ಯಾವ ರೀತಿಯಲ್ಲಿ ಭಾರತದ ಭವಿಷ್ಯದ ಬದಲಾವಣೆ?
ನನ್ನ ಮೂರನೆಯ ಅವಧಿಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಭಾರತದ ಮುಂದಿನ ಒಂದು ಸಾವಿರ ವರ್ಷಗಳ ಕಾಲದ ವ್ಯವಸ್ಥೆಗೆ ಭದ್ರವಾದ ಬುನಾದಿಯನ್ನು ಒದಗಿಸುತ್ತದೆ. ಹೀಗೆ ಮೋದಿಯವರು ಘೋಷಿಸಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಈ ಮನುಷ್ಯನಿಗೆ ಯಾವುದೇ ಮಾತನ್ನು ಗಾಳಿಯಲ್ಲಿ ತೇಲಿ ಬಿಡುವ ಹಾಗೆ ಮಾತಾಡಿ ಗೊತ್ತೇ ಇಲ್ಲ. ಹೇಳದೆ ಮಾತನಾಡುವ ವ್ಯಕ್ತಿತ್ವದ ಮೋದಿ ಹೇಳಿದರಂತೂ ಮಾಡದೆ ಬಿಡುವುದೇ ಇಲ್ಲ. ಇದು ಈಗಾಗಲೇ ಪ್ರಪಂಚಕ್ಕೆ ಗೊತ್ತಾಗಿರುವ ಸಂಗತಿ. ಯಾವ ರೀತಿಯಲ್ಲಿ ಭಾರತದ ಭವಿಷ್ಯದ ಬದಲಾವಣೆಯನ್ನು ತರುತ್ತಾರೆ ಎನ್ನುವುದನ್ನು ಹೇಳಲಿಲ್ಲ. ಆದರೆ ತರುವುದಂತೂ ಸತ್ಯ. ಅದು ಕೂಡ ತಾನೇ ಆ ನಿರ್ಣಯವನ್ನು ತೆಗೆದುಕೊಳ್ಳುತ್ತೇನೆ ಎಂದು ಕೂಡ ಹೇಳಲಿಲ್ಲ. ಅಂತಹ ವ್ಯವಸ್ಥೆಯನ್ನು ಮಾಡುತ್ತೇನೆ ಎಂದದ್ದು. ಹೀಗೆ ಒಗಟಿನ ಮೂಲಕ ಗುರಿಯ ಬಗ್ಗೆ ಹೇಳಿದ್ದಾರೆ ದಾರಿಯ ಬಗ್ಗೆ ಹೇಳಲಿಲ್ಲ.
ಶ್ರೀರಾಮ ಹಾಗೂ ಶ್ರೀ ಕೃಷ್ಣ ಭಗವಂತನ ಏಳು ಮತ್ತು ಎಂಟನೇ ಅವತಾರ ಎಂದು ಸನಾತನ ಧರ್ಮದ ನಂಬಿಕೆ. ರಾಮನ ನಡೆ, ರಾಮನ ವ್ಯಕ್ತಿತ್ವ, ರಾಮನ ಆದರ್ಶ ಸಮಾಜಕ್ಕೆ ದಾರಿದೀಪವಾಗಿ ನಿಲ್ಲುತ್ತದೆ. ಸನಾತನ ಧರ್ಮದ ಆದರ್ಶ ಪುರುಷನಾಗಿ ಇತಿಹಾಸದುದ್ದಕ್ಕೆ ಶೋಭಿಸುವ ಮಹಾನ್ ಚೇತನ. ಭಗವಂತ ತನ್ನ ವ್ಯಕ್ತಿತ್ವದ ಗುಣವನ್ನು ರಾಮನ ಮೂಲಕ ತೋರಿಸಿಕೊಟ್ಟಿದ್ದಾನೆ. ಧರ್ಮವೇ ಮೂರ್ತಿಯಾಗಿ ಬಂದಂತೆ ರಾಮನನ್ನು ದೇಶ ಕಂಡಿದೆ. ಆದರೆ ತಾನು ಪರಮ ಧಾರ್ಮಿಕ ಹಾಗೂ ಸನಾತನ ಧರ್ಮ ತನ್ನಿಂದ ಉಳಿಯಬೇಕು ಎನ್ನುವ ಧ್ಯೇಯ ಹಾಗೂ ಉದ್ದೇಶ ರಾಮನ ಬದುಕಿನಲ್ಲಿ ನಾವು ಕಾಣುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿ ತೋರಿಸಿ ಇತಿಹಾಸವಾಗಿ ನಿಂತ. ಧರ್ಮದ ನಡೆ ಹಾಗೂ ತಪಸ್ಸು ಮತ್ತು ದೇವರ ಕಾರುಣ್ಯ ಹಾಗೂ ರಕ್ಷಿಸುತ್ತಾರೆ ಎನ್ನುವ ವಿಶ್ವಾಸ ರಾಮನ ಚರಿತ್ರೆಯಲ್ಲಿ ನಾವು ಕಾಣುತ್ತೇವೆ.
