ್ಯ. ಅದನ್ನು ನಾವು ವಿವಿಧ ಫೋಟೋಗಳಲ್ಲಿ, ದೃಶ್ಯಗಳಲ್ಲಿ ಕಾಣಬಹುದು.
ಆದರೆ ಮೋದಿಯವರು ದೇಶ, ವಿದೇಶಗಳ ಯಾವುದೇ ಸ್ಥಳದಲ್ಲಿ ಪ್ರವಾಸದಲ್ಲಿದ್ದಾಗಲೂ ಅವರ ಉಡುಗೆ ತೊಡುಗೆಗಳಲ್ಲಿ ಎಂತಹ ವೈವಿದ್ಯತೆಗಳಿದ್ದರೂ ಅವರ ಸುರಕ್ಷತೆಗಾಗಿ ಇರುವ ವಿಶೇಷ ಸುರಕ್ಷತಾ ದಳದ (ಎಸ್ ಪಿಜಿ) ಕಮಾಂಡೊಗಳ ಡ್ರೆಸ್ ಕೋಡ್ ಮಾತ್ರ ಒಂದೇ ತೆರನಾಗಿರುತ್ತದೆ. ಆದರೆ ಶ್ರೀ ಗುರುವಾಯೂರ್ ನಲ್ಲಿ ಹಾಗೆ ಆಗುವ ಚಾನ್ಸ್ ಇರಲಿಲ್ಲ. ಯಾಕೆಂದರೆ ಅಲ್ಲಿ ಶಿಸ್ತೆಂದರೆ ಶಿಸ್ತು. ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಅವರು ದೇವಸ್ಥಾನ ಪ್ರವೇಶಿಸುವಾಗ ಧೋತಿ, ಬಿಳಿ ಶಾಲ್ ಧರಿಸಿಯೇ ಬರಬೇಕಾಗುತ್ತದೆ.
ಇದನ್ನೆಲ್ಲಾ ಅರಿತಿರುವ ಮೋದಿಯವರು ದೇವಸ್ಥಾನದ ಒಳಗೆ ತಮ್ಮ ಸುರಕ್ಷತೆಗೆ ಬರುವ ಕಮಾಂಡೊಗಳಿಗೆ ಧೋತಿ, ಶಾಲು ಧರಿಸಲು ಸೂಚಿಸಿದ್ದಾರೆ. ಯಾಕೆಂದರೆ ದೇವಸ್ಥಾನದ ಒಳಗೆ ಮೋದಿಯವರನ್ನು ಮಾತ್ರ ಬಿಟ್ಟು ಕಮಾಂಡೊಗಳು ಹೊರಗೆ ನಿಲ್ಲುವಂತಿಲ್ಲ. ಮೋದಿ ಎಲ್ಲಿರುತ್ತಾರೋ ಅಲ್ಲಿ ಆಸುಪಾಸಿನಲ್ಲಿ ಕಮಾಂಡೊಗಳು ಇರಬೇಕು. ಒಳಗೆ ಬರಲು ಧೋತಿ, ಶಾಲು ಧರಿಸಲ್ಲ ಎಂದು ಎಸ್ ಪಿಜಿ ಕಮಾಂಡುಗಳು ಹೇಳುವಂತಿಲ್ಲ. ಯಾಕೆಂದರೆ ಮೋದಿಯವರ ಸುರಕ್ಷೆ ಮುಖ್ಯ. ಆದ್ದರಿಂದ ಕಮಾಂಡೊಗಳು ತಮ್ಮ ಡ್ರೆಸ್ ಕೋಡ್ ಧರಿಸದೇ ಧೋತಿ, ಶಾಲು ಧರಿಸಿ ಮೋದಿಯವರೊಡನೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೋದಿಯವರ ಸುರಕ್ಷೆ ಕೂಡ ಪಾಲಿಸಿದಂತೆ ಆಯಿತು, ಡ್ರೆಸ್ ಕೋಡ್ ಕೂಡ ದೇವಸ್ಥಾನದ ನಿಯಮವನ್ನು ಪಾಲಿಸಿದಂತೆ ಆಯಿತು.
Leave A Reply