ಇದರ ತದ್ವಿರುದ್ಧ ಗುಣ ಕೃಷ್ಣನಲ್ಲಿ ಕಾಣುತ್ತದೆ. ತನ್ನ ಬದುಕಿನಲ್ಲಿ ಸನಾತನ ಧರ್ಮಕ್ಕೆ ಹಿಂದೂ ಸಮಾಜಕ್ಕೆ ಮಹತ್ವಪೂರ್ಣವಾದ ಬದಲಾವಣೆಯನ್ನು ತಂದುಕೊಟ್ಟ ಮಹಾನ್ ಚೇತನ ಶ್ರೀ ಕೃಷ್ಣ. ಭಾರತವಾಗಲಿ ಭಗವದ್ಗೀತೆಯಾಗಲಿ ಕೃಷ್ಣ ಕೊಡದಿದ್ದರೆ ಇವತ್ತು ಭಾರತ ಇಷ್ಟು ಭದ್ರವಾಗಿ ಇರುತ್ತಿರಲಿಲ್ಲ.ಕಪಟಿಯನ್ನು ಕಪಟದಿಂದಲೇ ಕೊಲ್ಲಬೇಕು.ತನ್ನವರಿಗಾಗಿ ಹಾಗೂ ತನ್ನ ಸಮಾಜಕ್ಕಾಗಿ ತನ್ನತನ ಎನ್ನುವುದು ಎಳ್ಳಿನಷ್ಟು ಇರಬಾರದು. ಧರ್ಮಸಂಸ್ಥಾಪನೆಗಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಬೇಕು. ತನ್ನ ಧರ್ಮದ ಉಳಿವಿಕೆಗಾಗಿ ತಾನು ಏನು ಕೂಡ ಮಾಡಲು ಸಿದ್ಧನಿರಬೇಕು. ತನ್ನ ಧರ್ಮವನ್ನು ಬಿಡುವುದಕ್ಕಿಂತ ಜೀವ ಬಿಡುವುದು ಒಳ್ಳೆಯದು. ಧರ್ಮದ ಹಾಗೂ ದೇಶದ ಮುಂದೆ ತಾನೇನೂ ಅಲ್ಲ. ಹೀಗೆ ದೇಶಕ್ಕೆ ಹಾಗೂ ಧರ್ಮಕ್ಕೆ ಭದ್ರವಾದ ಬುನಾದಿಯನ್ನು ಕಟ್ಟಿ, ಅದರಂತೆ ತಾನು ಕೂಡ ನಡೆದು ತೋರಿಸಿಕೊಟ್ಟು ಇತಿಹಾಸವಾದದ್ದು ಶ್ರೀಕೃಷ್ಣ ಪರಮಾತ್ಮ.ಈತನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಧರ್ಮದ ವಿಚಾರವೇ ಇರುವುದು. ಹಿಂದೂ ಧರ್ಮ ಒಂದು ವೇಳೆ ಕೃಷ್ಣ ಬರದಿದ್ದರೆ ಇಷ್ಟು ಸಾವಿರ ವರ್ಷ ಖಂಡಿತ ನಿಲ್ಲುತ್ತಿರಲಿಲ್ಲ.
ನಮ್ಮ ದೇಶದಲ್ಲಿ ಇತಿಹಾಸ ಮತ್ತೆ ಮತ್ತೆ ಮರು ಕಳಿಸುತ್ತದೆ. ಭಗವಂತ ಮತ್ತೆ ಮತ್ತೆ ಇಲ್ಲಿ ಹುಟ್ಟಿ ಬರುತ್ತಾನೆ. ಸನಾತನ ಧರ್ಮದ ರಕ್ಷಣೆಯನ್ನು ಧರ್ಮವೇ ಮೂರ್ತಿರೂಪವಾಗಿ ಬಂದು ಮಾಡಿಕೊಳ್ಳುತ್ತದೆ ಎನ್ನುವುದು ನಮ್ಮ ನಂಬಿಕೆ. ಹಲವಾರು ವೈಶಿಷ್ಟ್ಯಗಳಲ್ಲಿ ಇವು ಕೂಡ ಒಂದು. ಹೇಗೆ ರಾಮಾವತಾರ ಕಳೆದು ಕೃಷ್ಣಾವತಾರವಾಗಿ ಆ ಮೂಲಕ ಸನಾತನ ಧರ್ಮ ಗಂಗೆಯಂತೆ ಶುದ್ಧ ನಿರ್ಮಲವಾಗಿ ಹರಿಯುವುದು ಬರುತ್ತಿದೆಯೋ ಅದೇ ರೀತಿಯಾಗಿ ಇವತ್ತು ರಾಮಾವತಾರದಿಂದ ಕೃಷ್ಣಾವತಾರಾದ ತನಕದ ನಮ್ಮ ಇತಿಹಾಸ ಮತ್ತೊಮ್ಮೆ ನಾವು ಕಾಣಲಿದ್ದೇವೆ. ರಾಮ-ಕೃಷ್ಣರ ವ್ಯಕ್ತಿತ್ವಗಳು ನಮ್ಮ ಮುಂದೆ ಕಾಣಲಿದೆ. ಆದರ್ಶವಾಗಿ ರಾಮ ದಾರಿ ತೋರಿಸಿದ, ಕೃಷ್ಣ ಆ ದಾರಿಯಿಂದ ಸಾಗಿ ಬಂದು ಸನಾತನ ಧರ್ಮದ ವಿಶ್ವರೂಪವಾಗಿ ನಿಂತ.
ಬಿಜೆಪಿಯ ಈ ಹಿಂದಿನವರು ಮಾಡಿದ ತಪಸ್ಸಿನ ಫಲವಾಗಿ ಮೋದಿಯವರು ರಾಮಾವತಾರವನ್ನು ತೋರಿಸಿದ್ದಾರೆ. ಮುಂದಿನ ಕಾಲದಲ್ಲಿ ಈ ದೇಶ ಹಿಂದೂ ರಾಷ್ಟ್ರವಾಗಿ ಮುಂದಿನ ಸಾವಿರ ವರ್ಷಗಳಷ್ಟು ಕಾಲ ಸನಾತನ ಧರ್ಮದ ವೈಭವ ಮತ್ತೊಮ್ಮೆ ಮರುಕಳಿಸಿ ಪುಟಿದೆದ್ದು ನಿಲ್ಲಲಿದೆ. ಅಂತಹ ವ್ಯವಸ್ಥೆಯನ್ನು ನಾವು ಮೋದಿ ಅವರ ಮೂರನೇ ಬಾರಿಯಲ್ಲಿ ಕಾಣಲಿದ್ದೇವೆ. ಇದು ನಿಶ್ಚಯ. ಈ ದೇಶ ಹಿಂದೂ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ. ಈ ದೇಶದಲ್ಲಿರಲು ಪ್ರತಿಯೊಬ್ಬನೂ ಅದೇ ಜಾತಿ ಅದೇ ಮತದಲ್ಲಿದ್ದು ಹಿಂದೂಸ್ತಾನಿಯರಾಗಿದ್ದರೆ ಸಾಕು. ಆ ಮಟ್ಟಿಗೆ ತಂದು ನಿಲ್ಲಿಸಲಿದೆ ಮೋದಿಯ ಮೂರನೆಯ ಅವಧಿ.
ಹಾಗೆ ಕೊನೆಯದಾಗಿ ಮತ್ತೊಂದು ಮಾತು. ಅಯೋಧ್ಯೆಯ ರಾಮನಿಗೆ ಬೆನ್ನೆಲುಬಾಗಿ ನಿಂತದ್ದು ಕರ್ನಾಟಕದ ಕಪಿಗಳು. ಹಾಗೆಯೇ ಇವತ್ತು ಅಯೋಧ್ಯೆಯ ರಾಮಮಂದಿರಕ್ಕೆ ಕರ್ನಾಟಕದ ಬೇಕಾದಷ್ಟು ಕೊಡುಗೆಗಳು ಸಂದುತ್ತಿವೆ.ಉತ್ತರ ಪ್ರದೇಶ ದೇಶಕ್ಕೆ ರಾಮನನ್ನು ಕೃಷ್ಣನನ್ನು ಕೊಟ್ಟ ರಾಜ್ಯ. ಗುಜರಾತಿಯಾಗಿದ್ದರೂ ಕೂಡ ದೇಶಕ್ಕೆ ಮೋದಿ ಪ್ರಧಾನಿಯಾಗಿ ಬಂದದ್ದು ಉತ್ತರ ಪ್ರದೇಶದ ಕಾಶಿಯಿಂದ. ನಮ್ಮ ನೆಲದಲ್ಲಿ ಕೇವಲ ಭಗವಂತ ಅಥವಾ ಧರ್ಮ ಪುನರಾವರ್ತನೆಗೊಳ್ಳುವುದು ಮಾತ್ರವಲ್ಲ ಈ ಮಣ್ಣು ಕೂಡ ಮತ್ತೆ ಮತ್ತೆ ತನ್ನನ್ನು ಪುನರಾವರ್ತನೆಗೊಳಿಸುತ್ತದೆ ಎನ್ನುವುದಕ್ಕೆ ಕೇವಲ ಇದೊಂದು ಸಾಕ್ಷಿ ಅಷ್ಟೇ. ಉತ್ತರ ಪ್ರದೇಶದ ಇನ್ನೊಂದು ಕಿಡಿ ಕೃಷ್ಣನಂತೆ ಬಂದು ಸನಾತನ ಧರ್ಮವನ್ನು ಮುಂದಿನ ಸಾವಿರ ವರ್ಷದ ಕಾಲ ಮತ್ತೊಮ್ಮೆ ಪ್ರಜ್ವಲಿಸುವಂತೆ ಮಾಡಲಿದೆ.ಈ ಮಣ್ಣು, ಈ ಧರ್ಮ, ಈ ದೇಶ ಮತ್ತೆ ಮತ್ತೆ ತನ್ನನ್ನು ತಾನು ಉಳಿಸಿಕೊಂಡು ಬೆಳೆಸಿಕೊಂಡು ಸಾಗುತ್ತಲೇ ಇರುತ್ತದೆ..
Leave A Reply